ಮತ್ತೊಮ್ಮೆ ಮಲಯಾಳಂ ಚಿತ್ರರಂಗಕ್ಕೆ ರಾಗಿಣಿ ದ್ವಿವೇದಿ

ಡ್ರಗ್ಸ್ ಪ್ರಕರಣದಿಂದಾಗಿ ಕಳೆದ ವರ್ಷ ಹಾಗೂ ಈ ವರ್ಷಾರಂಭದಲ್ಲಿ ಬಹುವಾಗಿ ಸುದ್ದಿಯಾಗಿದ್ದ ನಟಿ ರಾಗಿಣಿ ದ್ವಿವೇದಿ ಈಗ ನಿಧಾನಕ್ಕೆ ಚಿತ್ರರಂಗದಲ್ಲಿ ಮತ್ತೆ ತೊಡಗಿಸಿಕೊಂಡಿದ್ದಾರೆ.

ಇತ್ತೀಚಿನ ಕೆಲವು ದಿನಗಳಿಂದ ಇನ್‌ಸ್ಟಾಗ್ರಾಂನಲ್ಲಿ ತಮ್ಮ ವಿವಿಧ ಮಾದಕ ಭಂಗಿಯ ಚಿತ್ರಗಳನ್ನು ಅಪ್‌ಲೋಡ್ ಮಾಡುತ್ತಿದ್ದ ರಾಗಿಣಿಗೆ ಮಲಯಾಳಂ ಸಿನಿಮಾರಂಗದಿಂದ ಅವಕಾಶವೊಂದು ಅರಸಿ ಬಂದಿದೆ.

ನಟಿ ರಾಗಿಣಿ, ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ಬಹಳ ಬೋಲ್ಡ್ ಆದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೇರಳದ 200 ವರ್ಷ ಹಳೆಯ ಟೀ ಎಸ್ಟೇಟ್‌ನಲ್ಲಿ ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿತ್ತು. ಸಿನಿಮಾಕ್ಕೆ 'ಶೈಲಾ' ಎಂದು ಹೆಸರಿಡಲಾಗಿದೆ.

Ragini Dwivedi Acting In A Malayalam Movie

'ಶೈಲಾ' ಸಿನಿಮಾದಲ್ಲಿ ಪತಿಯನ್ನು ಕಳೆದುಕೊಂಡ ಆದರೆ ಬಹಳ ಬೋಲ್ಡ್ ಆದ ಮಹಿಳೆಯ ಪಾತ್ರದಲ್ಲಿ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಕೊಲೆಯ ಸುತ್ತ ನಡೆಯುವ ಕತೆಯಾಗಿದೆ.

ಸಿನಿಮಾವನ್ನು ಬಾಲು ನಾರಾಯಣ್ ಎಂಬುವರು ನಿರ್ದೇಶನ ಮಾಡುತ್ತಿದ್ದು, ಮೋಹನ್‌ಲಾಲ್ ನಟನೆಯ ಮಲಯಾಳಂನ ಸೂಪರ್ ಹಿಟ್ 'ದೃಶ್ಯಂ' ಸಿನಿಮಾಕ್ಕೆ ಸಂಗೀತ ನೀಡಿರುವ ಅನಿಲ್ ಜಾನ್ಸನ್ ರಾಗಿಣಿ ನಟಿಸುತ್ತಿರುವ 'ಶೈಲಾ' ಸಿನಿಮಾಕ್ಕೂ ಸಂಗೀತ ನೀಡುತ್ತಿದ್ದಾರೆ. 'ಶೈಲಾ' ಸಿನಿಮಾ ಮಲಯಾಳಂನಲ್ಲಿ ಮಾತ್ರವೇ ಅಲ್ಲದೆ ಕನ್ನಡದಲ್ಲಿಯೂ ಬಿಡುಗಡೆ ಆಗಲಿದೆ. ಆದರೆ ಕನ್ನಡದಲ್ಲಿ ಸಿನಿಮಾಕ್ಕೆ ಯಾವ ಹೆಸರಿಡಲಾಗುತ್ತದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ರಾಗಿಣಿ ದ್ವಿವೇದಿಗೆ ಇದು ಮೊದಲ ಮಲಯಾಳಂ ಸಿನಿಮಾ ಏನಲ್ಲ. ಈ ಹಿಂದೆ 2010 ರಲ್ಲಿ 'ಕಂದಹಾರ್' ಸಿನಿಮಾದಲ್ಲಿ ರಾಗಿಣಿ ನಟಿಸಿದ್ದರು. ಈ ಸಿನಿಮಾದಲ್ಲಿ ಮೋಹನ್‌ಲಾಲ್ ಹಾಗೂ ಅಮಿತಾಬ್ ಬಚ್ಚನ್ ಮುಖ್ಯಪಾತ್ರದಲ್ಲಿದ್ದರು. ಬಳಿಕ 2012 ರಲ್ಲಿ 'ಫೇಸ್‌2ಫೇಸ್' ಹೆಸರಿನ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಮಲಯಾಳಂನ ಮತ್ತೊಬ್ಬ ಸೂಪರ್ ಸ್ಟಾರ್ ಮಮ್ಮುಟಿ ಜೊತೆ ತೆರೆ ಹಂಚಿಕೊಂಡಿದ್ದರು ರಾಗಿಣಿ.

ಕನ್ನಡದಲ್ಲಿ ರಾಗಿಣಿ ನಟಿಸಿರುವ 'ಗಾಂಧಿಗಿರಿ' ಸಿನಿಮಾ ಬಿಡುಗಡೆ ಆಗಲಿಕ್ಕಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಪ್ರೇಮ್ ಹೀರೋ. ಅದರ ಬಳಿಕ ನಂದ ಕಿಶೋರ್ ನಿರ್ದೇಶನದ 'ರಾಣಾ' ಸಿನಿಮಾದಲ್ಲಿಯೂ ರಾಗಿಣಿ ವಿಶೇಷ ಹಾಡಿಗೆ ನರ್ತಿಸುತ್ತಿದ್ದಾರೆ. ಇತ್ತಿಚೆಗಷ್ಟೆ ನಟಿ ರಾಗಿಣಿ ಬಾಲಿವುಡ್‌ನ ಆಲ್ಬಂ ಹಾಡೊಂದರಲ್ಲಿ ಕುಣಿದು ಬಂದಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ರಾಗಿಣಿ ದ್ವಿವೇದಿ ಬಂಧನಕ್ಕೆ ಒಳಗಾಗಿದ್ದರು. ಹಲವು ದಿನ ಜೈಲಿನಲ್ಲಿ ಕಳೆದ ರಾಗಿಣಿ ಇದೇ ವರ್ಷ ಜನವರಿ 25 ರಂದು ಜಾಮೀನಿನ ಮೇಲೆ ಬಿಡುಗಡೆ ಆಗಿ ಹೊರಗೆ ಬಂದರು. ಆ ಬಳಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ರಾಗಿಣಿ ಇತ್ತೀಚೆಗೆ ಮತ್ತೆ ಸಿನಿಮಾ ವೃತ್ತಿಯ ಕಡೆ ಗಮನವಹಿಸಿದ್ದಾರೆ.

More from Filmibeat

English summary
Actress Ragini Dwivedi acting in a Malayalam movie in a bold character. Movie will release in Kannada language also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X