ಅತ್ಯಾಚಾರಕ್ಕೆ ಒಳಗಾದ ನೋವು ತೆರೆದಿಟ್ಟ ಶಕೀಲಾ
ಇನ್ನು ನನ್ನ ತಾಯಿಗೆ ಸಂಬಂಧಿಸಿದಂತೆ ನನಗೆ ಯಾವುದೇ ಒಳ್ಳೆಯ ನೆನಪುಗಳು ಇಲ್ಲ. ಆಕೆ ನನ್ನನ್ನು ಯಾವಾಗಲೂ ಪ್ರೀತಿಯಿಂದ ಕಾಣಲಿಲ್ಲ. ಆಪ್ಯಾಯತೆಯಿಂದ ಮಾತನಾಡಲಿಲ್ಲ. ನನ್ನ ಜೀವನವನ್ನು ಸರ್ವನಾಶ ಮಾಡಿದ್ದು ನನ್ನ ತಾಯಿ. ಚಿಕ್ಕಂದಿನಿಂದಲೂ ನನ್ನ ತಾಯಿಗೆ ನಾನೆಂದರೆ ಇಷ್ಟವಿರಲಿಲ್ಲ. ಯಾವಾಗಲೂ ಬೈಯುತ್ತಿದ್ದರು. ಹಿಡಿಶಾಪಗಳನ್ನು ಹಾಕುತ್ತಿದ್ದರು.
ಹೀಗಿರಬೇಕಾರೆ ನನಗೆ ಹರಿನಾರು ವರ್ಷಗಳು ತುಂಬಿಬಂದವು. ಯಾವಾಗಲೂ ನನ್ನನ್ನು ಬೈಯುತ್ತಿದ್ದ ಅಮ್ಮ ಒಂದು ದಿನ ತುಂಬಾ ಹೊಗಳಿದರು. ಆ ಬಳಿಕ ಒಬ್ಬ ವ್ಯಕ್ತಿ ಬಂದು ನಿನ್ನನ್ನು ಹೊರಗೆ ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದರು. ಆತ ನನ್ನನ್ನು ಹಣವುಳ್ಳ ವ್ಯಕ್ತಿ ಬಳಿಗೆ ಕರೆದೊಯ್ಯುತ್ತಾನೆಂದೂ. ಆತನಿಗೆ 'ಸಹಕರಿಸಿದರೆ' ನಮ್ಮ ಕುಟುಂಬದ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು. ಆತ ಹೇಳಿದಂತೆ ಮಾಡಬೇಕು ಎಂದು ಪದೇಪದೇ ಒತ್ತಿ ಹೇಳಿದರು.

ನನಗೆ ಶಾಕ್ ಆಯಿತು. ಅಮ್ಮನ ಮಾತಿನ ಹಿಂದಿನ ಮರ್ಮ ಏನೆಂದು ಗೊತ್ತಾಯಿತು. ಆದರೆ ನನಗೆ ಬೇರೆ ದಾರಿ ಇರಲಿಲ್ಲ. ಅಮ್ಮ ಹೇಳಿದಂತೆ ಒಬ್ಬ ವ್ಯಕ್ತಿ ಬಂದು ಹೋಟೆಲ್ ಗೆ ಕರೆದುಕೊಂಡು ಹೋದ. ಅಲ್ಲಿನ ರೂಂನಲ್ಲಿ ಅಮ್ಮ ಹೇಳಿದ ಶ್ರೀಮಂತ ವ್ಯಕ್ತಿ ಇದ್ದ. ಆತನನ್ನು ನೋಡಿ ನಾನು ಭಯದಿಂದ ತತ್ತರಿಸಿಹೋದೆ. ಆತ ನನ್ನ ಮೇಲೆ ಅತ್ಯಾಚಾರವೆಸಗಿದ. ಇದು ಆರಂಭ ಮಾತ್ರ.
ಆ ಬಳಿಕ ಆ ರೀತಿಯ ಅನೇಕ ಶ್ರೀಮಂತರ ಬಳಿಗೆ ನಾನು ಹೋಗಬೇಕಾದ ಪರಿಸ್ಥಿತಿ ಬಂತು. ಆದರೆ ನನಗೆ ನೋವಾಗಲಿಲ್ಲ. ಆಗಾಗ ಸ್ವಲ್ಪ ತೃಪ್ತಿಯೂ ಸಿಗುತ್ತಿತ್ತು. ನಾನು ನನ್ನ ಕನ್ಯತ್ವನ್ನು ಯಾವಾಗ ಕಳೆದುಕೊಂಡೆನೋ ನನಗೇ ಗೊತ್ತಿಲ್ಲ.
ಆಲ್ಕೋಹಾಲ್ ತೆಗೆದುಕೊಳ್ಳಬೇಕಾದರೆ ನಾನು ಪುರುಷರಿಗಿಂತಲೂ ಮಹಿಳೆಯರ ಕಂಪನಿಯನ್ನೇ ಹೆಚ್ಚಾಗಿ ಬಯಸುತ್ತೇನೆ. ಕುಡಿದ ಬಳಿಕ ಪುರುಷರು ತಮ್ಮ ಕಾಮವನ್ನು ಹೊರಹಾಕುತ್ತಾರೆ. ಅವರೊಂದಿಗೆ ಕುಡಿಯುತ್ತಿದ್ದೇನೆ ಎಂದರೆ ನಾನು ಅವರ ಆಸೆಯನ್ನು ತೀರಿಸಲು ಸಿದ್ಧಳಾಗಿದ್ದೇನೆ ಎಂದೇ ಭಾವಿಸುತ್ತಾರೆ. ಆ ರೀತಿಯ ಪುರುಷರನ್ನು ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ. ಅಂತಹವ ಜೀವನದಲ್ಲಿ ಭಾವ ದಾರಿದ್ರ್ಯ ಹೆಚ್ಚು. ಅವರಿಗೆ ಜೀವನದಲ್ಲಿ ಸೆಕ್ಸ್ ಬಿಟ್ಟು ಬೇರೆ ಏನೂ ಭಾವನೆ ಇಲ್ಲವೆ ಅನ್ನಿಸುತ್ತದೆ.


Click it and Unblock the Notifications