ದುಡ್ಡೆಷ್ಟು ಬೇಕಿದ್ರೂ ಕೊಡ್ತೀನಿ ; ಮಾಲ್ಡೀವ್ಸ್-ದುಬೈಗೆ ನನ್ನ ಜೊತೆ ಬಾ- ನಟಿಗೆ ಆಫರ್ ಕೊಟ್ಟ ಉದ್ಯಮಿ

ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ..

ಸಾಕಷ್ಟು ಮಂದಿ ಒಂದು ಕಡೆಯಿಂದ ಚಿತ್ರರಂಗದಲ್ಲಿನ ಮಹಿಳೆಯರಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾರೆ. ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದಕ್ಕೆ ಮತ್ತೊಂದು ಕೈಗನ್ನಡಿಯೇ ಸನಾ ಅಲ್ತಾಫ್ ಹಂಚಿಕೊಂಡ ಸ್ಕ್ರೀನ್ ಶಾಟ್.

sana-althaf-slams-creepy-business-proposal-malayali-actress-leaks-shocking-email-screenshots

ಹೌದು, ಸನಾ ಅಲ್ತಾಫ್.. ಮಲಯಾಳಂನ ಚೆಲುವೆ. 15ರ ಹರೆಯದಲ್ಲಿಯೇ ಚಿತ್ರರಂಗಕ್ಕೆ ಬಂದ ಸನಾ ''ವಿಕ್ರಮಾದಿತ್ಯನ್''.. ''ಮರಿಯಮ್ ಮುಕ್ಕು''.. ''ರಾಣಿ ಪದ್ಮಿನಿ''.. ''ಬಷೀರಿಂತೆ ಪ್ರೇಮಲೇಖನಂ''.. ''ಓಡಿಯನ್'' .. ''ಚೆನ್ನೈ 600028''.. ''ಆರ್‌ ಕೆ ನಗರ''.. ''ಪಂಚರಕ್ಷರಂ'' ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಅಭಿನಯದಿಂದ ಕೇವಲ ಕೇರಳಿಗರ ಹೃದಯ ಮಾತ್ರವಲ್ಲ ತಮಿಳುನಾಡಿನ ಜನರ ಹೃದಯವನ್ನು ಕೂಡ ಗೆದ್ದಿದ್ದಾರೆ.

2019ರಿಂದ ಚಿತ್ರರಂಗದಿಂದ ದೂರ ಇರುವ ಸನಾ 2014ರಲ್ಲಿ ತಮ್ಮ ಮನ ಮೆಚ್ಚಿದ ಹುಡುಗ ಹಕೀಮ್ ಷಾಜಹಾನ್ ಜೊತೆ ಮದುವೆ ಕೂಡ ಆಗಿದ್ದಾರೆ. ಸದ್ಯ ಮನೆ-ಗಂಡ ಎಂದು ನೆಮ್ಮದಿಯಿಂದ ಇದ್ದಾರೆ. ಇಂಥಾ ಸನಾ ಅಲ್ತಾಫ್ ಅವರ ನೆಮ್ಮದಿಯನ್ನು ಕೆಡಿಸುವ ಪ್ರಯತ್ನಕ್ಕೆ ಉದ್ಯಮಿಯೊಬ್ಬರು ಮುಂದಾಗಿದ್ದು ಸನಾಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಕಿರಿಕಿರಿಯನ್ನು ಕೊಡುತ್ತಿದ್ದಾರೆ.

ಉದ್ಯಮಿಯ ಈ ವರ್ತನೆಯಿಂದ ಸದ್ಯ ರೋಸಿ ಹೋಗಿರುವ ಸನಾ, ಉದ್ಯಮಿ ತಮಗೆ ಕಳುಹಿಸಿರುವ ಮೆಸೇಜ್‌ಗಳ ಸ್ಕ್ರೀನ್‌ ಶಾಟ್‌ನ ಹಂಚಿಕೊಂಡಿದ್ದಾರೆ. ಆ ಪ್ರಕಾರ ಚೆನ್ನೈನ ಉದ್ಯಮಿಯಾದ ಬಾಲಾಜಿ ಡಿಯರ್ ಸನಾ.. ಹೇಗಿದ್ದೀರಿ? ನಾನು ಚೆನ್ನೈನ ಉದ್ಯಮಿ ಬಾಲಾಜಿ. ನಿಮ್ಮೊಂದಿಗೆ ಡೇಟ್‌ಗೆ ಹೋಗಲು ನಾನು ಇಷ್ಟಪಡುತ್ತೇನೆ. ಇದಕ್ಕೆ ನಿಮಗೆ ಎಷ್ಟು ದುಡ್ಡು ಬೇಕು ಹೇಳಿ ಎಂದು ಬರೆದಿದ್ದಾರೆ. ನನ್ನ ಜೊತೆ ಬರಲು ನಿಮಗೆ ಯಾವತ್ತು ಸಾಧ್ಯವಾಗುತ್ತೆ ಎನ್ನುವುದನ್ನು ಕೂಡ ಹೇಳಿ ಎಂದು ಕೂಡ ಹೇಳಿರುವ ಈ ಉದ್ಯಮಿ ಮಾಲ್ಡೀವ್ಸ್ ಅಥವಾ ದುಬೈ ಆದರೂ ಪರವಾಗಿಲ್ಲ. ನನ್ನ ಈ ಆಫರ್‌ ಬಗ್ಗೆ ಚೆನ್ನಾಗಿ ಯೋಚನೆ ಮಾಡಿ ಎಂದು ಕೂಡ ಹೇಳಿದ್ದಾರೆ. ಇಮೇಲ್ ಮೂಲಕ ಒಂದಲ್ಲ.. ಎರಡಲ್ಲ.. ಹಲವು ಮೇಲ್‌ಗಳನ್ನು ಸನಾಗೆ ನಿರಂತರವಾಗಿ ಕಳುಹಿಸುತ್ತಲೇ ಇದ್ದಾರೆ.

sana-althaf-slams-creepy-business-proposal-malayali-actress-leaks-shocking-email-screenshots

ಬಾಲಾಜಿಯ ಈ ಮೆಸೇಜ್‌ಗಳ ಒಂದು ಸ್ಯಾಂಪಲ್‌ನ ಸ್ಕ್ರೀನ್ ಶಾಟ್‌ನ ಸದ್ಯ ಸನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಗೆ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಲವರು ಉದ್ಯಮಿ ಬಾಲಾಜಿ ವಿರುದ್ಧ ಆಕ್ರೋ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗದ ನಾಯಕಿಯರಿಗೆ ಎಲ್ಲಿಯೂ ನೆಮ್ಮದಿ ಇಲ್ಲದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಣದ ಮದ, ಅಹಂಕಾರ, ಬಾಲಾಜಿ ಕಳುಹಿಸಿರುವ ಮೆಸೇಜ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಕೂಡ ಹಲವರು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇನ್ನು ಸನಾ ಈ ಸ್ಕ್ರೀನ್ ಶಾಟ್ ಹಂಚಿಕೊಳ್ಳುವುದಲ್ಲದೇ 'ಎಷ್ಟು ರೋಮ್ಯಾಂಟಿಕ್ ಪ್ರಪೋಸಲ್' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸನಾ ಅವರ ಈ ಪ್ರತಿಕ್ರಿಯೆಗೆ ಕೂಡ ಹಲವರು ಪ್ರತಿಕ್ರಿಯೆಯನ್ನು ನೀಡಿದ್ದು ಈ ತರಹದ ಮನುಷ್ಯರನ್ನು ಕಡೆಗಣಿಸಿ ಎಂದು ಕಿವಿ ಮಾತನ್ನು ಹೇಳುತ್ತಿದ್ದಾರೆ. ಸೈಬರ್ ಕ್ರೈಮ್‌ಗೆ ದೂರು ನೀಡಿ ಎಂದು ಕೂಡ ಹೇಳುತ್ತಿದ್ದಾರೆ.

sana-althaf-slams-creepy-business-proposal-malayali-actress-leaks-shocking-email-screenshots

More from Filmibeat

English summary
"Sana Althaf leaks disturbing email screenshots of an indecent proposal disguised as a professional meeting. Read her bold response to the 'business date' offer."
Read more about: social media actress mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X