Toby: ಮಲಯಾಳಂನಲ್ಲಿ ಟೋಬಿ ಬಿಡುಗಡೆ, ಡಿಸ್ಟ್ರಿಬ್ಯೂಷನ್ ವಹಿಸಿಕೊಂಡ ಸ್ಟಾರ್ ನಟ!

ಕಳೆದ ತಿಂಗಳ ಆಗಸ್ಟ್ 25 ರಂದು ಬಿಡುಗಡೆಯಾದ ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಚಿತ್ರವು ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾವೂ ಈಗ ಮಲಯಾಳಂನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಬರೆದಿರುವ ಮತ್ತು ಬಸಿಲ್ ಅಲ್ಚಲಕ್ಕಲ್ ಅವರ ನಿರ್ದೇಶನದ ಟೋಬಿ ಸೆಪ್ಟೆಂಬರ್ 22 ರಂದು ಮಲಯಾಳಂ ಬಿಡುಗಡೆಯಾಗಲಿದೆ.

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಟೋಬಿ ಸಿನಿಮಾ ಬಿಡುಗಡೆಯ ನಂತರ, ಚಲನಚಿತ್ರವನ್ನು ನೋಡಿದ ಹಲವರು ಉತ್ತಮ ವಿಮರ್ಶೆ ನೀಡಿದ್ದರು. ಆದರೆ, ಈ ಹೊಗಳಿಕೆಯು ಚಿತ್ರದ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಲು ಸಾಧ್ಯವಾಗಲಿಲ್ಲ. ಸಿನಿಮಾ ತಂಡದ ನಿರೀಕ್ಷೆಯಂತೆ ಫಲ ದೊರೆಯಲಿಲ್ಲ ಎಂಬುದಂತೂ ನಿಜ.

Raj B Shetty starrer Toby to release in Malayalam, distributed under Dulquer Salmaan’s production

ಟೋಬಿಗೆ ಮಲಯಾಳಂನಲ್ಲಿ ಸ್ಟಾರ್ ನಟನ ಸಾಥ್

ರಾಜ್ ಬಿ ಶೆಟ್ಟಿ ಈಗಾಗಲೇ ಮಲಯಾಳಂ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅವರಿಗೂ ಮಲಯಾಳಂ ಸಿನಿತಂಗಕ್ಕೂ ನಂಟು ಬೆಳೆದಿದೆ. ಇದರ ಬೆನ್ನಲ್ಲೆ ಅವರ ಟೋಬಿ ಸಿನಿಮಾ ಟಿಸ್ಟ್ರಿಬ್ಯೂಷನ್‌ಗೂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರ ಸಾಥ್ ಸಿಕ್ಕಿದೆ. ಮಾಲಿವುಡ್‌ನಲ್ಲಿ ಬಿಡುಗಡೆಯಾಗಲಿರುವ ಟೋಬಿ ಸಿನಿಮಾವನ್ನು ದುಲ್ಕರ್ ಅವರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವಿತರಿಸಲಾಗುತ್ತದೆ.

ಕೇರಳದಲ್ಲಿ ಟೋಬಿ ಡಬ್ಬಿಂಗ್ ಮಲಯಾಳಂ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. ದುಲ್ಕರ್ ಸಲ್ಮಾನ್ ಅವರ ಬ್ಯಾನರ್, ವೇಫೇರರ್ ಫಿಲ್ಮ್ಸ್ ರಾಜ್ಯದಲ್ಲಿ ಚಿತ್ರವನ್ನು ವಿತರಿಸಲಿದೆ. ಈಗಾಗಲೇ ಚಿತ್ರತಂಡ ಮತ್ತು ರಾಜ್ ಬಿ ಶೆಟ್ಟಿ ಟೋಬಿ ಬಗ್ಗೆ ಕೇರಳದಲ್ಲಿ ಪ್ರಚಾರ ಆರಂಭಿಸಿದ್ದಾರೆ ಎಂಬ ಮಾಹಿತಿಯಿದೆ.

Raj B Shetty starrer Toby to release in Malayalam, distributed under Dulquer Salmaan’s production

ರಾಜ್ ಬಿ ಶೆಟ್ಟಿ ನಿರ್ದೇಶನದ 'ಗರುಡ ಗಮನ ವೃಷಭ ವಾಹನ' ಸಿನಿಮಾಕ್ಕೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವರು ಕೂಡ ಮಲಯಾಳಂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈಗ ತಮ್ಮ ನೆಚ್ಚಿನ 'ಟೋಬಿ' ಸಿನಿಮಾವನ್ನು ಮಲಯಾಳಂನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಈ ಹಿಂದೆಯೇ ನಟ ರಾಜ್ ಬಿ ಶೆಟ್ಟಿ, 'ಟೋಬಿ ಎಂದರೆ ನನಗೆ ತುಂಬಾ ಇಷ್ಟ' ಎಂದು ಹೇಳಿದ್ದರು. "ನನ್ನೊಳಗೆ ಹಲವು ಭಾವನೆಗಳು ತುಂಬಿದ್ದವು, ಹತಾಶವಾಗಿ ಅವು ಹೊರಬರಲು ದಾರಿ ಹುಡುಕುತ್ತಿದ್ದವು. ಅವುಗಳನ್ನು ನೇರವಾಗಿ ಹೊರಹಾಕಲುಸಾಧ್ಯವಾಗದೆ, ನಾನು ಅವುಗಳನ್ನು ಈ ಚಲನಚಿತ್ರ್ ಮೂಲಕ ಹೊರಹಾಕಿದ್ದೇನೆ. ಟೋಬಿ ನನ್ನ ಭಾವನೆಗಳಿಗೆ ಮಾರ್ಗ ಒದಗಿಸಿದ್ದಾನೆ" ಎಂದಿದ್ದರು.

ಟೋಬಿ

ಟೋಬಿ ಆಗಸ್ಟ್ 25 ರಂದು ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ಮತ್ತು ರಾಜ್ ದೀಪಕ್ ಶೆಟ್ಟಿ ನಟಿಸಿದ್ದಾರೆ. ಇನ್ನು, ರಾಜ್ ಬಿ ಶೆಟ್ಟಿಯವರ ಟೋಬಿಯ ಮಲಯಾಳಂ ಆವೃತ್ತಿಯು ಕನ್ನಡ ಆವೃತ್ತಿಗಿಂತ ಭಿನ್ನವಾಗಿರಲಿದೆ. ಸ್ವಲ್ಪ ಸಮಯದ ಹಿಂದೆ ಬಿಡುಗಡೆಯಾದ ಟೋಬಿಯ ಮಲಯಾಳಂ ಟ್ರೇಲರ್ ಗಮನಿಸಿದರೆ, ಡಬ್ಬಿಂಗ್ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುವುದು ಎಂಬುದು ಸ್ಪಷ್ಟವಾಗಿದೆ.

More from Filmibeat

English summary
Raj B Shetty starrer Toby to release in Malayalam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X