4 ವರ್ಷದ ವಿಚ್ಚೇದನದ ನೋವಿಗೆ ಮುಲಾಮು ಹಚ್ಚಿದ ಡೇಟಿಂಗ್ ಆಪ್, ಮನ ಮೆಚ್ಚಿದ ಹುಡುಗನ ಜೊತೆ 2ನೇ ಮದುವೆಯಾದ ನಟಿ

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ.ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ.

ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ.ಆದರೆ.. ದಾಂಪತ್ಯ ಅಂತ್ಯವಾದ ನಂತರ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಮತ್ತೂ ಕೆಲವರು ಮತ್ತೆ ಮೊದಲಿಂದ ಬದುಕು ಶುರು ಮಾಡುತ್ತಾರೆ. ಮತ್ತೊಮ್ಮೆ ಪ್ರೀತಿಯಲ್ಲಿ ಬೀಳುತ್ತಾರೆ. ಸಮಯ ಸಂದರ್ಭ ಕೂಡಿ ಬಂದಾಗ ಮದುವೆಯಾಗ್ತಾರೆ. ಉದಾಹರಣೆಗೆ ಅರ್ಚನಾ ಕವಿ.

Second Chance Bliss Archana Kavi Weds Rick Varghese 4 Years After Abish Mathew Divorce

ಹೌದು, ಅರ್ಚನಾ ಕವಿ .. ಮಲಯಾಳಂನ ಚೆಲುವೆ. ಪತ್ರಕರ್ತೆಯಾಗುವ ಕನಸು ಕಂಡು ಬದುಕಿನ ತಿರುವು ದಾರಿಯಲ್ಲಿ ಚಿತ್ರರಂಗಕ್ಕೆ ಬಂದ ಅರ್ಚನಾ ಆ ನಂತರ ಒಂದೂವರೆ ದಶಕದಲ್ಲಿ 20ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

''ನೀಲಾತಮಾರ'' ಇವರ ಮೊದಲ ಚಿತ್ರ. ''ಬೆಸ್ಟ್ ಆಫ್ ಲಕ್''.. ''ಸಾಲ್ಟ್ ಆಂಡ್ ಪೆಪ್ಪರ್''.. ''ಡೇ ನೈಟ್ ಗೇಮ್''.. ''ಬ್ಯಾಂಗಲ್ಸ್''.. ಇವರ ಕೆಲ ಅಭಿನಯದ ಪ್ರಮುಖ ಚಿತ್ರಗಳು. ಕೇವಲ ಮಲಯಾಳಂನಲ್ಲಿ ಮಾತ್ರವಲ್ಲ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನೂ ಅರ್ಚನಾ ಕೇವಲ ನಟಿ ಮಾತ್ರವಲ್ಲ. ಯೂಟ್ಯೂಬರ್ ಕೂಡಾ ಹೌದು.

ಇಂಥಾ ಅರ್ಚನಾ 2016ರಲ್ಲಿ ಯೂಟ್ಯೂಬರ್ ಮತ್ತು ಹಾಸ್ಯ ನಟ ಅಭಿಶ್ ಮ್ಯಾಥ್ಯೂ ಅವರ ಜೊತೆ ಮದುವೆಯಾಗಿದ್ದರು. ಚಿತ್ರರಂಗದಿಂದ ದೂರ ಆದರು. ಆದರೆ.. ಈ ಸಂಬಂಧ 5 ವರ್ಷದಲ್ಲಿ ಮುರಿದು ಬಿತ್ತು. ಹೀಗಾಗಿ ಮತ್ತೆ ಚಿತ್ರರಂಗಕ್ಕೆ ಮರಳಿದ ಅರ್ಚನಾ ಟೊವಿನೊ ಥಾಮಸ್ ಮತ್ತು ತ್ರಿಷಾ ''ಐಡೆಂಟಿಟಿ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಇವರು ಅಭಿನಯಿಸಿರುವ ''ಒನ್ಸ್ ಅಪಾನ್ ಎ ಟೈಮ್ ದೇರ್ ವಾಸ್ ಎ ಕಲ್ಲನ್'' ಎಂಬ ಚಿತ್ರ ಬಿಡುಗಡೆಯಾಗಬೇಕಿದೆ.

ಹೀಗೆ ಚಿತ್ರರಂಗಕ್ಕೆ ಮರಳಿ ಬಂದ ಅರ್ಚನಾ ಕವಿ ಸದ್ಯ ಮತ್ತೊಂದು ಮದುವೆಯಾಗಿದ್ದಾರೆ.ತಿರುವನಂತಪುರಂನ ಚರ್ಚ್‌ನಲ್ಲಿ ರಿಕ್ ವರ್ಗಿಸ್ ಅವರ ಕೈ ಹಿಡಿದಿದ್ದಾರೆ. ಅರ್ಚನಾ ಅವರ ಸ್ನೇಹಿತೆ ಧನ್ಯಾ ಈ ವಿಚಾರವನ್ನು ಹೊರ ಹಾಕಿದ್ದು ಹಲವರು ಸದ್ಯ ಅರ್ಚನಾ ಮತ್ತು ರಿಕ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ.

Second Chance Bliss Archana Kavi Weds Rick Varghese 4 Years After Abish Mathew Divorce

ಅಂದ್ಹಾಗೇ ರಿಕ್ ವರ್ಗೀಸ್ ಅವರ ಜೊತೆ ಮದುವೆಯಾದ ಅರ್ಚನಾ ಇತ್ತೀಚೆಗಷ್ಟೇ ತಮ್ಮ ಸ್ನೇಹಿತೆ ಧನ್ಯಾಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ರಿಕ್ ಅವರ ಪರಿಚಯ ಹೇಗಾಯ್ತು..? ಎಲ್ಲಿಂದ ಪ್ರೀತಿ ಶುರುವಾಯ್ತು ..? ಎಂದು ಹೇಳಿದ್ದರು. ಈ ಕುರಿತು ಮಾತನಾಡಿದ್ದ ಅರ್ಚನಾ ಕಣ್ಣೂರಿನಲ್ಲಿ ನನ್ನ ಮನೆ ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ನನಗೆ ರಿಕ್ ವರ್ಗೀಸ್ ಅವರ ಪರಿಚಯ ಡೇಟಿಂಗ್ ಆಪ್ ಮೂಲಕ ಆಯ್ತು ಎಂದು ಹೇಳಿದ್ದರು.

ಆರಂಭದಲ್ಲಿ ನನಗೆ ಡೇಟಿಂಗ್ ಮಾಡುವ ಉದ್ದೇಶ ಇರಲಿಲ್ಲ ಆದರೆ ಆ ವಿಧಿ ನಾವು ಒಂದಾಗುವಂತೆ ಮಾಡಿತು ಎಂದು ಹೇಳಿದ್ದ ಅರ್ಚನಾ ನಾನು ಅವರ ಜೊತೆ ನನ್ನೆಲ್ಲಾ ನೋವುಗಳನ್ನು ಹಂಚಿಕೊಂಡೆ, ಹೀಗೆ ನಾವು ಇಬ್ಬರು ಮಾತನಾಡುತ್ತಾ ಮಾತನಾಡುತ್ತಾ ನಮ್ಮ ನಡುವೆ ಭಾವನಾತ್ಮಕ ಸಂಬಂಧ ಬೆಸೆಯಿತು ಎಂದು ಹೇಳಿದ್ದರು. ಸಂಬಂಧಗಳಲ್ಲಿ ಮಾನಸಿಕ ನೆಮ್ಮದಿ ಮುಖ್ಯ ಎಂದಿದ್ದರು.

More from Filmibeat

English summary
Archana Kavi celebrates a 'second chance bliss' by marrying her "best man," Rick Varghese. Get the full story and view heartwarming photos from her intimate church wedding.
Read more about: divorce marriage mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X