For Quick Alerts
  ALLOW NOTIFICATIONS  
  For Daily Alerts

  ಕ್ಲಬ್‌ಹೌಸ್‌ನಲ್ಲಿ ನಾನಿಲ್ಲ: ನಕಲಿ ಖಾತೆ ಬಗ್ಗೆ ನಟ ಪೃಥ್ವಿರಾಜ್ ಸ್ಪಷ್ಟನೆ

  |

  ನಕಲಿ ಖಾತೆಗಳ ವಿರುದ್ಧ ಮಲಯಾಳಂ ಸ್ಟಾರ್ ಕಲಾವಿದರು ಸಿಡಿದೆದಿದ್ದಾರೆ. ಇತ್ತೀಚಿಗಷ್ಟೆ ನಟ ದುಲ್ಕರ್ ಸಲ್ಮಾನ್ ಮತ್ತು ಟೊವಿನೋ ಥಾಮಸ್ ತಮ್ಮ ಹೆಸರಿನಲ್ಲಿದ್ದ ನಕಲಿ ಖಾತೆ ಬಗ್ಗೆ ಬಹಿರಂಗ ಪಡಿಸಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ನಟ ಪೃಥ್ವಿರಾಜ್ ಸುಕುಮಾರನ್ ಹೆಸರಿನಲ್ಲಿದ್ದ ನಕಲಿ ಕ್ಲಬ್ ಹೌಸ್ ಖಾತೆ ಬಗ್ಗೆ ಬಹಿರಂಗ ಪಡಿಸಿದ್ದಾರೆ.

  ಸೂರಜ್ ನಾಯರ್ ಎನ್ನುವ ವ್ಯಕ್ತಿ ಪೃಥ್ವಿರಾಜ್ ಹೆಸರಿನಲ್ಲಿ ಕ್ಲಬ್‌ಹೌಸ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಪೃಥ್ವಿರಾಜ್ ಧ್ವನಿಯನ್ನು ಮಿಮಿಕ್ರಿ ಮಾಡಿ ಜನರೊಡನೆ ಸಂಭಾಷಣೆ ಮಾಡುತ್ತಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಪೃಥ್ವಿರಾಜ್, ಸೂರಜ್ ನಾಯರ್ ಫೋಟೋವನ್ನು ಸಹ ಶೇರ್ ಮಾಡಿದ್ದಾರೆ.

  'ಪ್ರೇಮಂ' ಸಿನಿಮಾಕ್ಕೆ ಮೊದಲ ಆಯ್ಕೆ ಸಾಯಿ ಪಲ್ಲವಿ ಆಗಿರಲಿಲ್ಲ! ಮತ್ಯಾರು?'ಪ್ರೇಮಂ' ಸಿನಿಮಾಕ್ಕೆ ಮೊದಲ ಆಯ್ಕೆ ಸಾಯಿ ಪಲ್ಲವಿ ಆಗಿರಲಿಲ್ಲ! ಮತ್ಯಾರು?

  ಸೂರಜ್ ನಾಯರ್ ಅಧಿಕೃತ ಖಾತೆಯ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ಪೃಥ್ವಿರಾಜ್ ಸಾಮಾಜಿಕ ಜಾಲತಾಣದಲ್ಲಿ 'ನಾನು ಎಂದು ಹೇಳಿಕೊಳ್ಳುವುದು ಒಂದು ವಿಷಯವಾಗಿದೆ. ನನ್ನ ಹೆಸರಿನಲ್ಲಿ ಖಾತೆ ನಿರ್ಮಿಸಿ, ನನ್ನ ಇನ್ಸ್ಟಾಗ್ರಾಮ್ ಖಾತೆಯನ್ನೇ ಹೋಲುವ ಹಾಗೆ ಐಡಿ ಬಳಸಿದ್ದಾರೆ. ಇದು ಅಪರಾದವಾಗಿದೆ. ದಯವಿಟ್ಟು ಇದನ್ನು ನಿಲ್ಲಿಸಿ. ನಾನು ಕ್ಲಬ್‌ಹೌಸ್‌ನಲ್ಲಿ ಇಲ್ಲ' ಎಂದು ಪೃಥ್ವಿರಾಜ್ ಹೇಳಿದ್ದಾರೆ.

  ಜೊತೆಗೆ ದೀರ್ಘವಾದ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. 'ಸೂರಜ್ ಈಗ ಅರ್ಥಮಾಡಿದ್ದೀರಿ ಅಂತ ಭಾವಿಸುತ್ತೇನೆ. ಒಂದು ಹಂತದಲ್ಲಿ 2500ಕ್ಕೂ ಹೆಚ್ಚು ಜನರು ನಿಮ್ಮ ಮಾತನ್ನು ಕೇಳುತ್ತಿದ್ದರು. ಅದರಲ್ಲಿ ಹೆಚ್ಚಿನವರು ನಾನು ಮಾತನಾಡುತ್ತಿದ್ದೆ ಎಂದು ಭಾವಿಸಿದ್ದರು. ಇದರಿಂದ ನನಗೆ ತುಂಬಾ ಫೋನ್ ಕರೆಗಳು ಮತ್ತು ಸಂದೇಶಗಳು ಬರುತ್ತಿದ್ದವು. ಹಾಗಾಗಿ ತಕ್ಷಣ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಯಿತು' ಎಂದು ಹೇಳಿದ್ದಾರೆ.

  ಪ್ರಭಾಸ್ ಗೆ ಪೌರಾಣಿಕ ಕಥೆ ರೆಡಿ ಮಾಡ್ತಿದ್ದಾರೆ ಪ್ರಶಾಂತ್ ನೀಲ್ | Filmibeat Kannada

  ಸೂರಜ್ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಮಿಮಿಕ್ರಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಪ್ರೋತ್ಸಾಹಿಸಿರುವುದಾಗಿ ಹೇಳಿದ್ದಾರೆ. ಇತ್ತೀಚಿಗೆ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಜನರಿಗೆ ಮೋಸ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಿಬೇಕಿದೆ.

  English summary
  Malayalam Actor Prithviraj Sukumaran says I am not on Clubhouse. He exposes fake profile with his name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X