'ಮಗಧೀರ' ಸ್ಟೈಲ್‌ನಲ್ಲಿ 'ವೃಷಭ'; ಮೋಹನ್ ಲಾಲ್ ಜೊತೆ ಇಂದ್ರಜಿತ್ ಲಂಕೇಶ್ ಪುತ್ರ

'ಎಂಪುರಾನ್' ಹಾಗೂ 'ಥುಡರುಂ' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ಮೋಹನ್‌ ಲಾಲ್ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಸಹಜವಾಗಿಯೇ ಅವರ ಮುಂದಿನ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. 'ವೃಷಭ' ಎಂಬ ಫ್ಯಾಂಟಸಿ ಆಕ್ಷನ್ ಚಿತ್ರದಲ್ಲಿ ಸದ್ಯ ಮೋಹನ್ ಲಾಲ್ ನಟಿಸುತ್ತಿದ್ದಾರೆ.

ಕನ್ನಡ ನಿರ್ದೇಶಕ ನಂದ ಕಿಶೋರ್ 'ವೃಷಭ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಕನ್ನಡ ಕಲಾವಿದರು ಮಿಂಚಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸರ್ಮಜಿತ್ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಗೌರಿ' ಚಿತ್ರದ ಮೂಲಕ ಚಂದನವನಕ್ಕೆ ಬಂದಿದ್ದ ಸಮರ್ಜಿತ್‌ಗೆ ಲಕ್ಕಿ ಛಾನ್ಸ್ ಸಿಕ್ಕಂತಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ.

Samarjit Lankesh Lands Major Role as Mohanlal s Son in Pan-India Fantasy Epic Vrusshabha

ಚಿತ್ರದಲ್ಲಿ ಮೋಹನ್ ಲಾಲ್ ಮಗನ ಪಾತ್ರದಲ್ಲಿ ಸಮರ್ಜಿತ್ ನಟಿಸುತ್ತಿದ್ದಾರೆ. ಇನ್ನು 'ವೃಷಭ' ಚಿತ್ರದಲ್ಲಿ ಸಮರ್ಜಿತ್ ಜೊತೆಗೆ ಕನ್ನಡ ಕಲಾವಿದರಾದ ರಾಗಿಣಿ ದ್ವಿವೇದಿ ಹಾಗೂ ಗರುಡ ರಾಮ್ ಕೂಡ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಮೋಹನ್ ಲಾಲ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಒಂದು ಪೋಸ್ಟರ್ ರಿಲೀಸ್ ಆಗಿತ್ತು. ವೀರ ಯೋಧನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಇದು ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಇದೀಗ ಕೊನೆ ಹಂತದ ಚಿತ್ರೀಕರಣ ನಡೀತಿದೆ. ಅಕ್ಟೋಬರ್ 16ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

'ವೃಷಭ' ಚಿತ್ರದಲ್ಲಿ ಮೋಹನ್ ಲಾಲ್ ಮಗನ ಪಾತ್ರದಲ್ಲಿ ತೆಲುಗು ನಟ ರೋಷನ್ ಮೆಕಾ ನಟಿಸಬೇಕಿತ್ತು. ಒಂದೆರಡು ದಿನ ಚಿತ್ರೀಕರಣದಲ್ಲಿ ಸಹ ಭಾಗಿ ಆಗಿದ್ದರು. ಬಳಿಕ ಆತ ಬೇರೆ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಕಾರಣಕ್ಕೆ 'ವೃಷಭ' ಚಿತ್ರದಿಂದ ಹೊರ ಬರುವಂತಾಗಿತ್ತು. ನಂತರ ಆ ಅವಕಾಶ ಸಮರ್ಜಿತ್ ಪಾಲಾಗಿತ್ತು. 'ಗೌರಿ' ಚಿತ್ರದಲ್ಲಿ ರಗಡ್ ಹೈದನ ಪಾತ್ರದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ನಟಿಸಿದ್ದರು. ಅದೇ ರೀತಿಯ ಫೋರ್ಸ್ ಇರುವ ಪಾತ್ರ 'ವೃಷಭ' ಚಿತ್ರದಲ್ಲಿ ಸಿಕ್ಕಿದೆ.

ತೆಲುಗಿನ 'ಮಗಧೀರ' ಶೈಲಿಯಲ್ಲಿ ಇವತ್ತಿನ ಕಥೆಯ ಜೊತೆಗೆ ಶತಮಾನಗಳ ಹಿಂದಿನ ಕಾಲ್ಪನಿಕ ಕಥೆ ಕೂಡ ಚಿತ್ರದಲ್ಲಿ ಇರಲಿದೆ. ಪೀಟರ್ ಹೀನ್ಸ್ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. ಸದ್ಯ ಮುಂಬೈನಲ್ಲಿ ಬೀಡುಬಿಟ್ಟಿರುವ ನಿರ್ದೇಶಕ ನಂದ ಕಿಶೋರ್ ಅಂತಿಮ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಟೀಸರ್ ಸಮೇತ ಜನರ ಮುಂದೆ ಬರಲು ತೀರ್ಮಾನಿಸಿದ್ದಾರೆ.

ಮೋಹನ್ ಲಾಲ್ ಹಾಗೂ ಸಮರ್ಜಿತ್ ಜೊತೆಗೆ ಸಿದ್ದಿಕಿ, ಶ್ರೀಕಾಂತ್ ಮೆಕಾ, ಮೀನಾ, ಝರಾ ಖಾನ್, ಜೊಜು ಜಾರ್ಜ್, ನೇಹಾ ಸಕ್ಸೆನಾ ಸೇರಿದಂತೆ ದೊಡ್ಡ ತಾರಾಗಣ 'ವೃಷಭ' ಚಿತ್ರದಲ್ಲಿದೆ. ಶೋಭಾ ಕಪೂರ್, ಏಕ್ತಾ ಕಪೂರ್, ವರುನ್ ಮಥುರ್, ವಿಶಾಲ್ ಗುರ್ನಾನಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಚಿತ್ರೀಕರಣವಾಗಿದೆ. ಅಂದರೆ ಎರಡೆರಡು ಬಾರಿ ಪ್ರತಿ ಸನ್ನಿವೇಶ ಸೇರೆ ಹಿಡಿದಿದ್ದಾರೆ. ಕನ್ನಡ, ತಮಿಳು, ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲಿದ್ದಾರೆ.

'ಪೊಗರು' ಬಳಿಕ 'ರಾಣಾ' ಸಿನಿಮಾ ಮಾಡಿದ್ದ ನಂದ ಕಿಶೋರ್ ನಂತರ 'ವೃಷಭ' ಚಿತ್ರಕ್ಕೆ ಕೈ ಹಾಕಿದ್ದರು. ಮೋಹನ್ ಲಾಲ್ ರೀತಿಯ ದಿಗ್ಗಜ ನಟನನ್ನು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಆ ಪ್ರಯತ್ನದಲ್ಲಿ ಗೆದ್ದು ತೋರಿಸುವ ಹಠಕ್ಕೆ ಬಿದ್ದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಸಿನಿಮಾ ತೆರೆಗೆ ಬರಲಿದೆ.

'ವೃಷಭ' ಚಿತ್ರಕ್ಕೂ ಮುನ್ನ ಮೋಹನ್ ಲಾಲ್ ನಟನೆಯ 'ಹೃದಯಪೂರ್ವಂ' ಸಿನಿಮಾ ತೆರೆಗೆ ಬರಲಿದೆ. ನಡುವೆ ಅತಿಥಿ ಪಾತ್ರದಲ್ಲಿ ನಟಿಸಿರುವ 'ಕಣ್ಣಪ್ಪ' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. 'ವೃಷಭ' ಮೂಲಕ ಮೋಹನ್ ಲಾಲ್ ಹೀರೊ ಆಗಿ ನಟಿಸುತ್ತಿರುವ 4 ಸಿನಿಮಾಗಳು ಒಂದೇ ವರ್ಷದಲ್ಲಿ ತೆರೆಗೆ ಬಂದಂತೆ ಆಗಲಿದೆ.

More from Filmibeat

English summary
Samarjit replaces Roshan Meka to play Mohanlal's son in the upcoming epic action film Vrusshabha
Read more about: mohanlal nanda kishore malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X