twitter
    For Quick Alerts
    ALLOW NOTIFICATIONS  
    For Daily Alerts

    'ಮೌರ್ಯ' ಚಿತ್ರ ನಟಿ ಮೀರಾ ಜಾಸ್ಮಿನ್ ಗ್ಲ್ಯಾಮರ್ ಅವತಾರಕ್ಕೆ ದಂಗಾದ ಮಂದಿ!

    |

    ನಟಿ ಮೀರಾ ಜಾಸ್ಮಿನ್ ನಿಮಗೆಲ್ಲಾ ನೆನಪಿರ ಬೇಕು. ಆದರೆ ಆಕೆಯ ಹೊಸ ಫೋಟೋಗಳನ್ನು ನೋಡಿದರೆ ಇದು, ಅವರೆನಾ ಎಂದು ನಂಬುವುದು ಕೊಂಚ ಕಷ್ಟವೇ. ಆದರೂ ಮೀರಾ ಜಾಸ್ಮಿನ್ ಅವರು ಇಷ್ಟೊಂದು ಬದಲಾಗಿ ಅಚ್ಚರಿಗೆ ಕಾರಣ ಆಗಿದ್ದಾರೆ. ಜೊತೆಗೆ ತೆಲುಗು, ತಮಿಳು ಸಿನಿಮಾರಂಗಕ್ಕೆ ಕಮ್‌ ಬ್ಯಾಕ್‌ ಮಾಡ್ತಿದ್ದಾರೆ.

    ನಟಿ ಮೀರಾ ಜಾಸ್ಮಿನ್ ಮೂಲತಃ ಮಲಯಾಳಿ. ಅವರು ತಮ್ಮ ಸಿನಿಮಾ ಜರ್ನಿಯನ್ನು ಮಲಯಾಳಂ ಸಿನಿಮಾರಂಗದಿಂದೇ ಆರಂಭಿಸಿದ್ದಾರೆ. ಆದರೆ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚಿನ ಕ್ರೇಜ್ ಹುಟ್ಟು ಹಾಕಿದ್ದರು. ತೆಲುಗಿನಲ್ಲಿ ಮೀರಾ ಅವರು ಮಾಡಿರುವ ಬಹುತೇಕ ಚಿತ್ರಗಳು ಹಿಟ್‌ ಲಿಸ್ಟ್‌ ಸೇರಿವೆ.

    ಇನ್ನು ಸಿನಿಮಾ ಮೀರಾ ಅವರು ಕನ್ನಡದಲ್ಲೂ ಕೂಡ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಮೀರಾ ಜಾಸ್ಮಿನ್ ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್ ಅವರ ಜೊತೆಗೆ ಮೌರ್ಯ ಮತ್ತು ಅರಸು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೊನೆಯದಾಗಿ ಅವರು ಅಭಿನಯಿಸಿದ ಸಿನಿಮಾ 'ಹೂ'. 2013ರಲ್ಲಿ ಮೀರಾ ಜಾಸ್ಮಿನ್ ಮದುವೆ ಆಗಿದ್ದಾರೆ. ನಂತರ ಮೀರಾ ಜಾಸ್ಮಿನ್ ಅವರು ದುಬೈ ಮೂಲಕ ಯುವಕನನ್ನು ಮದುವೆ ಆಗಿ ದುಬೈನಲ್ಲಿ ವಾಸ್ತವ್ಯ ಹೂಡಿದ್ದರು.

    Senior Star Heroine Meera Jasmine Glamor Photos Going Viral
    ಈಗ ಮತ್ತೆ ಸಿನಿಮಾಗಳಲ್ಲಿ ಬಣ್ಣ ಹಚ್ಚೋಕೆ ಬಂದಿದ್ದಾರೆ. ನಟಿ ಮೀರಾ ಜಾಸ್ಮಿನ್ ಮುಂದಿನ ಚಿತ್ರ 'ಮಾಕಲ್'. ಈ ಚಿತ್ರದಲ್ಲಿ ನಟಿ ಮೀರಾ ಅವರ ಲುಕ್‌ ರಿಲೀಸ್ ಆಗಿದೆ. ಸೀರೆಯುಟ್ಟು ಸಿಂಪಲ್‌ ಆಗಿ ಕಾಣಿಸಿಕೊಂಡ ನಟಿ ಲುಕ್‌ನಲ್ಲಿ ಸಾಕಷ್ಟು ಬದಲಾವಣೆ ಕಾಣಿಸಿಕೊಂಡಿತ್ತು. ಆದರೆ ಈಗ ಮೀರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೊಸ ಲುಕ್ ಹಂಚಿಕೊಂಡಿದ್ದಾರೆ. ಮೀರಾಳ ಲುಕ್ ನೋಡಿ ಎಲ್ರೂ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಅಷ್ಟರ ಮಟ್ಟಿಗೆ ಮೀರಾ ಲುಕ್ ಬದಲಾಗಿದೆ. ಸಿಕ್ಕಾ ಪಟ್ಟೆ ಗ್ಲ್ಯಾಮರಸ್ ಆಗಿ ಮೀರಾ ಕಾಣಿಸಿಕೊಂಡಿದ್ದಾರೆ.

    Senior Star Heroine Meera Jasmine Glamor Photos Going Viral
    ಮೀರಾಳ ಹೊಸ ಲುಕ್ ನೋಡಿದವರೆಲ್ಲಾ ಇದು ಪಕ್ಕಾ ಪ್ಲಾಸ್ಟಿಕ್ ಸರ್ಜರಿ ಎಂದು ಹೇಳುತ್ತಿದ್ದಾರೆ. ಮೀರಾಳ ಮೂಗು ಮತ್ತು ತುಟಿಯ ಆಚಾರ ಬದಲಾಗಿದೆ. ಹಾಗಾಗಿ ಮೀರಾ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಚರ್ಚೆ ಹುಟ್ಟಿಕೊಂಡಿದೆ. ಜೊತೆಗೆ ಇತ್ತೀಚೆಗೆ ಮೀರಾ ಜಾಸ್ಮಿನ್ ಅವರು ಕಳೆದ ಬಾರಿ ಮಾಧ್ಯಮದ ಕಣ್ಣಿಗೆ ಬಿದ್ದಾಗಲೂ ಅಚ್ಚರಿ ಮೂಡಿಸಿದ್ದರು. ಆಭರಣದ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆಗ ಸಿಕ್ಕಾ ಪಟ್ಟೆ ದಪ್ಪ ಆಗಿದ್ದರು. ಆ ಲುಕ್‌ನಿಂದ ಈಗಿನ ಲುಕ್‌ಗೆ ತುಂಬಾ ಬದಲಾವಣೆ ಇದೆ.

    English summary
    Senior Star Heroine Meera Jasmine Glamor Photos Going Viral: She Is Comming Back To Films
    Wednesday, January 26, 2022, 22:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X