ಪೃಥ್ವಿರಾಜ್ ಸುಕುಮಾರನ್ ಇಷ್ಟದ 5 ಸಿನಿಮಾಗಳಿವು; ಒಂದು ಕನ್ನಡ ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ

ಮಲಯಾಳಂ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. 'ಸಲಾರ್' ಬಳಿಕ ರಾಜಮೌಳಿ ನಟನೆಯ 'ವಾರಣಾಸಿ' ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಕುಂಭ ಪಾತ್ರದಲ್ಲಿ ಅವರನ್ನು ನೋಡಲು ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಮಾಲಿವುಡ್‌ನಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಪೃಥ್ವಿ ನಟಿಸುತ್ತಿದ್ದಾರೆ.

'ಪಲ್ಲಿಚಟ್ಟಂಬಿ' ಚಿತ್ರದಲ್ಲಿ ಕೊನೆಯದಾಗಿ ಪೃಥ್ವಿರಾಜ್‌ ಸುಕುಮಾರನ್ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಇನ್ನುಳಿದಂತೆ ಈ ವರ್ಷ ಅವರು ನಟಿಸಿದ ಮತ್ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. ಎರಡ್ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದು 'ವಾರಣಾಸಿ' ಬಹಳ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ The Hollywood Reporter India ಯೂಟ್ಯೂಬ್ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ತಮ್ಮ ನೆಚ್ಚಿನ 5 ಸಿನಿಮಾಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಅದರಲ್ಲಿ ಕನ್ನಡದ 'ಓಂ' ಸಿನಿಮಾ ಕೂಡ ಇದೆ.

Prithviraj Sukumaran Reveals His Top 5 Favorite Films Kannada Classic Om Makes the List

10ಕ್ಕೆ 10 ಅಂಕ ಕೊಟ್ಟು IMDb ವಾಚ್ ಲಿಸ್ಟ್ ಅಪ್ಡೇಟ್ ಮಾಡುವುದಾದರೆ ನೀವು ಹೆಸರಿಸುವ ಟಾಪ್ 5 ಸಿನಿಮಾಗಳು ಯಾವುದು ಎಂದು ಪೃಥ್ವಿರಾಜ್‌ಗೆ ಪ್ರಶ್ನೆ ಎದುರಾಗಿದೆ. ನಾನು 5 ಭಾಷೆಗಳಲ್ಲಿ 5 ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಉತ್ತರಿಸಿದ್ದಾರೆ.

ದಿವಾರ್

ಹಿಂದಿಯಲ್ಲಿ 'ದಿವಾರ್' ಚಿತ್ರಕ್ಕರ 10ಕ್ಕೆ 10 ಅಂಕ ಕೊಡ್ತೀನಿ. ಎಲ್ಲಾ ವಿಭಾಗಗಳಲ್ಲಿ ಅದ್ಭುತ ಸಿನಿಮಾ. ಎಲ್ಲಾ ವಿಭಾಗದ ಕೆಲಸವೂ ಸೊಗಸಾಗಿದೆ. ನಾನು ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿ. ಹಾಗಾಗಿ ಆ ಚಿತ್ರವನ್ನು ಮರೆಯೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ಬಾಹುಬಲಿ- 1

ಇನ್ನು ತೆಲುಗಿಗೆ ಬಂದ್ರೆ 'ಬಾಹುಬಲಿ-1' ನನ್ನ ಆಲ್‌ಟೈಮ್ ಫೇವರಿಟ್. ನನ್ನನ್ನು ಸೇರಿದಂತೆ ಸಾಕಷ್ಟು ಫಿಲ್ಮ್ ಮೇಕರ್ಸ್ ಕಣ್ಣು ತೆರೆಸಿದ ಸಿನಿಮಾ ಇದು. ಭಾರತೀಯ ಚಿತ್ರರಂಗದಲ್ಲಿ ಲ್ಯಾಂಡ್‌ಮಾರ್ಕ್ ಸಿನಿಮಾ.

ಓಂ

ಕನ್ನಡದಲ್ಲಿ ಉಪೇಂದ್ರ ಸರ್ ಬಹಳ ಅದ್ಭುತವಾಗಿ ಬರೆದು ನಿರ್ದೇಶಿಸಿದ ಸಿನಿಮಾ 'ಓಂ' . ಇನ್ನು ಒನ್ ಅಂಡ್ ಓನ್ಲಿ ಶಿವರಾಜ್‌ಕುಮಾರ್ ಸರ್ ಹೀರೊ ಆಗಿ ನಟಿಸಿರುವುದು ಅದ್ಭುತ. ನನ್ನ ಆಲ್‌ ಟೈಮ್ ಫೇವರಿಟ್ ಸಿನಿಮಾ ಅದು.

ತೇವರ್ ಮಗನ್

ಕಮಲ್ ಅದ್ಭುತ ಬರವಣಿಗೆ, ನಟನೆ, ಭರತನ್ ಅವರ ನಿರ್ದೇಶನ, ಪಿ. ಸಿ ಶ್ರೀರಾಮ್ ಸರ್ ಛಾಯಾಗ್ರಹಣ, ಶಿವಾಜಿ ಸರ್ ನಟನೆ, ಒಟ್ಟಾರೆ ಅದ್ಭುತ ಕಲಾವಿದರೆಲ್ಲಾ ಒಂದೆಡೆ ಸೇರಿ ಮಾಡಿರುವ ಸಿನಿಮಾ ಅದು. ಇವತ್ತಿಗೂ ಆ ಸಿನಿಮಾ ಮುಂದೆ ಯಾವುದೇ ಸಿನಿಮಾ ಇಲ್ಲ ಎನಿಸುತ್ತದೆ.

ಭೂತಕನ್ನಡಿ

ಮಲಯಾಳಂನಲ್ಲಿ ಸಾಕಷ್ಟು ಇಷ್ಟದ ಸಿನಿಮಾಗಳಿವೆ. ಈ ಹಿಂದೆ ನಾನು 'ಭೂತಕನ್ನಡಿ' ಸಿನಿಮಾ ಹೆಸರು ತೆಗೆದುಕೊಳ್ಳುವುದು ಮರೆತ್ತಿದ್ದೆ. ಲೋಹಿತದಾಸ್ ಸರ್ ಅವರ ಮೊದಲ ನಿರ್ದೇಶನದ ಸಿನಿಮಾ ಇದು. ಮಮ್ಮುಟ್ಟಿ ಅವರ ಅಭಿನಯ ಅಂತೂ ಅಬ್ಬಬ್ಬಾ.. ಕಲಾವಿದರಿಗೆ ಪುಸ್ತಕದಂತಿದೆ. ಮಿಸ್ ಮಾಡದೇ ಸಿನಿಮಾ ನೋಡಿ ಎಂದು ಪೃಥ್ವಿರಾಜ್ ಸಲಹೆ ನೀಡಿದ್ದಾರೆ.

'ಖಲೀಫಾ: ಪಾರ್ಟ್ 1', 'ಖಲೀಫಾ: ಪಾರ್ಟ್ 2' ಹಾಗೂ 'ಒಡಿಯನ್: ಎ ಏಜ್ ಆಫ್ ಇಲ್ಯೂಷನ್' ಎಂಬ ಸಿನಿಮಾಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. 'ಲೂಸಿಫರ್' ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಅವರು 'ಬ್ರೋ ಡ್ಯಾಡಿ' ಹಾಗೂ 'ಲೂಸಿಫರ್-2' ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದಿದ್ದರು. ಇದೇ ಸಂದರ್ಶನದಲ್ಲಿ 'ವಾರಣಾಸಿ' ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜಮೌಳಿ ಸಿನಿಮಾ ಮೇಕಿಂಗ್, ಸ್ಕೇಲ್, ಕ್ಯಾನ್ವಾಸ್ ಎಲ್ಲದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ರಂದು ತೆರೆಮೇಲೆ ಮ್ಯಾಜಿಕ್ ನಡೆಯಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X