ಕಣ್ಸನ್ನೆಯಲ್ಲೇ ಸೆಳೆದಿದ್ದ ಪ್ರಿಯಾ ವಾರಿಯರ್ ಎಷ್ಟು ಚೆನ್ನಾಗಿ ಹಾಡ್ತಾರೆ ಗೊತ್ತಾ ? ಅಕ್ಕನಿಗೆ ಲವ್ ಆಗಿದೆ ಎಂದ ಫ್ಯಾನ್ಸ್...!

ರಾತ್ರೋ ರಾತ್ರಿ ತನ್ನ ಕಣ್ಸನ್ನೆಯಿಂದಲೇ ನ್ಯಾಷನಲ್ ಕ್ರಶ್ ಆದ ಪ್ರಿಯಾ ಪ್ರಕಾಶ್ ವಾರಿಯರ್ ಯಾರಿಗೆ ತಾನೆ ಗೊತ್ತಿಲ್ಲ. ಒರು ಅಡಾರ್ ಲವ್ ಚಿತ್ರದಲ್ಲಿ ಕಣ್ ಹೊಡೆದು ಯುವಕರನ್ನು ಕ್ಲೀನ್ ಬೋಲ್ಡ್ ಮಾಡಿದ್ದ ಪ್ರಿಯಾ ರಾತ್ರಿ ಕಳೆದು ಬೆಳಗಾಗುವುದರಲ್ಲೇ ವರ್ಲ್ಡ್ ಸ್ಟಾರ್ ಆಗಿ ಮಿಂಚಿದವರು .ದುರಾದೃಷ್ಟ ಕಣ್ಸನ್ನೆಯಿಂದ ಪ್ರಿಯಾ ದೇಶವ್ಯಾಪಿ ಪಬ್ಲಿಸಿಟಿ ಪಡೆದರಷ್ಟೇ. ಸಿನಿಮಾ ಮಾತ್ರ ಅಡ್ಡಡ್ಡ ಮಲಗಿತು.

ಒರು ಅಡಾರ್ ಲವ್ ನಂತರ ಪ್ರಿಯಾ ತೆಲುಗು, ಮಲಯಾಳಂ ಸೇರಿ ಅರ್ಧ ಡಜನ್ ಸಿನಿಮಾದಲ್ಲಿ ನಟಿಸಿದರು. ಆದರೆ ಮೊದಲ ಚಿತ್ರ ತಂದು ಕೊಟ್ಟ ಹೆಸರನ್ನ ಯಾವ ಸಿನಿಮಾ ಕೂಡ ನೀಡಲಿಲ್ಲ. ಗೆಲುವು ಸಿಗಲಿಲ್ಲ. ಸದ್ಯಕ್ಕೆ ಕಣ್ಣೊಡೆಯುವ ಮೂಲಕ ಇಡೀ ವಿಶ್ವಕ್ಕೆ ಸೆಲೆಬ್ರೆಟಿಯಾಗಿ ಪರಿಚಯವಾದ ಪ್ರಿಯಾ ಪ್ರಕಾಶ್ ವಾರಿಯರ್ ಕೈಯಲ್ಲಿ ಹೇಳಿಕೊಳ್ಳುವಂತಹ ಅವಕಾಶ ಇಲ್ಲ.

Priya Prakash Varrier Sings Kanmani Song Video Viral

ಹಾಗಂಥ ಫ್ಯಾನ್ ಫಾಲೋವರ್ಸ್ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಇವತ್ತು ಕೂಡ ಪ್ರಿಯಾ ಒಂದು ಪೋಸ್ಟ್ ಹಾಕಿದರೆ ಲಕ್ಷಗಟ್ಟಲೆ ಲೈಕ್ಸ್ ಹಾಗೂ ವ್ಯೂ ಸಿಗುತ್ತದೆ. ಇದಕ್ಕೆ ಇನ್ನೊಂದು ಸಾಕ್ಷಿ ಎಂಬಂತೆ ಇನ್ಸ್ಟಾಗ್ರಾಮ್ ನಲ್ಲಿ ಕಣ್ಸನ್ನೆ ಚೆಲುವೆ ಶೇರ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಕಮಲ್ ಹಾಸನ್ ಅವರ ಎವರ್‌ಗ್ರೀನ್ ಹಿಟ್ ಗೀತೆಗಳಲ್ಲಿ ಒಂದಾದ 'ಕಣ್ಮಣಿ' ಹಾಡನ್ನ, ಪ್ರಿಯಾ ಪ್ರಕಾಶ್ ವಾರಿಯರ್ ಲಯ ತಪ್ಪದೇ ಹಾಡಿದ್ದಾರೆ. ಕಣ್ಣಿನ ಮೂಲಕ ಅಲ್ಲದೇ ಈ ಬಾರಿ ಕಂಠದ ಮೂಲಕ ಕಲಾರಸಿಕರ ಹೃದಯಕ್ಕೆ ಬಾಣ ಬಿಟ್ಟಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಪ್ರಿಯಾ ಕಮೆಂಟ್ ಬಾಕ್ಸ್ ನ ಒಳನುಗ್ಗಿರುವ ಅನೇಕರು ಪೈಪೋಟಿಗೆ ಬಿದ್ದವರಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರು ಪ್ರಿಯಾ ವಾರಿಯರ್ ಅವರ ಸೊಗಸಾದ ಹಾಡುಗಾರಿಕೆಗೆ ಮನಸೋತು, ಕೇವಲ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳದೇ ಈ ಥರ ಆಗಾಗ ಹಾಡ್ತೀರಿ ಮೇಡಂ ಎಂದಿದ್ದಾರೆ. ಇನ್ನೂ ಬಹುತೇಕರು ನಾಯಕಿಯಾಗಿ ಮಿಂಚಿದ ನೀವು ಇನ್ಮುಂದೆ ಗಾಯಕಿಯಾಗಿಯೂ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಿ ಅಂತಿದ್ದಾರೆ. ಇದೆಲ್ಲದರ ನಡುವೆ ಇನ್ನೂ ಕೆಲವರಿಗೆ ಪ್ರಿಯಾ ವಾರಿಯರ್ ಗೆ ಯಾರದಾದ್ದರೂ ಮೇಲೆ ಲವ್ವಾಗಿದೆಯಾ ಎಂಬ ಅನುಮಾನ ಕೂಡ ಕಾಡುತ್ತಿದೆ.

ವಿಷ್ಣು ಪ್ರಿಯ ಮೂಲಕ ಕನ್ನಡಕ್ಕೂ ಬಂದಿರುವ ಪ್ರಿಯಾ ವಾರಿಯರ್..!

ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದ ಕೆ.ಮಂಜು ನಿರ್ಮಾಣದ ವಿಷ್ಣು ಪ್ರಿಯ ಚಿತ್ರದ ಮೂಲಕ, ಪ್ರಿಯಾ ವಾರಿಯರ್ ಕನ್ನಡ ಚಿತ್ರರಂಗಕ್ಕೂ ಬಂದಿದ್ದಾರೆ. ಕನ್ನಡದ ಜೊತೆ ಮಲಯಾಳಂನಲ್ಲಿಯೂ ಸಿದ್ಧವಾಗಿರುವ ಈ ಚಿತ್ರದಲ್ಲಿ ಪ್ರಿಯಾಗೆ ಮಂಜು ಅವರ ಪುತ್ರ ಶ್ರೇಯಸ್ ಜೋಡಿ. ವಿ.ಕೆ.ಪ್ರಕಾಶ್ ನಿರ್ದೇಶನ ಇರುವ ಈ ಚಿತ್ರ ಯಾವ ಕ್ಷಣದಲ್ಲಾದರೂ ತೆರೆಗೆ ಬರಬಹುದು. ಕರ್ನಾಟಕದಲ್ಲಿನ ಪಡ್ಡೆಗಳಿಗೆ ಪ್ರಿಯಾ ಜ್ವರ ಮತ್ತೆ ಏರಿದರು ಏರಬಹುದು. ಪ್ರಿಯಾ ಅದೃಷ್ಟ ಮತ್ತೊಮ್ಮೆ ಬದಲಾಗಿ ಬೇಡಿಕೆ ಹೆಚ್ಚಾದರು ಆಗಬಹುದು

ಒಟ್ಟಿನಲ್ಲಿ ಸದ್ಯಕ್ಕೆ ಪ್ರಿಯಾ ವಾರಿಯರ್ ಹಾಡಿರುವ ಹಾಡು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕಣ್ಣೇಟಿಗೆ ಬಲಿಯಾದ ಹುಡುಗರ ಹೃದಯವನ್ನೂ ಗೆಲ್ತಿದೆ. ಮುಂಬರುವ ದಿನಗಳಲ್ಲಿ ಈ ಹಾಡಿಂದ ಆದರೂ ಪ್ರಿಯಾ ವಾರಿಯರ್ ಗೆ ಏನಾದರೂ ಉಪಯೋಗವಾಗುತ್ತಾ ಅನ್ನುವುದನ್ನ ಕಾದು ನೋಡಬೇಕಿದೆ.

More from Filmibeat

English summary
Priya Prakash Varrier Sings Kamal Haasans Anbodu Kadhalan Kanmani Song, Video Goes Viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X