ಟೂ ಪೀಸ್ ಬಿಕಿನಿಯಲ್ಲಿ ಕಂಡ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್: ಫೋಟೊಗಳು ಫುಲ್ ವೈರಲ್
ಕಣ್ಸನ್ನೆ ಮಾಡಿ ನ್ಯಾಷನಲ್ ಕ್ರಶ್ ಎನಿಸಿಕೊಂಡ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಸಣ್ಣ ವಿಡಿಯೋ ಝಲಕ್‌ನಿಂದ ರಾತ್ರೋರಾತ್ರಿ ಫೇಮಸ್ ಆಗಿದ್ದ ಚೆಲುವೆ ಈಕೆ. ವಿಪರ್ಯಾಸ ಏನು ಅಂದರೆ ಆ ಸಿನಿಮಾ ಕೂಡ ಹಿಟ್ ಆಗಲಿಲ್ಲ. ಆನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ರು ಪ್ರಯೋಜನವಾಗಲಿಲ್ಲ. ಇದೀಗ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದ್ದಾಳೆ.
'ಒರು ಆಡಾರ್ ಲವ್' ಚಿತ್ರದ ಹಾಡೊಂದರ ಸಣ್ಣ ವಿಡಿಯೋದಲ್ಲಿ ಪ್ರಿಯಾ ಕಣ್ಸನ್ನೆ ಮಾಡಿದ್ದು ವೈರಲ್ ಆಗಿತ್ತು. ಆಕೆಯ ವಾರೆ ನೋಟ, ಕಣ್ಣು ಮಿಟುಕಿಸಿ ಹುಬ್ಬು ಹಾರಿಸಿದ ಬಗೆ ನೋಡಿ ಪಡ್ಡೆ ಹುಡುಗರು ಫಿದಾ ಆಗಿಬಿಟ್ಟಿದ್ದರು. ಸಿಕ್ಕಾಪಟ್ಟೆ ಮೀಮ್ಸ್ ಕ್ರಿಯೇಟ್ ಆಗಿ ಆ ವಿಡಿಯೋಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಹೈಸ್ಕೂಲು ಹುಡುಗ, ಹುಡುಗಿಯರ ಪ್ರೇಮ್ ಕಹಾನಿ ಅದು. ಸಿನಿಮಾ ರಿಲೀಸ್‌ಗೂ ಮೊದ್ಲು ಸಾಂಗ್ ರಿಲೀಸ್ ಆಗಿ ಪ್ರಿಯಾ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಳು.

ಪ್ರಿಯಾ ಕ್ರೇಜ್ ಹೇಗಿತ್ತು ಅಂದ್ರೆ ಸಿನಿಮಾ ರಿಲೀಸ್ ಹೊತ್ತಿಗೆ ಸಂಪೂರ್ಣ ಕಥೆ ಬದಲಿಸಿ, ಸೈಡ್ ರೋಲ್ ಮಾಡಿದ್ದ ಆಕೆಯನ್ನು ಲೀಡ್ ರೋಲ್ ಎನ್ನುವಂತೆ ಬಿಂಬಿಸಲಾಗಿತ್ತು. ಈ ಸಿನಿಮಾ ಕನ್ನಡಕ್ಕೂ ಡಬ್ ರಿಲೀಸ್ ಆಗಿತ್ತು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ. 'ವಿಷ್ಣುಪ್ರಿಯಾ' ಸಿನಿಮಾ ಮೂಲಕ ಪ್ರಿಯಾ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಇನ್ನಷ್ಟೆ ರಿಲೀಸ್ ಆಗಬೇಕಿದೆ. ಇದೆಲ್ಲದರ ನಡುವೆ ಆಕೆಯ ಬಿಕಿನಿ ಫೋಟೊಗಳು ವೈರಲ್ ಆಗ್ತಿದೆ.
ಟೂ ಪೀಸ್‌ನಲ್ಲಿ ಪ್ರಿಯಾ ವಾರಿಯರ್
ಚೆಲುವೆಯ ಕೈಯಲ್ಲಿ ದೊಡ್ಡ ಸಿನಿಮಾಗಳು ಯಾವ್ದು ಇಲ್ಲ. ಆದರೆ ಸದಾ ಊರುರು ಸುತ್ತಾಡುತ್ತಾ ಎಂಜಾಯ್ ಮಾಡುತ್ತಿರುತ್ತಾಳೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾಳೆ. ಸಮುದ್ರ, ಜಲಪಾತ ಅಂತೆಲ್ಲಾ ಹೆಚ್ಚು ಸುತ್ತಾಡುವ ಚೆಲುವೆ ನೀರಲ್ಲಿ ಈಜಾಡಿ ಫೋಟೊಗಳನ್ನು ಕ್ಲಿಕ್ಕಿಸಿ ಶೇರ್ ಮಾಡಿತ್ತಾಳೆ. ಇಷ್ಟು ದಿನ ಸ್ವಿಮ್ ಸೂಟ್‌ಗಳಲ್ಲಿ ಕಾಣಿಸಿಕೊಳ್ತಿದ್ದ ಚೆಲುವೆ ಈಗ ಟೂ ಪೀಸ್ ಬಿಕಿನಿಯಲ್ಲಿ ದರ್ಶನ ಕೊಟ್ಟಿದ್ದಾಳೆ.
ಮಾಲ್ಡೀವ್ಸ್ ಪ್ರವಾಸದಲ್ಲಿ ಕಣ್ಸನ್ನೆ ಹುಡುಗಿ
ಸದ್ಯ ಪ್ರಿಯಾ ವಾರಿಯರ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ಧಾರೆ. ದ್ವೀಪ ರಾಷ್ಟ್ರದ ಸೊಗಸಿಗೆ ಮರುಳಾಗಿದ್ದಾರೆ. ಸಮುದ್ರದಲ್ಲಿ ಈಜಾಡುತ್ತಾ ಕಾಲ ಕಳೆಯುತ್ತಿದ್ದಾರೆ. ನೀಲಿ ಬಣ್ಣ ಬಕಿನಿ ತೊಟ್ಟು ಪೋಸ್ ಕೊಟ್ಟಿದ್ದಾರೆ. ಒಂದು ಫೋಟೊದಲ್ಲಿ ನೀರನಲ್ಲಿ ನಿಂತು ಪಕ್ಕಕ್ಕೆ ತಿರುಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಸ್ಮಿಮ್ಮಿಂಗ್ ಟ್ಯೂಬ್ ಮೇಲೆ ಕೂತು ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದಾರೆ. ಈ ಎರಡೂ ಫೋಟೊಗಳು ವೈರಲ್ ಆಗ್ತಿದ್ದು ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗೂಗಲ್ ಸರ್ಚ್‌ನಲ್ಲಿ ದಾಖಲೆ
5 ವರ್ಷಗಳ ಹಿಂದೆ ಪ್ರಿಯಾ ಪ್ರಕಾಶ್ ವಾರಿಯರ್ ಕ್ರೇಜ್ ಹೇಗಿತ್ತು ಅಂತ ಬಿಡಿಸಿ ಹೇಳುವುದು ಬೇಕಾಗಿಲ್ಲ. 2018ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ನಟಿ ಎನ್ನುವ ಕೀರ್ತಿ ಪ್ರಿಯಾಗೆ ದಕ್ಕಿತ್ತು. ಪ್ರಿಯಾ ಕಣ್ಸನ್ನೆ ವಿಡಿಯೋ ವೈರಲ್ ಆಗ್ತಿದ್ದಂತೆ ಆಕೆಯ ಜಪ ಶುರುವಾಗಿತ್ತು. ಆ ವರ್ಷ ಗೂಗಲ್ ಸರ್ಚ್‌ನಲ್ಲಿ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್‌ರಂತಹ ಬಾಲಿವುಡ್ ಸ್ಟಾರ್ ನಟಿಯರನ್ನು ಈ ಕೇರಳ ಕುಟ್ಟಿ ಹಿಂದಿಕ್ಕಿದ್ದಳು.
ಕೈ ಹಿಡಿಯದ ಸಿನಿಮಾಗಳು
'ಒರು ಆಡಾರ್' ಸಿನಿಮಾ ನಂತರ ಸಾಕಷ್ಟು ಸಿನಿಮಾಗಳಲ್ಲಿ ಪ್ರಿಯಾ ಬಣ್ಣ ಹಚ್ಚಿದ್ದಾರೆ. ತೆಲುಗಿನಲ್ಲೂ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಆದರೆ ಪ್ರಯೋಜನವಾಗಲಿಲ್ಲ. ಇನ್‌ಸ್ಟಾಗ್ರಾಂನಲ್ಲಿ 7 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಹಾಗಾಗಿ ಜಾಹೀರಾತುಗಳಿಂದ ಒಳ್ಳೆ ವರಮಾನ ಸಿಗುತ್ತಿದೆ. ಒಂದಷ್ಟು ಜಾಹೀರಾತುಗಳಲ್ಲೂ ನಟಿಸಿದ್ದಾರೆ. ಸದ್ಯ ಕನ್ನಡದಲ್ಲಿ ಶ್ರೇಯಸ್ ಮಂಜು ಜೊತೆ ಪ್ರಿಯಾ ನಟಿಸಿರುವ 'ವಿಷ್ಣುಪ್ರಿಯ' ಸಿನಿಮಾ ರಿಲೀಸ್ ಆಗಬೇಕಿದೆ.


Click it and Unblock the Notifications











