ಸ್ವಿಮ್ಮಿಂಗ್ ಪೋಲ್‌ನಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಹಾಟ್ ಟ್ರೀಟ್!
'ಒರು ಆಡಾರ್ ಲವ್' ಚಿತ್ರದಲ್ಲಿ ಕಣ್ಸನ್ನೆಯಿಂದ ನ್ಯಾಷನಲ್ ಕ್ರಶ್ ಪಟ್ಟಕ್ಕೇರಿದ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್. ಈ ಕೇರಳ ಕುಟ್ಟಿ ಕಣ್ಸನ್ನೆ ವಿಡಿಯೋ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಅದೊಂದು ವಿಡಿಯೋದಿಂದ ರಾತ್ರೋರಾತ್ರಿ ಫೇಮಸ್ ಆಗಿದ್ದ ಚೆಲುವೆ ಆ ನಂತ್ರ ಯಾಕೋ ಸದ್ದು ಮಾಡಲೇಯಿಲ್ಲ. ಸದ್ಯ ಸ್ವಿಮ್ಮಿಂಗ್ ಸೂಟ್‌ನಲ್ಲಿ ಮತ್ತೆ ಪ್ರಿಯಾ ನೆಟ್‌ವರ್ಲ್ಡ್‌ನಲ್ಲಿ ಹಲ್ ಚಲ್ ಎಬ್ಬಿಸಿದ್ದಾಳೆ.
ಪ್ರಿಯಾ ಸದ್ಯ ಮಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾಳೆ. ಜೊತೆಗೆ ಹಾಟ್ ಹಾಟ್ ಫೋಟೊಶೂಟ್ ಮೂಲಕ ಸೋಷಿಯಲ್ ಮೀಡಿಯಾ ಶೇಕ್ ಮಾಡ್ತಿರ್ತಾಳೆ. ಸದ್ಯ ಬ್ಯಾಂಕಾಕ್‌ನಲ್ಲಿ ಪ್ರವಾಸಕ್ಕೆ ಹೋಗಿರುವ ಕಣ್ಸನ್ನೆ ಚೆಲುವೆ ಮೋಜು ಮಸ್ತಿಯಲ್ಲಿ ತೊಡಗಿದ್ದಾಳೆ. ಅಲ್ಲಿಂದಲೇ ಫೋಟೊಗಳನ್ನು ಫೋಟೊ ವೀಡಿಯೋಗಳನ್ನು ಕ್ಲಿಕ್ಕಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟಿದ್ದಾಳೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ವಿಮ್ ಮಾಡ್ತಾ ರಿಲ್ಯಾಕ್ಸ್ ಆಗಿರೋ ಚೆಲುವೆ ಫೋಟೊಗಳನ್ನು ಶೇರ್ ಮಾಡಿದ್ದಾಳೆ.
ಪ್ರಿಯಾ ಪ್ರಕಾಶ್ ವಾರಿಯರ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಕನ್ನಡದಲ್ಲೂ ನಟಿಸಿ ಹೋದ ಚೆಲುವೆ ಸದ್ಯ ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚು ನಟಿಸ್ತಿದ್ದಾಳೆ. ಆದರೂ ಯಾಕೋ ಈ ಚೆಲುವೆಗೆ ಮೊದಲು ಇದ್ದ ಕ್ರೇಜ್ ಈಗ ಇಲ್ಲ ಎನ್ನಬಹುದು.

ಪೂಲ್‌ನಲ್ಲಿ ಪ್ರಿಯಾ ಮಾದಕ ಪೋಸ್
ಬ್ಯಾಂಕಾಕ್‌ನ ಐಷಾರಾಮಿ ಹೋಟೆಲ್‌ನಲ್ಲಿ ಸ್ಟೇ ಆಗಿರುವ ಪ್ರಿಯಾ ವಾರಿಯರ್, ಅಲ್ಲಿನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡಿ ಎಂಜಾಯ್ ಮಾಡಿದ್ದಾಳೆ. ಸ್ವಿಮ್ ಸೂಟ್‌ನಲ್ಲಿ ಮಾದಕವಾಗಿ ಪೋಸ್ ಕೊಟ್ಟಿದ್ದಾರೆ. ಪಡ್ಡೆ ಹೈಕಳು ಪ್ರಿಯಾ ಮೈಮಾಟ ಕಂಡು ಫಿದಾ ಆಗಿದ್ದಾರೆ. ಈ ಎರಡು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕನ್ನಡ ಸಿನಿರಸಿಕರಿಗೆ ಪ್ರಿಯಾ ಚಿರಪರಿಚಿತ
3 ವರ್ಷಗಳ ಹಿಂದೆ ಯುವಪ್ರತಿಭೆಗಳು ಸೇರಿ ಮಾಡಿದ್ದ 'ಒರು ಆಡಾರ್ ಲವ್' ಸಿನಿಮಾ ಮೊದಲಿಗೆ ಅಷ್ಟೇನು ಸದ್ದು ಮಾಡಿರಲಿಲ್ಲ. ಆದರೆ ಚಿತ್ರದ 'ಮಾಣಿಕ್ಯ ಮಲರಾಯಿ ಪೂವ' ಹಾಡಿನ ನಡುವೆ ಶಾಲೆಯಲ್ಲಿ ಪ್ರಿಯಕರನ ಕಡೆ ತಿರುಗು ಕಣ್ಣು ಮಿಟುಕಿಸುವ ವಿಡಿಯೋ ವೈರಲ್ ಆಯಿತು. ಮುಂದೆ ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಯ್ತು. ನಂತರ 'ವಿಷ್ಣುಪ್ರಿಯ' ಚಿತ್ರದಲ್ಲಿ ಶ್ರೇಯಸ್ ಮಂಜು ಜೋಡಿಯಾಗಿಯೂ ನಟಿಸಿದ್ದಳು.

ಕಮ್ಮಿಆಯ್ತು ಪ್ರಿಯಾ ಕ್ರೇಜ್
'ಒರು ಆಡಾರ್ ಲವ್' ಸಿನಿಮಾ ರಿಲೀಸ್ ಟೈಮಲ್ಲಿ ಪ್ರಿಯಾಗೆ ಇದ್ದ ಕ್ರೇಜ್ ಈಗ ಇಲ್ಲ. ಆ ಸಣ್ಣ ವಿಡಿಯೋದಿಂದ ನ್ಯಾಷನಲ್ ಕ್ರಶ್ ಪಟ್ಟಕ್ಕೇರಿದ ಚೆಲುವೆ ಮುಂದೆ ಸ್ಟಾರ್ ಹೀರೊಯಿನ್ ಆಗ್ತಾರೆ ಅಂತ ಕೆಲವರು ಅಂದುಕೊಂಡಿದ್ದರು. ಆದರೆ ಆ ಸಿನಿಮಾ ಕೂಡ ಪ್ರೇಕ್ಷಕರ ಮನ ಗೆಲ್ಲಲಿಲ್ಲ. ಒಂದಷ್ಟು ಬಾಲಿವುಡ್ ಅವಕಾಶಗಳು ಸಿಕ್ಕಿದರೂ ದೊಡ್ಡಮಟ್ಟದ ಸಕ್ಸಸ್ ಅಂತ ಕೇರಳ ಕುಟ್ಟಿಗೆ ಸಿಗಲಿಲ್ಲ.

ಗೂಗಲ್ ಸರ್ಚ್‌ನಲ್ಲಿ ನಂ.1 ಆಗಿದ್ದ ಪ್ರಿಯಾ
2018ರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಕ್ರೇಜ್ ಹೇಗಿತ್ತು ಅಂದರೆ ಆ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ನಟಿ ಎನಿಸಿಕೊಂಡಿದ್ದಳು. ಕಣ್ಣ ಹುಬ್ಬುಗಳನ್ನೇ ಬಾಣದಂತೆ ಬಾಗಿಸಿ ಬಳುಕಿಸಿ ಪಡ್ಡೆಗಳ ಎದೆಗೆ ಕಣ್ಣಲ್ಲೇ ಹೂಬಾಟ ಬಿಟ್ಟ ಚೆಲುವೆ ರಾತ್ರೋರಾತ್ರಿ ಫೇಮಸ್ ಆಗಿದ್ದಳು. ಸೋಶಿಯಲ್ ಮೀಡಿಯಾ ತುಂಬಾ ಪ್ರಿಯಾ ಜಪ ಶುರುವಾಗಿತ್ತು. ಸನ್ನಿ ಲಿಯೋನ್, ದೀಪಿಕಾ, ಕತ್ರೀನಾ ಎಲ್ಲರನ್ನು ಹಿಂದಿಕ್ಕಿ ಪ್ರಿಯಾ ಸದ್ದು ಮಾಡಿದ್ದಳು.


Click it and Unblock the Notifications











