ಪುನೀತ್ ರಾಜ್ ಕುಮಾರ್ ಮಲಯಾಳಂ 'ಮೈತ್ರಿ'
ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಬಾಯಲ್ಲೂ ಕೇಳಿಬರುತ್ತಿರುವ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಮೈತ್ರಿ'. ಈ ಚಿತ್ರ ಪುನೀತ್ ಅವರ ವೃತ್ತಿ ಬದುಕಿನಲ್ಲಿ ನಿರೀಕ್ಷೆಗೂ ಮೀರಿ ಸದ್ದು ಮಾಡುತ್ತಿದೆ.
ಬಾಲಾಪರಾಧಿಗಳ ಬಗೆಗಿನ ಕಥಾಹಂದರ ಈ ಚಿತ್ರದಲ್ಲಿ ಪುನೀತ್ ಅವರು ಅವರಾಗಿಯೇ ಅಭಿನಯಿಸಿದ್ದಾರೆ. ಈ ಚಿತ್ರದ ಗಮನಾರ್ಹ ಪಾತ್ರದಲ್ಲಿ ಪರಿಪೂರ್ಣ ನಟ ಮೋಹನ್ ಲಾಲ್ ಅಭಿನಯಿಸಿದ್ದು ಇದೀಗ 'ಮೈತ್ರಿ' ಚಿತ್ರ ಮಲಯಾಳಂನಲ್ಲೂ ಬಿಡುಗಡೆಯಾಗಲು ಸಿದ್ಧವಾಗಿದೆ. [ಮೈತ್ರಿ ಚಿತ್ರ ವಿಮರ್ಶೆ]

ಇದೇ ಮಾರ್ಚ್ ಎರಡನೇ ವಾರದಲ್ಲಿ ಮಲಯಾಳಂ 'ಮೈತ್ರಿ' ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ರವಿಕಾಳೆ ಪೋಷಿಸಿದ್ದ ಪಾತ್ರವನ್ನು ಮಲಯಾಳಂನಲ್ಲಿ ಕಲಾಭವನ್ ಮಣಿ ಮಾಡಲಿದ್ದಾರೆ. ಆದರೆ ಪುನೀತ್ ಅವರ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಹೇಳಿದ್ದಾರೆ.
ಈ ಬಗ್ಗೆ ವಿವರ ನೀಡಿರುವ ಪುನೀತ್, ತಮಿಳು, ತೆಲುಗಿನಲ್ಲಿ ಆಗಿದ್ದರೆ ನಾನೇ ಧ್ವನಿ ನೀಡುತ್ತಿದ್ದೆ. ಆದರೆ ಮಲಯಾಳಂ ನನಗೆ ಕಷ್ಟ. ಹಾಗಾಗಿ ತಮ್ಮ ಪಾತ್ರಕ್ಕೆ ಬೇರೆಯವರು ಧ್ವನಿ ನೀಡಿದ್ದಾರೆ ಎಂದಿದ್ದಾರೆ. ಈ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಪುನೀತ್ ಅಡಿಯಿಟ್ಟಂತಾಗಿದೆ. (ಏಜೆನ್ಸೀಸ್)


Click it and Unblock the Notifications











