For Quick Alerts
  ALLOW NOTIFICATIONS  
  For Daily Alerts

  ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಎಲ್ಲೋದ್ರು? ಏನ್ ಮಾಡ್ತಿದ್ದಾರೆ?

  |

  ಕಣ್ಸನ್ನೆ ಮೂಲಕ ಸೋಶಿಯಲ್ ಮೀಡಿಯಾ ಕೋಲಾಹಲ ಸೃಷ್ಟಿಸಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಎಲ್ಲೂ ಕಾಣ್ತಿಲ್ಲ, ಈಗ ಏನ್ ಮಾಡ್ತಿದ್ದಾರೆ ಎಂಬ ಕುತೂಹಲ ಕಾಡ್ತಿದೆ.

  ಪ್ರಿಯಾ ಎಲ್ಲಿ ಅಂತ ಹುಡುಕಿ ಹೋದರೆ ಆಕೆ ಭಾರತದಲ್ಲಿ ಇಲ್ಲ. ರಷ್ಯಾದಲ್ಲಿ ಸ್ನೇಹಿತರ ಜೊತೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಜುಲೈ 13 ರಂದು ಪ್ರಿಯಾ ಪ್ರಕಾಶ್ ರಷ್ಯಾದ ಮಾಸ್ಕೋದಲ್ಲಿ ಸುತ್ತಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಎದೆ ಸೀಳು ಕಾಣುವಂತೆ ಬಟ್ಟೆ ಧರಿಸಿದ್ದಕ್ಕೆ ಟ್ರೋಲ್: ಖಡಕ್ ಉತ್ತರ ನೀಡಿದ ಪ್ರಿಯಾ ವಾರಿಯರ್ಎದೆ ಸೀಳು ಕಾಣುವಂತೆ ಬಟ್ಟೆ ಧರಿಸಿದ್ದಕ್ಕೆ ಟ್ರೋಲ್: ಖಡಕ್ ಉತ್ತರ ನೀಡಿದ ಪ್ರಿಯಾ ವಾರಿಯರ್

  ಮಾಸ್ಕೋದ ಬೀದಿಗಳಲ್ಲಿ ಸ್ನೇಹಿತರ ಜೊತೆ ರೌಂಡ್ಸ್ ಹಾಕುತ್ತಿರುವ ನಟಿ ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರೆಡ್ ಸ್ಕ್ವಯರ್ ಕಟ್ಟಡದ ಎದುರು ಪ್ರಿಯಾ ಪ್ರಕಾಶ್ ಕುಳಿತುಕೊಂಡಿರುವ ವಿಡಿಯೋ ಸಹ ವೈರಲ್ ಆಗಿದೆ.

  ಪ್ರಿಯಾ ವಾರಿಯರ್ ಕೊನೆಯದಾಗಿ ತೆಲುಗಿನ 'ಚೆಕ್' ಸಿನಿಮಾದಲ್ಲಿ ನಟಿಸಿದ್ದರು. ನಿತೀನ್, ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದರು. ತೇಜ ಸಜ್ಜಾ'ಸ್ ಅವರ 'ಇಷ್ಕ್: ಇಟ್ಸ್ ನಾಟ್ ಲವ್ ಸ್ಟೋರಿ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ ತಿಂಗಳು ತೆರೆಗೆ ಬರಬೇಕಿತ್ತು. ಕೋವಿಡ್ ಕಾರಣದಿಂದ ಮುಂದೂಡಿದೆ.

  ಹಿಂದಿಯಲ್ಲಿ 'ಶ್ರೀದೇವಿ ಬಂಗಲೆ' ಸಿನಿಮಾದಲ್ಲಿ ಪ್ರಿಯಾ ವಾರಿಯರ್ ಅಭಿನಯಿಸಿದ್ದಾರೆ. ಈ ಚಿತ್ರವೂ ತೆರೆಗೆ ಬರಲು ಸಜ್ಜಾಗಿದೆ.

  ವಿಷ್ಣುಪ್ರಿಯ ಚಿತ್ರದಲ್ಲಿ ಪ್ರಿಯಾ

  Recommended Video

  Filmibeat Kannada Exclusive: Divya Anchan Comedy Khiladigalu Championship Journey| Filmibeat Kannada

  ಈ ಕಡೆ ಕನ್ನಡದಲ್ಲೂ ಕಣ್ಸನ್ನೆ ಹುಡುಗಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ನಿರ್ಮಾಪಕ ಕೆ ಮಂಜು ಮಗ ಶ್ರೇಯಸ್ ಅಭಿನಯದ 'ವಿಷ್ಣುಪ್ರಿಯ' ಸಿನಿಮಾದಲ್ಲಿ ವಾರಿಯರ್ ಬಣ್ಣ ಹಚ್ಚಿದ್ದಾರೆ.

  English summary
  Malayalam Actress Priya Prakash Varrier is enjoying vacation in moscow russia with friends.
  Wednesday, July 14, 2021, 18:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X