ಕ್ಷಮೆ ಕೇಳಿ, ತಮ್ಮ ಸಿನಿಮಾದ ದೃಶ್ಯ ಡಿಲೀಟ್ ಮಾಡಿದ ಪೃಥ್ವಿರಾಜ್ ಸುಕುಮಾರನ್

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಹೊಸ ಸಿನಿಮಾ 'ಕಡುವ' ಮೂರು ದಿನದ ಹಿಂದಷ್ಟೆ ಬಿಡುಗಡೆ ಆಗಿದೆ.

'ಕಡುವ' ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆಯಾದರೂ ಬಾಕ್ಸ್‌ ಆಫೀಸ್‌ನಲ್ಲಿ ಈವರೆಗೆ ಉತ್ತಮ ಪ್ರದರ್ಶನವನ್ನೇ ಸಿನಿಮಾ ನೀಡಿದೆ. ಆದರೆ ಸಿನಿಮಾದಲ್ಲಿ ಬರುವ ಒಂದು ದೃಶ್ಯದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಕಡುವ' ಸಿನಿಮಾದಲ್ಲಿ ನಾಯಕ ಪಾತ್ರಧಾರಿ ಪೃಥ್ವಿರಾಜ್ ಸುಕುಮಾರನ್ ಅಂಗವಿಕಲ ಮಕ್ಕಳ ಕುರಿತಾಗಿ ಹೇಳುವ ಸಂಭಾಷಣೆಯೊಂದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕತವಾಗಿದೆ. ಸ್ವತಃ ಕೇರಳ ಅಂಗವಿಕಲ ಮಕ್ಕಳ ಕಲ್ಯಾಣ ಖಾತೆ ಮುಖ್ಯಸ್ಥರು ಪೃಥ್ವಿರಾಜ್ ಸುಕುಮಾರನ್ ಹಾಗೂ ನಿರ್ದಶಾಜಿ ಖೈಲಾಸ್ ಹಾಗೂ ನಿರ್ಮಾಣ ಸಂಸ್ಥೆಗೆ ನೊಟೀಸ್ ಕಳಿಸಿ ಉತ್ತರಿಸುವಂತೆ ಸೂಚಿಸಿದ್ದಾರೆ.

ಕ್ಷಮೆ ಕೇಳಿ, ದೃಶ್ಯ ಡಿಲೀಟ್ ಮಾಡಿದೆ ಚಿತ್ರತಂಡ

ಕ್ಷಮೆ ಕೇಳಿ, ದೃಶ್ಯ ಡಿಲೀಟ್ ಮಾಡಿದೆ ಚಿತ್ರತಂಡ

ಆದರೆ ತಮ್ಮ ತಪ್ಪನ್ನು ಅರಿತುಕೊಂಡಿರುವ ಚಿತ್ರತಂಡ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕವಾಗಿ ಕ್ಷಮೆ ಕೇಳಿರುವುದಲ್ಲದೆ ಅಂಗವಿಕಲ ಮಕ್ಕಳ ಬಗ್ಗೆ ಇದ್ದ ಸಂಭಾಷಣೆಯನ್ನು ಹಾಗೂ ದೃಶ್ಯವನ್ನು ಡಿಲೀಟ್ ಮಾಡಿದೆ. ಸ್ವತಃ ಪೃಥ್ವಿರಾಜ್ ಸುಕುಮಾರನ್ ಸಹ ಫೇಸ್‌ಬುಕ್ ಮೂಲಕ ಕ್ಷಮೆ ಕೇಳಿದ್ದಾರೆ. ''ಕ್ಷಮಿಸಿ, ನಮ್ಮಿಂದ ತಪ್ಪಾಗಿದೆ. ನಾವು ನಮ್ಮ ತಪ್ಪನ್ನು ಗುರುತಿಸಿದ್ದೇವೆ ಹಾಗೂ ತಪ್ಪನ್ನು ಒಪ್ಪಿಕೊಳ್ಳುತ್ತೇವೆ'' ಎಂದಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ಹೇಳಿರುವ ಸಂಭಾಷಣೆಯಿಂದ ವಿವಾದ

ಪೃಥ್ವಿರಾಜ್ ಸುಕುಮಾರನ್ ಹೇಳಿರುವ ಸಂಭಾಷಣೆಯಿಂದ ವಿವಾದ

'ಕಡುವ' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಾಯಕ ಪಾತ್ರಧಾರಿ ಕಡುವಕುನೇಲ್ ಕುರುವಚ್ಚನ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ದೃಶ್ಯವೊಂದರಲ್ಲಿ ಮಾತನಾಡುವ ನಾಯಕ, ''ಪೋಷಕರ ಕುಕೃತ್ಯಗಳಿಂದ, ಹಿಂದಿನ ಜನ್ಮದ ಪಾಪಗಳಿಂದ ಅವರಿಗೆ ಅಂಗವಿಕಲ ಮಕ್ಕಳು ಹುಟ್ಟುತ್ತವೆ. ಯಾವ ರೀತಿಯ ಪಾಪ ಮಾಡಿರುತ್ತಾರೊ ಅದೇ ಮಾದರಿಯ ಅಂಗವಿಕಲತೆಯುಳ್ಳ ಮಕ್ಕಳು ಹುಟ್ಟುತ್ತಾರೆ'' ಎನ್ನುತ್ತಾರೆ. ಈ ಸಂಭಾಷಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸಿನಿಮಾದ ಸಂಭಾಷಣೆ ಬಗ್ಗೆ ತೀವ್ರ ಆಕ್ರೋಶ

ಸಿನಿಮಾದ ಸಂಭಾಷಣೆ ಬಗ್ಗೆ ತೀವ್ರ ಆಕ್ರೋಶ

ಕೇರಳ ಅಂಗವಿಕಲ ಮಕ್ಕಳ ಕಲ್ಯಾಣ ಖಾತೆ ಆಯುಕ್ತ ಎಸ್‌ಎಚ್ ಪಂಚಪಾಕೇಸನ್ ಸೇರಿದಂತೆ ಹಲವು ಅಂಗವಿಕಲ ಸಂಸ್ಥೆಗಳು, ಅಂಗವಿಕಲರ ಪರವಾಗಿ ಕೆಲಸ ಮಾಡುವ ಎನ್‌ಜಿಓಗಳು, ಸ್ವತಃ ಕೆಲವು ಅಂಗವಿಕರು, ಅಂಗವಿಕಲ ಮಕ್ಕಳ ಪೋಷಕರು ಸಿನಿಮಾದ ವಿರುದ್ಧ ತೀವ್ರ ಆಕ್ರೋಶವನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸಿದ್ದಾರೆ. ಕೂಡಲೇ ತಾವು ಮಾಡಿದ ತಪ್ಪು ಅರಿತ ಚಿತ್ರತಂಡ ಸಿನಿಮಾದ ಆ ವಿವಾದಾತ್ಮಕ, ಅಸೂಕ್ಷ್ಮ ಸಂಭಾಷಣೆಯನ್ನು ತೆಗೆದು ಹಾಕಿದೆ. ಜೊತೆಗೆ ಕ್ಷಮೆ ಕೋರಿದೆ.

ರಬ್ಬರ್ ಪ್ಲಾಂಟರ್ ಹಾಗೂ ಪೊಲೀಸ್ ಇಲಾಖೆ ನಡುವಿನ ಕತೆ

ರಬ್ಬರ್ ಪ್ಲಾಂಟರ್ ಹಾಗೂ ಪೊಲೀಸ್ ಇಲಾಖೆ ನಡುವಿನ ಕತೆ

'ಕಡುವ' ಸಿನಿಮಾವು ಜುಲೈ 7 ರಂದು ಬಿಡಗುಡೆ ಆಗಿದೆ. ಸಿನಿಮಾವು ಕಡುವಕುನೇಲ್ ಕುರುವಚ್ಚನ್ ಹೆಸರಿನ ರಬ್ಬರ್ ಪ್ಲಾಂಟರ್ ಹಾಗೂ ಪೊಲೀಸ್ ಮಹಾನಿರ್ದೇಶಕ ಜೋಸೆಫ್ ಚಾಂಡಿ ಎಂಬುವರ ನಡುವೆ ನಡೆವ ಅಹಂಕಾರ ಜನಿತ ಜಗಳಗಳ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾವನ್ನು ಶಾಜಿ ಕೈಲಾಸ್ ನಿರ್ದೇಶನ ಮಾಡಿದ್ದು, ಬಂಡವಾಳ ಹೂಡಿರುವುದು ಸುಪ್ರಿಯಾ ಮೆನನ್ ಮತ್ತು ಲಿಸ್ಟಿನ್ ಸ್ಟೀಫನ್. ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರ್ ಜೊತೆಗೆ ಬಾಲಿವುಡ್‌ನ ವಿವೇಕ್ ಒಬೆರಾಯ್, ಸಂಯುಕ್ತಾ ಮೆನನ್ ಇನ್ನೂ ಹಲವರು ನಟಿಸಿದ್ದಾರೆ.

More from Filmibeat

English summary
Actor Pruthviraj Sukumaran said sorry and movie team deleted controversial scene from Kaduma Malayalam movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X