'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?

ಸೌತ್ ಇಂಡಿಯಾದ ಬಹುಬೇಡಿಕೆಯ ನಟಿ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ನಯನತಾರಾ. ಈಕೆಯನ್ನು ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಚಿತ್ರಜಗತ್ತಿಗೆ ಪರಿಚಯವಾಗಿ ಸುಮಾರು 17 ವರ್ಷ ಕಳೆದಿದೆ. ಈ ಒಂದೂವರೆ ವರ್ಷಕ್ಕೂ ಹೆಚ್ಚಿನ ಸಮಯದಲ್ಲಿ ನಯನತಾರಾ ಸಾಧಿಸಿದ್ದು ಅಪಾರ.

ನಯನತಾರಾ ಅವರ ಮೊದಲ ಹೆಸರು ಡಯಾನಾ ಮರಿಯಮ್ ಕುರಿಯನ್. ಮೂಲತಃ ಕ್ರಿಶ್ಚಿಯನ್ ಧರ್ಮದವರು. ಈಕೆಗೆ ನಯನತಾರಾ ಎಂದು ಹೆಸರಿಟ್ಟಿದ್ದು ಯಾರು? ಈ ಹೆಸರು ಈಕೆಗೆ ಹೇಗೆ ಬಂತು ಎಂಬುದು ಅನೇಕರಿಗೆ ಗೊತ್ತಿಲ್ಲದ ವಿಷಯ.

ಈ ಕುರಿತು ಸೌತ್ ಇಂಡಸ್ಟ್ರಿಯಲ್ಲಿ ಚರ್ಚೆ ನಡೆಯುತ್ತಿದೆ. ವ್ಯಕ್ತಿಯೊಬ್ಬ ಆಕೆಗೆ ನಯನತಾರಾ ಹೆಸರು ಸೂಚಿಸಿದ್ದು ನಾನೇ ಎಂದು ಹೇಳಿಕೊಂಡಿದ್ದಾರೆ. ಆದರೆ, ನಿರ್ದೇಶಕರೊಬ್ಬರು ಅವರಲ್ಲ, ಆ ಹೆಸರು ಇಟ್ಟಿದ್ದು ನಾನು ಎನ್ನುತ್ತಿದ್ದಾರೆ. ಮುಂದೆ ಓದಿ....

ಅದು 2003ರ ಸಮಯ...

ಅದು 2003ರ ಸಮಯ...

2003ರಲ್ಲಿ ಮಲಯಾಳಂ ಭಾಷೆಯ 'ಮನಸ್ಸಿನಕ್ಕರೆ' ಚಿತ್ರದ ಮೂಲಕ ನಯನತಾರಾ ಚಿತ್ರರಂಗ ಪ್ರವೇಶಿಸಿದರು. ಆ ಚಿತ್ರ ಆರಂಭವಾದಾಗ ಆಕೆಯೆ ಹೆಸರು ಡಯಾನಾ ಮರಿಯಮ್ ಕುರಿಯನ್ ಅಂತಲೇ ಇತ್ತು. ಬಳಿಕ ತೆರೆಮೇಲೆ ಬರುವಷ್ಟಿಗೆ ನಟಿಯ ಹೆಸರು ನಯನತಾರಾ ಆಗಿತ್ತು.

ಹೆಸರು ಸೂಚಿಸಿದ್ದು ನಾವು

ಹೆಸರು ಸೂಚಿಸಿದ್ದು ನಾವು

'ಮನಸ್ಸಿನಕ್ಕರೆ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಈಕೆಗೆ ಹೆಸರು ಬದಲಿಸಬೇಕು ಎಂಬ ಐಡಿಯಾ ಬಂತು. ಆ ಸಮಯದಲ್ಲಿ ರೈಟರ್ ರಾಜನ್ ಪ್ರಮೋದ್ ಮತ್ತು ನಾನು ಹಲವು ಹೆಸರುಗಳನ್ನು ಪಟ್ಟಿ ಮಾಡಿದೆವು. ಅದರಲ್ಲಿ ನಯನತಾರಾ ಹೆಸರು ಕೂಡ ಇತ್ತು. ಅದರಲ್ಲಿ ಆ ಹೆಸರನ್ನು ಆಕೆಯೆ ಆಯ್ಕೆ ಮಾಡಿಕೊಂಡರು'' ಎಂದು 'ಮನಸ್ಸಿನಕ್ಕರೆ' ನಿರ್ದೇಶಕ ಸತ್ಯನ್ ಆಂತಿಕಡ್ ತಿಳಿಸಿದ್ದಾರೆ.

ಹೆಸರು ಕೊಟ್ಟಿದ್ದು ನಾನು ಅಂತಿದ್ದಾರೆ ಜಾನ್ ಡಿಟ್ಟೋ

ಹೆಸರು ಕೊಟ್ಟಿದ್ದು ನಾನು ಅಂತಿದ್ದಾರೆ ಜಾನ್ ಡಿಟ್ಟೋ

ಆದರೆ, ನಯನತಾರಾ ಎಂದು ಹೆಸರು ಸೂಚಿಸಿದ್ದು ನಾನು ಎಂದು ಮಲಯಾಳಂ ಇಂಡಸ್ಟ್ರಿಯ ಮತ್ತೊಬ್ಬ ನಿರ್ದೇಶಕ ಜಾನ್ ಡಿಟ್ಟೋ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಹೆಸರು ಹೇಗೆ ಬಂತು ಎಂದು ಕೂಡ ಫೇಸ್ ಬುಕ್ ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

ಅಂದು ಆ ಮನೆಯಲ್ಲಿ ಆಗಿದ್ದೇನು?

ಅಂದು ಆ ಮನೆಯಲ್ಲಿ ಆಗಿದ್ದೇನು?

''2003ರಲ್ಲಿ ನಾನು ಸಹಾಯಕ ನಿರ್ದೇಶಕನಾಗಿ ಸಾಜನ್ ಸರ್ ಬಳಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಫೋಟೋಗ್ರಫರ್ ಸ್ವಾಮಿನಾಥನ್, ಸಾಜನ್ ಅವರನ್ನು ನೋಡಲು ಬಂದರು. ಹೀಗೆ ಮಾತನಾಡುತ್ತಿದ್ದ ಸಮಯದಲ್ಲಿ ಸತ್ಯನ್ ಆಂತಿಕಡ್ ತಮ್ಮ ಚಿತ್ರದ ನಟಿಗೆ ಹೆಸರು ಬದಲಿಸುವ ಯೋಜನೆ ಮಾಡುತ್ತಿದ್ದಾರೆ ಎಂಬ ವಿಷಯ ಹೇಳಿದರು. ಕ್ರಿಶ್ಚಿಯನ್ ಹುಡುಗಿ, ಸಿನಿಮಾದಲ್ಲಿ ಇಂತಹ ಪಾತ್ರ ಎಂದೆಲ್ಲ ಹೇಳಿದರು. ಸಾಜನ್ ಸರ್ 'ನನಗೆ ಒಂದು ಹೆಸರು ಕೊಡಿ' ಎಂದು ಸೂಚಿಸಿದರು. ನಾನು ಸ್ವಲ್ಪ ಯೋಚಿಸಿ ನಯನತಾರಾ ಎಂದೆ'' ಎಂದು ಬರೆದುಕೊಂಡಿದ್ದಾರೆ.

ಸತ್ಯನ್ ಆಂತಿಕಡ್ ಘೋಷಿಸಿದರು

ಸತ್ಯನ್ ಆಂತಿಕಡ್ ಘೋಷಿಸಿದರು

''ಬಳಿಕ ನಿರ್ದೇಶಕ ಸತ್ಯನ್ ಆಂತಿಕಡ್ ನನ್ನ ಸಿನಿಮಾ ನಟಿಯ ಹೆಸರು ನಯನತಾರಾ ಹೆಸರು ಘೋಷಿಸಿದರು. ಅಂದು ನಾನು ಹೆಸರು ಕೊಟ್ಟ ನಟಿ ಇಂದು ಸೂಪರ್ ಸ್ಟಾರ್ ರಜನಿಕಾಂತ್ ಜೊತೆಯಲ್ಲಿ ನಟಿಸುವಂತಾಗಿದ್ದಾರೆ. ಮೊಮ್ಮಟ್ಟಿ ಜೊತೆ ನಟಿಸಿದ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದರು. ಸಾಜನ್ ನಿರ್ದೇಶನ ಮಾಡಿದ್ದರು. ಆದರೆ, ಆ ಸಮಯದಲ್ಲಿ ನಯನತಾರಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಭೇಟಿ ಮಾಡಿದ್ರೆ ಈ ಕಥೆಯನ್ನು ನಾನು ಅವರಿಗೆ ಹೇಳುತ್ತಿದ್ದೆ'' ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.

ನಯನತಾರಾ ಹೆಸರು ಇಟ್ಟ ಕ್ರೆಡಿಟ್ ಯಾರಿಗೆ?

ನಯನತಾರಾ ಹೆಸರು ಇಟ್ಟ ಕ್ರೆಡಿಟ್ ಯಾರಿಗೆ?

ಇದೀಗ, ಮಲಯಾಳಂ ಇಂಡಸ್ಟ್ರಿಯಲ್ಲಿ ನಯನತಾರಾ ಹೆಸರು ಯಾರು ಸೂಚಿಸಿದ್ದು ಎನ್ನುವುದು ದೊಡ್ಡ ಚರ್ಚೆಯಾಗ್ತಿದೆ. ಜಾನ್ ಡಿಟ್ಟೋ ಮತ್ತು ಸತ್ಯನ್ ಆಂತಿಕಡ್ ಇಬ್ಬರು ನಾನು...ನಾನು...ಎನ್ನುತ್ತಿದ್ದಾರೆ. ಇವರಿಬ್ಬರಲ್ಲಿ ಯಾರಿಗೆ ಈ ಕ್ರೆಡಿಮಲಯಾಳಂ ಇಂಡಸ್ಟ್ರಿಯಲ್ಲಿ ನಯನತಾರಾ ಹೆಸರು ಯಾರು ಸೂಚಿಸಿದ್ದು ಎನ್ನುವುದು ದೊಡ್ಡ ಚರ್ಚೆಯಾಗ್ತಿದೆ. ಜಾನ್ ಡಿಟ್ಟೋ ಮತ್ತು ಸತ್ಯನ್ ಆಂತಿಕಡ್ ಇಬ್ಬರು ನಾನು...ನಾನು...ಎನ್ನುತ್ತಿದ್ದಾರೆ.ಟ್ ಸಿಗಬೇಕು ಎನ್ನುವುದು ಸ್ವತಃ ನಯನತಾರಾ ಅವರೇ ಹೇಳಬೇಕು.

More from Filmibeat

English summary
Lady superstar Nayanthara is top actress in south india. her first name is Diana Mariam Kurian. then who named her to nayanatara?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X