5 ದಿನ ಐಸಿಯುನಲ್ಲಿ ಕಷ್ಟಪಟ್ಟ ನಟಿ: ಸಾರ್ವಜನಿಕರಿಗೆ ಕೊಟ್ಟ ಎಚ್ಚರಿಕೆ ಏನು?

ಮಲಯಾಳಂ ನಟಿ, ನಿರ್ಮಾಪಕಿ ಸ್ಯಾಂಡ್ರಾ ಥಾಮಸ್ ಅನಾರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಸೇರಿದ ಕಾರಣ ಹುಡುಕಿದಾಗ ಡೆಂಗ್ಯೂ ಕಾಣಿಸಿಕೊಂಡು ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ವಿಚಾರ ತಿಳಿದಿದೆ.

ಸ್ಯಾಂಡ್ರಾ ಥಾಮಸ್ ಆರೋಗ್ಯ ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಐದು ದಿನಗಳ ಕಾಲ ಸ್ಯಾಂಡ್ರಾ ಸ್ಥಿತಿ ಬಹಳ ಕಷ್ಟಕರವಾಗಿತ್ತು, ಈಗ ಚೇತರಿಕೆ ಕಂಡಿದ್ದು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ ಎಂದು ಆಕೆಯ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡರು.

ಅಷ್ಟಕ್ಕೂ, ಸ್ಯಾಂಡ್ರಾ ಥಾಮಸ್‌ಗೆ ಏನಾಗಿತ್ತು? ಈಗ ಆಕೆಯ ಆರೋಗ್ಯ ಹೇಗಿದೆ? ಐಸಿಯುನಿಂದ ಹೊರಬಂದ ನಟಿ ಸಾರ್ವಜನಿಕರಿಗೆ ಕೊಟ್ಟ ಎಚ್ಚರಿಕೆ ಏನು? ಮುಂದೆ ಓದಿ...

ಪ್ರಾಣಾಪಾಯವಿಲ್ಲ ಎಂದು ಖಚಿತ ಪಡಿಸಿದ ಸಹೋದರಿ

ಪ್ರಾಣಾಪಾಯವಿಲ್ಲ ಎಂದು ಖಚಿತ ಪಡಿಸಿದ ಸಹೋದರಿ

''ಐಸಿಯುನಲ್ಲಿ ಐದು ದಿನಗಳ ಚಿಕಿತ್ಸೆ ಬಳಿಕ ಸ್ಯಾಂಡ್ರಾ ಥಾಮಸ್ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಆಗಿದ್ದಾರೆ. ಈಗ ಅವಳ ಆರೋಗ್ಯವಾಗಿ ಉತ್ತಮವಾಗಿದೆ. ಯಾವುದೇ ಪ್ರಾಣಾಪಾಯವಿಲ್ಲ. ಇಷ್ಟು ದಿನದ ಆಕೆಯ ಪರಿಸ್ಥಿತಿ ಕಂಡು ಬಹಳ ಒತ್ತಡದಲ್ಲಿದ್ದೆವು. ಈ ಸಮಯದಲ್ಲಿ ಬಹಳಷ್ಟು ಜನರು ಸ್ಯಾಂಡ್ರಾಗಾಗಿ ಪ್ರಾರ್ಥಿಸಿದರು. ಸಂದೇಶಗಳನ್ನು ಕಳುಹಿಸಿದರು. ನಿಮ್ಮೆಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇವೆ'' ಎಂದು ಸ್ಯಾಂಡ್ರಾ ಸಹೋದರಿ ಬರೆದುಕೊಂಡಿದ್ದಾರೆ.

ವಿಡಿಯೋ ಮೂಲಕ ಅನುಭವ ಹಂಚಿಕೊಂಡ ನಟಿ

ವಿಡಿಯೋ ಮೂಲಕ ಅನುಭವ ಹಂಚಿಕೊಂಡ ನಟಿ

ಸ್ಯಾಂಡ್ರಾ ಥಾಮಸ್ ವಿಡಿಯೋ ಮಾಡುವ ಮೂಲಕ ತಮ್ಮ ಆರೋಗ್ಯ ಕುರಿತು ಅಪ್‌ಡೇಟ್ ಕೊಟ್ಟಿದ್ದಾರೆ. ''ದಿನ ಕಳೆದಂತೆ ಆರೋಗ್ಯ ಹದಗೆಟ್ಟಿತ್ತು. ಆಕ್ಸಿಜನ್ ಕೊರತೆ ಮತ್ತು ಬಿಪಿಯಲ್ಲಿ ಏರಳಿತ ಉಂಟಾದ ಕಾರಣ ಐಸಿಯುಗೆ ಸೇರಬೇಕಾಯಿತು. ಈಗ ಸುಧಾರಣೆ ಕಂಡಿದ್ದೇನೆ'' ಎಂದು ತಿಳಿಸಿದ್ದಾರೆ.

ಅಸಮಾಧಾನ ಹೊರಹಾಕಿದ ನಟಿ

ಅಸಮಾಧಾನ ಹೊರಹಾಕಿದ ನಟಿ

ತಾನು ಐಸಿಯುನಲ್ಲಿ ಸಾವು-ಬದುಕಿಗಾಗಿ ಹೋರಾಡುತ್ತಿದ್ದ ಸಮಯದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ತಮ್ಮ ಆರೋಗ್ಯ ವಿಚಾರಿಸಿದರು ಎಂಬ ವಿಷಯ ಬಹಿರಂಗಪಡಿಸಿದರು. ಉಳಿದಂತೆ ಮಲಯಾಳಂ ಇಂಡಸ್ಟ್ರಿಯಿಂದ ಯಾವ ನಟಿಯೂ ತನ್ನ ಆರೋಗ್ಯದ ಬಗ್ಗೆ ವಿಚಾರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜನರು ಎಚ್ಚರಿಕೆಯಿಂದಿರಿ

ಜನರು ಎಚ್ಚರಿಕೆಯಿಂದಿರಿ

ಡೆಂಗ್ಯೂ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ನಟಿ-ನಿರ್ಮಾಪಕಿ, ''ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ರೋಗವಲ್ಲ. ಇದು ಸೊಳ್ಳೆಗಳಿಂದ ಹರಡುತ್ತದೆ. ಸಿಹಿನೀರಿನಲ್ಲಿ ಸೊಳ್ಳೆಗಳು ಮೊಟ್ಟೆಗಳನ್ನು ಇಡುತ್ತದೆ. ನಿಮ್ಮ ಮನೆ ಮತ್ತು ಅಂಗಳವನ್ನು ಸ್ವಚ್ಚವಾಗಿರಿಸಿಕೊಳ್ಳಿ, ವಿಶೇಷವಾಗಿ ಮಳೆಗಾಲದಲ್ಲಿ'' ಎಂದು ವಿನಂತಿಸಿದ್ದಾರೆ.

Recommended Video

ಇಂದಿರಾಗಾಂಧಿ ಕುರಿತ ಚಿತ್ರವನ್ನು ನನ್ನಷ್ಟು ಯಾರೂ ಚೆನ್ನಾಗಿ ಡೈರೆಕ್ಟ್ ಮಾಡಲ್ಲ | Filmibeat Kannada
ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದ ನಿರ್ಮಾಪಕಿ

ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದ ನಿರ್ಮಾಪಕಿ

1991ರಿಂದ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸ್ಯಾಂಡ್ರಾ ಥಾಮಸ್ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 2016ರಲ್ಲಿ ವಿಲ್ಸನ್ ಜಾನ್ ಥಾಮಸ್ ಜೊತೆ ವೈವಾಹಿಕ ಬದುಕು ಆರಂಭಿಸಿದ ನಟಿ, ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಅದಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

More from Filmibeat

English summary
Malayalam Actress and Producer Sandra Thomas Opens up on her 5 critical days in the ICU.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X