'ಪ್ರೇಮಂ' ಸಿನಿಮಾಕ್ಕೆ ಮೊದಲ ಆಯ್ಕೆ ಸಾಯಿ ಪಲ್ಲವಿ ಆಗಿರಲಿಲ್ಲ! ಮತ್ಯಾರು?

ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮ ಅದ್ಭುತ ನಟನೆ ಮತ್ತು ನೃತ್ಯ ಕೌಶಲ್ಯದಿಂದ ಚಿತ್ರಪ್ರೇಮಿಗಳ ಹೃದಯ ಮಾತ್ರವಲ್ಲ ಸೆಲೆಬ್ರಿಟಿಗಳನ್ನೂ ಅಭಿಮಾನಿಗಳನ್ನಾಗಿ ಮಾಡಿಕೊಂಡಿದ್ದಾರೆ.

ಕಿರುಚಿತ್ರಗಳಲ್ಲಿ ನಟಿಸುತ್ತಿದ್ದ, ರಿಯಾಲಿಟಿ ಶೋಗಳಲ್ಲಿ ಡಾನ್ಸ್ ಮಾಡುತ್ತಿದ್ದ ಸಾಯಿ ಪಲ್ಲವಿ ನಟಿಯಾಗಿ ಪರಿಚಯವಾಗಿದ್ದು ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ. ಮೊದಲ ಸಿನಿಮಾದಲ್ಲಿಯೇ ಪ್ರಬುದ್ಧ ನಟನೆಯನ್ನು ಸಾಯಿ ಪಲ್ಲವಿ ನೀಡಿದ್ದರು.

'ಪ್ರೇಮಂ' ಸಿನಿಮಾದ ಮಲರ್ ಪಾತ್ರದಿಂದ ಸಾಯಿ ಪಲ್ಲವಿಯನ್ನು ಬೇರೆ ಮಾಡಲಾಗುವುದಿಲ್ಲ, ಆ ಪಾತ್ರವೇ ತಾನಾಗಿದ್ದರು ಸಾಯಿ ಪಲ್ಲವಿ. ಆದರೆ 'ಪ್ರೇಮಂ' ನಿರ್ದೇಶಕ ಅಲ್ಫೋನ್ಸ್ ಪುತ್ರೆನ್ ಮಲರ್ ಪಾತ್ರಕ್ಕೆ ಬೇರೆ ನಟಿಯನ್ನು ಆಯ್ಕೆ ಮಾಡಿದ್ದರು. ಅದೃಷ್ಟವಶಾತ್ ಆ ಪಾತ್ರ ಸಾಯಿ ಪಲ್ಲವಿ ಕೈಗೆ ಸಿಕ್ಕಿತು. ಆ ನಂತರ ಆಗಿದ್ದು ಈಗ ಇತಿಹಾಸ.

ನಟಿ ಅಸೀನ್ ಸೂಕ್ತವೆಂದು ಎನಿಸಿತ್ತು

ನಟಿ ಅಸೀನ್ ಸೂಕ್ತವೆಂದು ಎನಿಸಿತ್ತು

ಕಾಲೇಜು ಉಪನ್ಯಾಸಕಿ ಆಗಿರುವ ಮಲರ್ ತನ್ನ ವಿದ್ಯಾರ್ಥಿಯೊಂದಿಗೆ ಪ್ರೇಮದಲ್ಲಿ ಬೀಳುವುದು ಕತೆ. ಈ ಪಾತ್ರಕ್ಕೆ ತುಸು ಹಿರಿಯ ಆದರೆ ಸುಂದರವಾದ ನಟಿಯರಿಗೆ 'ಪ್ರೇಮಂ' ನಿರ್ದೇಶಕ ಅಲ್ಫೋನ್ಸ್ ಪುತ್ರೆನ್ ಹುಡುಕುತ್ತಿದ್ದರು. ಆಗ ಅವರಿಗೆ ಮೊದಲು ಅನಿಸಿದ್ದು ಈ ಸಿನಿಮಾಕ್ಕೆ ಆಗಿನ ಸ್ಟಾರ್ ನಟಿ ಅಸೀನ್ ಸೂಕ್ತವೆಂದು.

ಅಸೀನ್ ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ

ಅಸೀನ್ ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಅಲ್ಫೋನ್ಸ್, 'ನಾನು ಮೊದಲು ಸ್ಕ್ರಿಪ್ಟ್ ಅನ್ನು ಮಲಾಯಳಂನಲ್ಲಿ ಬರೆದಿದ್ದೆ ಆಗ ಅಸಿನ್ ಅನ್ನು ಮಲರ್ ಪಾತ್ರಕ್ಕಾಗಿ ನಿಶ್ಚಯಿಸಿದ್ದೆ. ಆಕೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ ಆದರೆ ಆಗಲಿಲ್ಲ. ನಟಯಕ ನಿವಿನ್ ಪೌಲಿ ಸಹ ಸಂಪರ್ಕಿಸಲು ಯತ್ನಿಸಿದರು ಆದರೆ ಸಾಧ್ಯವಾಗಲಿಲ್ಲ' ಎಂದಿದ್ದಾರೆ.

ಸಿನಿಮಾದಿಂದ ದೂರ ಉಳಿದಿದ್ದ ಅಸೀನ್

ಸಿನಿಮಾದಿಂದ ದೂರ ಉಳಿದಿದ್ದ ಅಸೀನ್

ಆದರೆ ಅಸೀನ್ 2012 ರ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದರು. 2012ರ ಬಳಿಕ ಮೂರು ವರ್ಷ ಯಾವ ಸಿನಿಮಾದಲ್ಲಿಯೂ ನಟಿಸಿರಲಿಲ್ಲ. 2015 ರಲ್ಲಿ 'ಆಲ್‌ ಈಸ್ ವೆಲ್' ಅವರ ಕೊನೆಯ ಸಿನಿಮಾ. 2016ರ ಆರಂಭದಲ್ಲಿ ಮದುವೆಯಾದ ಅಸೀನ್ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿಬಿಟ್ಟರು.

ಜಾರ್ಜಿಯಾದಿಂದ ರಜೆಗೆ ಬಂದಿದ್ದ ಸಾಯಿ ಪಲ್ಲವಿ

ಜಾರ್ಜಿಯಾದಿಂದ ರಜೆಗೆ ಬಂದಿದ್ದ ಸಾಯಿ ಪಲ್ಲವಿ

ಜಾರ್ಜಿಯಾದಿಂದ ರಜೆಗೆಂದು ಬಂದಿದ್ದ ಸಾಯಿ ಪಲ್ಲವಿಗೆ ಆ ಪಾತ್ರ ದೊರೆತಿತು. ಸಿನಿಮಾ ಚಿತ್ರೀಕರಣ ಮುಗಿಸಿ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಜಾರ್ಜಿಯಾಗೆ ವಾಪಸ್ ಹೋಗಿದ್ದರು ಸಾಯಿ ಪಲ್ಲವಿ. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ನಡೆದಿದ್ದು ಇತಿಹಾಸ. ಶಿಕ್ಷಣ ಮುಗಿಸಿ ವಾಪಸ್ಸಾದ ಸಾಯಿ ಪಲ್ಲವಿ ಪೂರ್ಣವಾಗಿ ನಟನೆಯಲ್ಲಿಯೇ ತೊಡಗಿಕೊಂಡರು. 'ಪ್ರೇಮಂ'ನ ಮಲರ್ ಪಾತ್ರ ಅದೆಷ್ಟು ಹಿಟ್ ಆಗಿದೆಯೆಂದರೆ ನಟಿ ಸಾಯಿ ಪಲ್ಲವಿಯನ್ನು ಈಗಲೂ ಮಲರ್ ಎಂದೇ ಕರೆಯುತ್ತಾರೆ.

Recommended Video

ಪ್ರಭಾಸ್ ಗೆ ಪೌರಾಣಿಕ ಕಥೆ ರೆಡಿ ಮಾಡ್ತಿದ್ದಾರೆ ಪ್ರಶಾಂತ್ ನೀಲ್ | Filmibeat Kannada
ಎರಡು ಸಿನಿಮಾ ಬಿಡುಗಡೆಗೆ ರೆಡಿ

ಎರಡು ಸಿನಿಮಾ ಬಿಡುಗಡೆಗೆ ರೆಡಿ

ನಟಿ ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ', ಹಾಗೂ 'ಲವ್ ಸ್ಟೋರಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈಗ 'ಶ್ಯಾಮ್ ಸಿಂಘ ರಾಯ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ನಟಿಸಿರುವ ಅಂತಾಲಜಿ ಸಿನಿಮಾ 'ಪಾವ ಕಥೆಗಳ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿತ್ತು.

More from Filmibeat

English summary
Actress Sai Pallavi was not the first choice for Malar character in Premam movie. It was Asin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X