For Quick Alerts
  ALLOW NOTIFICATIONS  
  For Daily Alerts

  ರಾಮ ರಾಮಾ, ಹೀಗ್ಯಾಕೆ ರಾಗಿಣಿ ರಾಮಾಯಣ!

  |

  ನಟಿ ರಾಗಿಣಿ ದ್ವಿವೇದಿ ಕಥೆ ಅದೇನೋ ಗೊತ್ತಿಲ್ಲ. ಸುಮ್ಮನೇ ಅದೇನೇನೋ ಸುದ್ದಿಯಾಗುತ್ತೆ, ಆಗಿದ್ದಕ್ಕಿಂತ ವೇಗವಾಗಿ ಠುಸ್ ಆಗುತ್ತೆ. ಆ ಬಗ್ಗೆ ಅವರನ್ನು ಕೇಳಿದರೆ ಹೌದಾ, ನಂಗೆ ಹಾಗೆ ಸುದ್ದಿಯಾಗಿದ್ದೇ ಗೊತ್ತಿರಲಿಲ್ಲ" ಎನ್ನುತ್ತಾರೆ. ಸುದ್ದಿಯಾಗಿದ್ದು ನಿಜ, ನಾವು ಬರೆದಿದ್ದೂ ನಿಜವೆನ್ನಲು ನೀವಿದ್ದೀರಿ. ಹಾಗಿದ್ದರೆ ಹಿಗೇಕಾಗುತ್ತಿದೆ? ರಾಗಿಣಿಯವರಂತೆ ನಮಗೂ ಈ ಬಗ್ಗೆ ಗೊತ್ತಿಲ್ಲಾರೀ....!

  ಉಪೇಂದ್ರ-ಓಂ ಪ್ರಕಾಶ್ ರಾವ್ ಸಂಗಮದ ಬರಲಿರುವ ಚಿತ್ರಕ್ಕೆ ರಾಗಿಣಿ ನಾಯಕಿ ಎನ್ನಲಾಯ್ತು. ಶಿವಣ್ಣ. ಪ್ರಿಯಾಮಣಿ ಜೋಡಿಯಲ್ಲಿ ಬರಲಿರುವ 'ಲಕ್ಷ್ಮಿ' ಚಿತ್ರದಲ್ಲಿ ರಾಗಿಣಿ ಐಟಂ ಡ್ಯಾನ್ಸ್ ಮಾಡಲಿದ್ದಾರೆ ಎನ್ನಲಾಯ್ತು. ಅಷ್ಟೇ ಅಲ್ಲ, ತಮಿಳಿನ ಪ್ರತಿಷ್ಠಿತ ಬ್ಯಾನರ್ ಹಾಗೂ ನಾಯಕನ ಚಿತ್ರವೊಂದರಲ್ಲಿ ರಾಗಿಣಿ ನಾಯಕಿಯಾಗಿದ್ದಾರೆ ಎಂಬ ಸುದ್ದಿ ಬಂತು. ಆದರತೆ ಎಲ್ಲವೂ ಸುಳ್ಳು, ಯಾಕೆ ಹೀಗೆ ಸುದ್ದಿಯಾಯ್ತೋ ಗೊತ್ತಿಲ್ಲ ಎಂದಿದ್ದಾರೆ ಸ್ವತಃ ರಾಗಿಣಿ.

  "ನೀವು ಹೇಳುವ ಯಾವುದೇ ಪ್ರಾಜೆಕ್ಟ್ ಬಗ್ಗೆ ನನಗೆ ಗೊತ್ತೇ ಇಲ್ಲ. ಈ ಬಗ್ಗೆ ನನ್ನನ್ನು ಯಾರೂ ಇದುವರೆಗೂ ಸಂಪರ್ಕಿಸಿಲ್ಲ. ಆದರೂ ಹಾಗೆಲ್ಲಾ ಯಾಕೆ ಸುದ್ದಿಯಾಗಿದೆ ಅನ್ನೋದು ನಂಗೆ ಗೊತ್ತಿಲ್ಲ. ಆ ಆಫರ್ ಬಂದಾಗ ನೋಡೋಣ. ನನಗಂತೂ ಐಟಂ ಹಾಡುಗಳು ತಪ್ಪೆಂದು ಅನ್ನಿಸುತ್ತಿಲ್ಲ" ಎಂಬ ಅಭಿಪ್ರಾಯ ರಾಗಿಣಿಯವರಿಂದ ಬಂದಿದೆ. ಎಂದಿದ್ದಾರೆ. ಇನ್ನು, ಹಿಂದಿಯ ಕಹಾನಿ ಕಥೆ ಅದೇನಾಯ್ತೋ ದೇವರೇ ಬಲ್ಲ!

  ಬಾಲಿವುಡ್‌ನಲ್ಲಿ ಭಾರೀ ಹೆಸರು ಮಾಡಿದ್ದ 'ಕಹಾನಿ'ಯ ಕನ್ನಡ ಆವೃತ್ತಿಯಲ್ಲಿ ಅಲ್ಲಿ ವಿದ್ಯಾ ಬಾಲನ್ ಮಾಡಿದ್ದ ಗರ್ಭಿಣಿ ಹುಡುಗಿ ಪಾತ್ರವನ್ನು ರಾಗಿಣಿ ಮಾಡಲಿದ್ದಾರೆ. ಎಸ್. ಸುರೇಶ್ ಇದರ ನಿರ್ಮಾಪಕರು ಎಂದು ಗೊಂದಲದಿಂದಲೇ ಸುದ್ದಿಯಾಗಿತ್ತು. ಅದು ಈಗಲೂ ಮುಂದುವರಿದಿದೆ. ಇನ್ನೂ ಹಿಂದಿಯಿಂದ ರಿಮೇಕ್ ಹಕ್ಕುಗಳನ್ನು ತಂದ ಹಾಗಿಲ್ಲ ಎಂದು ರಾಗಿಣಿ ಹೇಳಿದ್ದಾರೆ. ಅವರ ಪ್ರಕಾರ, ಈ ವರ್ಷವಂತೂ ಆ ಚಿತ್ರ ಶುರುವಾಗುವ ಸಾಧ್ಯತೆ ಕಡಿಮೆ. ಇನ್ನು ಏನಿದ್ದರೂ 2013ರಲ್ಲಷ್ಟೇ ಚಿತ್ರೀಕರಣ.

  ಕಾರ್ತಿಕೇಯನ್ ನಿರ್ದೇಶನ ಹಾಗೂ ಸಂತೋಷ್ ಭವನ್ ನಟನೆಯ 'ಅರಿಯಾನ್' ಚಿತ್ರದಲ್ಲಿ ನಟಿಸಬೇಕಿದ್ದ ರಾಗಿಣಿ. ಅದರಲ್ಲಿ ತಾವು ನಟಿಸುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಶಿವಣ್ಣ ಜೋಡಿಯ 'ಶಿವ' ಬಿಡುಗಡೆಯಾಗಿದೆ. ಯೋಗೇಶ್ ಜೋಡಿಯ 'ಬಂಗಾರಿ' ಚಿತ್ರೀಕರಣ ಮುಗಿದಿದೆ. 'ರಾಗಿಣಿ ಐಪಿಎಸ್' ಶೂಟಿಂಗ್ ಹಂತದಲ್ಲಿದೆ. ಈ ನಡುವೆ ಮಮ್ಮುಟ್ಟಿ ಜೊತೆ ಮಲಯಾಳಂನಲ್ಲಿ 'ಫೇಸ್ 2 ಫೇಸ್' ಚಿತ್ರಕ್ಕೆ ರಾಗಿಣಿ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ರಾಗಿಣಿ ಬಿಜಿ...(ಒನ್ ಇಂಡಿಯಾ ಕನ್ನಡ)

  English summary
  Actress Ragini Dwivedi is facing Heavy Gossips in recent days. She herself told, what is going wrong, I don't know, but unnecessary gossips are spreading about me. She added that she didn't act in Tamil movie Ariyaan. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X