ಚಿತ್ರರಂಗಕ್ಕೆ ಮತ್ತೊಂದು ಆಘಾತ; ಖ್ಯಾತ ನಟ ಅನಾರೋಗ್ಯದಿಂದ ವಿಧಿವಶ

ಮಾಲಿವುಡ್ ಖ್ಯಾತ ಹಾಸ್ಯ ನಟ ಸಲೀಂ ಕುಮಾರ್ ನಿಧನರಾಗಿದ್ದಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ತಮ್ಮ ಅದ್ಭುತ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ನ್ಯುಮೋನಿಯಾ ಹಾಗೂ ಲಿವರ್ ಸಮಸ್ಯೆಯಿಂದ 56ನೇ ವಯಸ್ಸಿನಲ್ಲಿ ಸಲೀಂ ಕೊನೆಯುಸಿರೆಳೆದಿದ್ದಾರೆ.

ನಿನ್ನೆ(ಜೂನ್ 6) ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಸಲೀಂ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ರಾತ್ರಿ 10.43 ಸುಮಾರಿಗೆ ಪ್ರಾಣಬಿಟ್ಟಿದಾಗಿ ವರದಿಯಾಗಿದೆ. ಸಲೀಂ ಅಗಲಿಕೆಗೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ. ಮಿಮಿಕ್ರಿ ಮಾಡುತ್ತಾ ವೇದಿಕೆಗಳಲ್ಲಿ ಪರ್ಫಾರ್ಮೆನ್ಸ್ ಕೊಡುತ್ತಾ ಅವರು ಗಮನ ಸೆಳೆದಿದ್ದರು. ಬಳಿಕ ರಂಗಭೂಮಿಯಲ್ಲಿ ಕೂಡ ಗುರ್ತಿಸಿಕೊಂಡಿದ್ದರು. 90ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. ಮಲಯಾಳಂ ಮಾತ್ರವಲ್ಲದೇ ತಮಿಳು ಹಾಗೂ ಒಡಿಯಾ ಭಾಷೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

Salim Kumar Passes Away at 56 Malayalam Cinema Loses a National Award-Winning actor

3 ದಶಕಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಸಲೀಂ ಕುಮಾರ್ ವಿಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡಿದ್ದರು. ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ, ಬರಹಗಾರರಾಗಿ, ನಿರೂಪಕರಾಗಿಯೂ ಗುರ್ತಿಸಿಕೊಂಡಿದ್ದರು. 'ಆದಮಿಂತೆ ಮಕನ್ ಅಬು' ಚಿತ್ರದ ಲೀಡ್ ರೋಲ್‌ನಲ್ಲಿ ಸಲೀಂ ನಟಿಸಿದ್ದರು. 2011ರಲ್ಲಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಅವರಿಗೆ ಲಭಿಸಿತ್ತು. ಅಕ್ಟೋಬರ್ 10, 1969 ರಂದು ಉತ್ತರ ಪರವೂರಿನ ಚಿತ್ತಟ್ಟುಕರದಲ್ಲಿ ಸಲೀಂ ಕುಮಾರ್ ಜನಿಸಿದ್ದರು.

ನಾಸ್ತಿಕರಾಗಿದ್ದ ತಂದೆ ಗಂಗಾಧರನ್ ಮಗನಿಗೆ ಸಲೀಂ ಎಂದು ಹೆಸರಿಟ್ಟಿದ್ದರು. ಬಳಿಕ ಶಾಲೆಯಲ್ಲಿ 'ಕುಮಾರ್' ಎಂಬ ಹೆಸರನ್ನು ಸೇರಿಸಿದ್ದರು. ಚಿತ್ತಟ್ಟುಕರಾದಲ್ಲೇ ಶಾಲೆ, ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದರು ಸಲೀಂ ಕುಮಾರ್. ಚಿತ್ರರಂಗಕ್ಕೆ ಬರುವ ಮುನ್ನ ಮಲಯಾಳಂ ಕಿರುತೆರೆಯಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು.

'ಇಷ್ಟಾಮನು ನೂರು ವಟ್ಟಂ' ಎಂಬ ಚಿತ್ರದಲ್ಲಿ ಸಲೀಂ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಕೆಲ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಅವರಿಗೆ 'ನೀ ವರುವೋಲಂ' ಚಿತ್ರದಲ್ಲಿ ಒಂದೊಳ್ಳೆ ಅವಕಾಶ ಸಿಕ್ಕಿತ್ತು. ಆದರೆ ಬಳಿಕ ಕೈ ಬಿಟ್ಟಿದ್ದರು. 2000 ಇಸವಿಯಲ್ಲಿ ಬಿಡುಗಡೆಯಾಗಿದ್ದ 'ಸತ್ಯಮೇವ ಜಯತೆ' ಚಿತ್ರದಲ್ಲಿ ಒಳ್ಳೆ ಪಾತ್ರ ಮಾಡಿದ್ದರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಸಲೀಂ ನಟಿಸೋಕೆ ಆರಂಭಿಸಿದರು.

ಪತ್ನಿ ಸುನೀತಾ ಹಾಗೂ ಚಂದು ಸಲೀಂ ಕುಮಾರ್ ಮತ್ತು ಆರೋಮಲ್ ಎಂಬ ಇಬ್ಬರು ಗಂಡು ಮಕ್ಕಳನ್ನು ಸಲೀಂ ಅಗಲಿದ್ದಾರೆ. 'ಮಂಜುಮ್ಮೇಲ್ ಬಾಯ್ಸ್' ಚಿತ್ರದಲ್ಲಿ ಚಂದು ನಟಿಸಿದ್ದಾರೆ. ಎರ್ನಾಕುಲಂ ಜಿಲ್ಲೆಯ ಉತ್ತರ ಪರವೂರಿನಲ್ಲಿ ಸಲೀಂ ವಾಸಿಸುತ್ತಿದ್ದರು. ಕೊಚ್ಚಿನ್ ಸ್ಟಾಲಿಯನ್ಸ್ ಎಂಬ ಮಿಮಿಕ್ರಿ ತಂಡವನ್ನು ಕೂಡ ಸಲೀಂ ಮುನ್ನಡೆಸುತ್ತಿದ್ದರು.

'ಸಿಐಡಿ ಮೂಸಾ', 'ಪಂಜಾಬಿ ಹೌಸ್', 'ಮೀಸ ಮಾಧವನ್', 'ಕಲ್ಯಾಣರಾಮನ್', 'ಥೊಮ್ಮನುಂ ಮಕ್ಕಳುಂ', 'ಅಚನುರಂಗಥಾ ವೀಡು', 'ಕರುತ ಜೂತನ್' ಸೇರಿದಂತೆ ಒಂದಷ್ಟು ಜನಪ್ರಿಯ ಸಿನಿಮಾಗಳಲ್ಲಿ ಸಲೀಂ ಕುಮಾರ್ ನಟಿಸಿದ್ದರು. 4 ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಅವರು ಭಾಜನರಾಗಿದ್ದರು. ಇನ್ನು ಫಿಲ್ಮ್‌ಫೇರ್ ಸೌತ್, ಕೇರಳ ಫಿಲ್ಮ್ ಕ್ರಿಕೆಟ್ಸ್ ಅಸೋಸಿಯೇಷನ್ ಅವಾರ್ಡ್, ಏಷ್ಯಾನೆಟ್ ಫಿಲ್ಮ್ ಅವಾರ್ಡ್ ಸೇರಿ ಸಾಕಷ್ಟು ಪ್ರಶಸ್ತಿಗಳು ಅವರಿಗೆ ಸಿಕ್ಕಿತ್ತು. ಸಲೀಂ ಅಗಲಿಕೆಗೆ ಮಾಲಿವುಡ್ ತಾರೆಯರು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

Read more about: actor mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X