'ಮೌರ್ಯ' ಚಿತ್ರ ನಟಿ ಮೀರಾ ಜಾಸ್ಮಿನ್ ಗ್ಲ್ಯಾಮರ್ ಅವತಾರಕ್ಕೆ ದಂಗಾದ ಮಂದಿ!
ನಟಿ ಮೀರಾ ಜಾಸ್ಮಿನ್ ನಿಮಗೆಲ್ಲಾ ನೆನಪಿರ ಬೇಕು. ಆದರೆ ಆಕೆಯ ಹೊಸ ಫೋಟೋಗಳನ್ನು ನೋಡಿದರೆ ಇದು, ಅವರೆನಾ ಎಂದು ನಂಬುವುದು ಕೊಂಚ ಕಷ್ಟವೇ. ಆದರೂ ಮೀರಾ ಜಾಸ್ಮಿನ್ ಅವರು ಇಷ್ಟೊಂದು ಬದಲಾಗಿ ಅಚ್ಚರಿಗೆ ಕಾರಣ ಆಗಿದ್ದಾರೆ. ಜೊತೆಗೆ ತೆಲುಗು, ತಮಿಳು ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡ್ತಿದ್ದಾರೆ.
ನಟಿ ಮೀರಾ ಜಾಸ್ಮಿನ್ ಮೂಲತಃ ಮಲಯಾಳಿ. ಅವರು ತಮ್ಮ ಸಿನಿಮಾ ಜರ್ನಿಯನ್ನು ಮಲಯಾಳಂ ಸಿನಿಮಾರಂಗದಿಂದೇ ಆರಂಭಿಸಿದ್ದಾರೆ. ಆದರೆ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚಿನ ಕ್ರೇಜ್ ಹುಟ್ಟು ಹಾಕಿದ್ದರು. ತೆಲುಗಿನಲ್ಲಿ ಮೀರಾ ಅವರು ಮಾಡಿರುವ ಬಹುತೇಕ ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ.
ಇನ್ನು ಸಿನಿಮಾ ಮೀರಾ ಅವರು ಕನ್ನಡದಲ್ಲೂ ಕೂಡ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಮೀರಾ ಜಾಸ್ಮಿನ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಮೌರ್ಯ ಮತ್ತು ಅರಸು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೊನೆಯದಾಗಿ ಅವರು ಅಭಿನಯಿಸಿದ ಸಿನಿಮಾ 'ಹೂ'. 2013ರಲ್ಲಿ ಮೀರಾ ಜಾಸ್ಮಿನ್ ಮದುವೆ ಆಗಿದ್ದಾರೆ. ನಂತರ ಮೀರಾ ಜಾಸ್ಮಿನ್ ಅವರು ದುಬೈ ಮೂಲಕ ಯುವಕನನ್ನು ಮದುವೆ ಆಗಿ ದುಬೈನಲ್ಲಿ ವಾಸ್ತವ್ಯ ಹೂಡಿದ್ದರು.




Click it and Unblock the Notifications











