ತನ್ನ ಮದುವೆಯನ್ನೇ ಮುಂದೂಡಿ ಸಂತ್ರಸ್ಥರ ಸಹಾಯಕ್ಕೆ ನಿಂತ ಮಲಯಾಳ ನಟ
ಕೇರಳ ರಾಜ್ಯದಲ್ಲಿ ಎದುರಾಗಿರುವ ಭೀಕರ ಪ್ರವಾಹದಿಂದ ದೇವರನಾಡು ಸಂಪೂರ್ಣವಾಗಿ ಮುಳುಗಿದೆ. ಅಲ್ಲಿನ ಜನರ ಸೂರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೇರಳಿಗರ ಕಷ್ಟಕ್ಕೆ ಮಿಡಿದ ದೇಶದ ಜನ ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ನಿಂತಿದ್ದಾರೆ. ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳು, ಪೊಲೀಸರು, ಸಾರ್ವಜನಿಕರು, ದಿನಗೂಲಿ ಕಾರ್ಮಿಕರು ಹೀಗೆ ಎಲ್ಲರೂ ನೆರವಾಗಿದ್ದಾರೆ.
ಇಂತಹ ಹಲವರ ಮಧ್ಯೆ ಮಲಯಾಳಂ ನಟನೊಬ್ಬ ತುಂಬಾ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಕೇರಳ ಜನರ ಸ್ಥಿತಿ ನೋಡಿ ತನ್ನ ಮದುವೆಯನ್ನೇ ಮುಂದೂಡಿಕೊಂಡಿದ್ದಾರೆ. ನಿಗದಿಯಾಗಿದ್ದ ಮದುವೆಯನ್ನ ಮುಂದೂಡಿ ಕೇರಳ ಜನರ ಸಹಾಯಕ್ಕೆ ನಿಂತಿದ್ದಾರೆ.
ಪ್ರವಾಹಕ್ಕೆ ಸಿಲುಕಿರುವ ಜನರ ಜೊತೆ ನಿಂತು ನೆರವು ನೀಡಿದ್ದಾರೆ. ಸಂತ್ರಸ್ಥರ ಕಾರ್ಯಾಚರಣೆಯಲ್ಲಿ ಭಾಗಿಯಾಗಿ, ಸಾಮಾನ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಅಷ್ಟಕ್ಕೂ ಯಾರು ಆ ನಟ.? ಮುಂದೆ ಓದಿ.....

ರಿಚಾ ಚಡ್ಡಾ ಅವರ ಸಹನಟ
ಬಾಲಿವುಡ್ ನಟಿ ರಿಚಾ ಚಡ್ಡಾ 'ಶಕೀಲಾ' ಅವರ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಿಚಾ ಚಡ್ಡಾ ಜೊತೆ ನಟಿಸುತ್ತಿರುವ ರಾಜೀವ್ ಪಿಳ್ಳೈ ತನ್ನ ಮದುವೆಯನ್ನ ಮುಂದೂಡಿಕೊಂಡು ಸಂತ್ರಸ್ಥರ ಸಹಾಯಕ್ಕೆ ನಿಂತಿದ್ದಾರೆ.
ಕೊಚ್ಚಿಹೋದದ್ದು ಸೂರೊಂದೇ ಅಲ್ಲ,ಕನಸೂ!ಪ್ರವಾಹ ಸಂತ್ರಸ್ತನ ಕಣ್ಣೀರ ಕತೆ

ರಿಚಾ ಚಡ್ಡಾ ಅವರ ಸಹನಟ
ಬಾಲಿವುಡ್ ನಟಿ ರಿಚಾ ಚಡ್ಡಾ 'ಶಕೀಲಾ' ಅವರ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಿಚಾ ಚಡ್ಡಾ ಜೊತೆ ನಟಿಸುತ್ತಿರುವ ರಾಜೀವ್ ಪಿಳ್ಳೈ ತನ್ನ ಮದುವೆಯನ್ನ ಮುಂದೂಡಿಕೊಂಡು ಸಂತ್ರಸ್ಥರ ಸಹಾಯಕ್ಕೆ ನಿಂತಿದ್ದಾರೆ.
ಕೊಚ್ಚಿಹೋದದ್ದು ಸೂರೊಂದೇ ಅಲ್ಲ,ಕನಸೂ!ಪ್ರವಾಹ ಸಂತ್ರಸ್ತನ ಕಣ್ಣೀರ ಕತೆ

ನಿಶ್ಚಯವಾಗಿದ್ದ ಮದುವೆ ಮುಂದೂಡಿಕೆ
ನಿಶ್ಚಿತಾ ಎಂಬುವರ ಜೊತೆ ನಟ ರಾಜೀವ್ ಪಿಳ್ಳೈ ಅವರ ಮದುವೆ ಮೂರು ದಿನಗಳ ಹಿಂದೆ ನಡೆಯಬೇಕಿತ್ತು. ಆದ್ರೆ, ಕೇರಳದಲ್ಲಿ ಎದುರಾದ ಬೀಕರ ಪ್ರವಾಹದ ಹಿನ್ನೆಲೆ ಜನರ ಕಷ್ಟ ನೋಡಿ, ಮದುವೆಯನ್ನ ಮುಂದೂಡಿಕೊಂಡು ಜನರಿಗೆ ಜೊತೆಯಾಗಿ ನಿಂತಿದ್ದಾರೆ. ಸದ್ಯಕ್ಕೆ ಮುಂದೂಡಿರುವ ಮದುವೆ ಮುಂದಿನ ತಿಂಗಳು ನಡೆಯಲಿದೆ ಎನ್ನಲಾಗಿದೆ.
ಕೇರಳ ಪ್ರವಾಹದಲ್ಲಿ ಕೊಚ್ಚಿಹೋದ ಸರ್ಟಿಫಿಕೇಟ್, ವಿದ್ಯಾರ್ಥಿ ಆತ್ಮಹತ್ಯೆ

ಜನರಲ್ಲಿ ಒಬ್ಬನಾದ ನಟ
ಪ್ರವಾಹ ಮಧ್ಯೆ ಸಿಲುಕಿಕೊಂಡಿರುವ ಜನರ ಜೊತೆ ನಿಂತು, ಅವರ ಸಾಮಾಗ್ರಿಗಳನ್ನ ತೆಗೆದುಕೊಂಡು ಬರಲು ಸಹಾಯವಾಗಿದ್ದಾರೆ. ತೂಕದ ವಸ್ತುಗಳನ್ನ ಎತ್ತುಕೊಂಡು ಬಂದು ಸ್ಥಳೀಯರಿಗೆ ಜೊತೆಯಾಗಿ ನಿಂತಿದ್ದಾರೆ. ಈ ಫೋಟೋಗಳನ್ನ ನಟಿ ರಿಚಾ ಚಡ್ಡಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಕೇರಳದಲ್ಲಿ ಪುನರ್ವಸತಿಗೆ ಕೋಟ್ಯಾಂತರ ರೂಪಾಯಿ ನೀಡಿದ ಬಿಜೆಪಿ ಸರಕಾರಗಳು

ರಾಜೀವ್ ಪಿಳ್ಳೈ ಬಗ್ಗೆ ಹೆಚ್ಚಿನ ವಿವರ
ರಾಜೀವ್ ಪಿಳ್ಳೈ ಮಲಯಾಳಂ ಚಿತ್ರರಂಗದ ಖ್ಯಾತ ನಟ. 2011ರಲ್ಲಿ 'ಸಿಟಿ ಅಫ್ ಗಾಡ್' ಎಂಬ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಇವರು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಮಲಯಾಳಂ ಚಿತ್ರರಂಗವನ್ನ ಪ್ರತಿನಿಧಿಸಿದ್ದಾರೆ. 20ಕ್ಕೂ ಅಧಿಕ ಸಿನಿಮಾ ಮಾಡಿರುವ ರಾಜೀವ್ ಸದ್ಯ, ಶಕೀಲಾ ಬಯೋಪಿಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











