ಕಣ್ಸನ್ನೇ ಹುಡುಗಿ ಪ್ರಿಯಾ ವಾರಿಯರ್ ಕಂಠದಲ್ಲಿ 'ಕನ್ನಡ'ದ ಹಾಡು, ವ್ಹಾವ್ ಎಂದ ಸಂಜಿತ್ ಹೆಗ್ಡೆ...!
ರಾತ್ರೋ ರಾತ್ರಿ ತನ್ನ ಕಣ್ಸನ್ನೆಯಿಂದಲೇ ನ್ಯಾಷನಲ್ ಕ್ರಶ್ ಆದ ಪ್ರಿಯಾ ಪ್ರಕಾಶ್ ವಾರಿಯರ್ ಯಾರಿಗೆ ತಾನೆ ಗೊತ್ತಿಲ್ಲ. ಒರು ಅಡಾರ್ ಲವ್ ಚಿತ್ರದಲ್ಲಿ ಕಣ್ ಹೊಡೆದು ಯುವಕರನ್ನು ಕ್ಲೀನ್ ಬೋಲ್ಡ್ ಮಾಡಿದ್ದ ಪ್ರಿಯಾ ರಾತ್ರಿ ಕಳೆದು ಬೆಳಗಾಗುವುದರಲ್ಲೇ ವರ್ಲ್ಡ್ ಸ್ಟಾರ್ ಆಗಿ ಮಿಂಚಿದವರು .ದುರಾದೃಷ್ಟ ಕಣ್ಸನ್ನೆಯಿಂದ ಪ್ರಿಯಾ ದೇಶವ್ಯಾಪಿ ಪಬ್ಲಿಸಿಟಿ ಪಡೆದರಷ್ಟೇ. ಸಿನಿಮಾ ಮಾತ್ರ ಅಡ್ಡಡ್ಡ ಮಲಗಿತು.
ಒರು ಅಡಾರ್ ಲವ್ ನಂತರ ಪ್ರಿಯಾ ತೆಲುಗು, ಮಲಯಾಳಂ ಸೇರಿ ಅರ್ಧ ಡಜನ್ ಸಿನಿಮಾದಲ್ಲಿ ನಟಿಸಿದರು. ಆದರೆ ಮೊದಲ ಚಿತ್ರ ತಂದು ಕೊಟ್ಟ ಹೆಸರನ್ನ ಯಾವ ಸಿನಿಮಾ ಕೂಡ ನೀಡಲಿಲ್ಲ. ಗೆಲುವು ಸಿಗಲಿಲ್ಲ. ಸದ್ಯಕ್ಕೆ ಕಣ್ಣೊಡೆಯುವ ಮೂಲಕ ಇಡೀ ವಿಶ್ವಕ್ಕೆ ಸೆಲೆಬ್ರೆಟಿಯಾಗಿ ಪರಿಚಯವಾದ ಪ್ರಿಯಾ ಪ್ರಕಾಶ್ ವಾರಿಯರ್ ಕೈಯಲ್ಲಿ ಹೇಳಿಕೊಳ್ಳುವಂತಹ ಅವಕಾಶ ಇಲ್ಲ.

ಇಂಥಾ ಪ್ರಿಯಾ ಪ್ರಕಾಶ್ ವಾರಿಯರ್, ಸದ್ಯಕ್ಕೆ ಕನ್ನಡದ ಹಾಡೊಂದನ್ನು ಹಾಡಿದ್ದಾರೆ. ಈ ಮೂಲಕ ಕನ್ನಡಿಗರ ಹೃದಯವನ್ನೂ ಗೆಲ್ಲುತ್ತಿದ್ದಾರೆ. ಹೌದು, ಕನ್ನಡದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ ಕಳೆದ ತಿಂಗಳು ತಾವೇ ಖುದ್ದು ಸಂಗೀತ ನಿರ್ದೇಶನವನ್ನೂ ಮಾಡಿ 'ನಂಗೆ ಅಲ್ಲವ' ಎಂಬ ಹಾಡೊಂದನ್ನು ಹಾಡಿದ್ದರು. ಆ ಹಾಡನ್ನು ಯೂಟ್ಯೂಬ್‌ನಲ್ಲಿ ತೇಲಿ ಬಿಟ್ಟಿದ್ದರು. ಬಿಜೋಯ್ ಶೆಟ್ಟಿ ನಿರ್ದೇಶನದಲ್ಲಿ, ನಾಗಾರ್ಜುನ ಶರ್ಮಾ ಸಾಹಿತ್ಯವನ್ನೊಂದಿದ್ದ ಯುವ ಜೋಡಿಯ ಪ್ರೀತಿ, ಸರಸ-ವಿರಸಗಳನ್ನು ಹೇಳುವ ಈ ಹಾಡಿನಲ್ಲಿ ಸಂಜಿತ್ ಹೆಗ್ಡೆ ಜೊತೆ ಸಂಜನಾ ದಾಸ್ ಕಾಣಿಸಿಕೊಂಡಿದ್ದರು.
ಯೂಟ್ಯೂಬ್‌ನಲ್ಲಿ ಹೆಚ್ಚು ಕಡಿಮೆ ಈ ಒಂದು ತಿಂಗಳಿನಲ್ಲಿ 25 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡ ಈ 'ನಂಗೆ ಅಲ್ಲವ' ಹಾಡಿಗೆ ಈಗ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಮನ ಸೋತಿದ್ದಾರೆ. ಕನ್ನಡಿಗರಲ್ಲಿ ಕ್ಷಮೆ ಕೋರಿ ಹಾಡನ್ನು ಹಾಡಿದ್ದಾರೆ. ನನಗೆ ಕನ್ನಡ ಗೊತ್ತಿಲ್ಲದಿದ್ದರೂ, ಮಾತನಾಡಲು ಬಾರದೇ ಇದ್ದರೂ, ಈ ಹಾಡನ್ನು ಹಾಡನ್ನು ಹಾಡುವ ಪ್ರಯತ್ನವನ್ನು ಕಂಟ್ರೋಲ್ ಮಾಡಲು ನನಗೆ ಸಾಧ್ಯವಾಗಲಿಲ್ಲ. ಏನಾದರೂ ತಪ್ಪುಗಳಿದ್ದಲ್ಲಿ ದಯವಿಟ್ಟು ಕ್ಷಮಿಸಿ ಎಂದು ನಂಗೆ ಅಲ್ಲವಾ ಹಾಡನ್ನು ಪ್ರಿಯಾ ವಾರಿಯರ್ ಹಾಡಿದ್ದಾರೆ. ವಿಶೇಷ ಅಂದರೆ ಪ್ರಿಯಾ ಅವರ ಕಂಠಕ್ಕೆ ಸಂಜಿತ್ ಹೆಗ್ಡೆ ಕೂಡ ಮಾರು ಹೋಗಿದ್ದಾರೆ. ಹೀಗಾಗಿಯೇ ಇದು ತುಂಬ ಚೆನ್ನಾಗಿದೆ ಎಂದು ಪ್ರಿಯಾ ವಾರಿಯರ್‌ಗೆ ಸಂಜಿತ್ ಹೆಗ್ಡೆ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾ, ಹಾರ್ಟ್ ಎಮೋಜಿಯನ್ನು ಹಂಚಿಕೊಂಡಿದ್ದಾರೆ.
ಸದ್ಯಕ್ಕೆ ಪ್ರಿಯಾ ಪ್ರಕಾಶ್ ವಾರಿಯರ್ ಹಾಡಿರುವ ನಂಗೆ ಅಲ್ಲವಾ ಹಾಡು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಈ ಹಾಡನ್ನು ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ 8 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಂಡಿದ್ದು, 85 ಸಾವಿರ ಲೈಕ್ಸ್ ಸಿಕ್ಕಿವೆ.


Click it and Unblock the Notifications











