ಮನಸಿಲಾಯೋ ಚೆಲುವೆ ಮಂಜು ವಾರಿಯರ್ ಖಾಸಗಿ ಅಂಗಕ್ಕೆ ಕೈ ಹಾಕಿದ ಅಭಿಮಾನಿ, ವಿಡಿಯೋ ವೈರಲ್
ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ.ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಸೆಲ್ಫಿ ನೆಪದಲ್ಲಿ ಮಾಡಬಾರದ ಕೆಲಸ ಮಾಡಲು ಮುಂದಾಗುತ್ತಾರೆ.
ಅಭಿಮಾನದ ಸೋಗಿನಲ್ಲಿ ನಾಯಕಿಯರಿಗೆ ಕಿಸ್ ಕೊಡುವುದು, ಕೈ ಹಿಡಿದು ಎಳೆಯುವುದು, ಮುಟ್ಟಬಾರದ ಜಾಗವನ್ನೆಲ್ಲ ಮುಟ್ಟುವ ಪ್ರಯತ್ನ ಮಾಡುವುದನ್ನು ಮಾಡುತ್ತಾರೆ. ಇದಕ್ಕೆ ವೈರಲ್ ಆದ ಮಂಜು ವಾರಿಯರ್ ಅವರ ವಿಡಿಯೋ ಮತ್ತೊಂದು ಉದಾಹರಣೆ.

ಹೌದು, ಮಂಜು ವಾರಿಯರ್, ಮಲಯಾಳಂನ ಮನಮೋಹಕ ಚೆಲುವೆ. ಕಳೆದ ಮೂರು ದಶಕಗಳಲ್ಲಿ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಮಾಡಿರುವ ಮಂಜು ವಾರಿಯರ್ ರಜಿನಿಕಾಂತ್ ಅಭಿನಯದ ವೆಟ್ಟೈಯನ್ ಚಿತ್ರದಲ್ಲಿ ಮನಸಿಲಾಯೋ ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಮತ್ತೊಮ್ಮೆ ಕನ್ನ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದರು.
ಇಂಥಾ ಮಂಜು ವಾರಿಯರ್ ಇತ್ತೀಚೆಗೆ ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಶಾಪಿಂಗ್ ಮಾಲ್ ನ ಉದ್ಘಾಟನೆಗೆ ತೆರಳಿದ್ದರು. ಸಹಜವಾಗಿಯೇ ಅಗಣಿತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿಯನ್ನು ನೋಡಲು ಅಲ್ಲಿ ಬಂದಿದ್ದರು.
ತಮ್ಮ ಅಭಿಮಾನಿಗಳನ್ನು ನೋಡಿ ಖುಷಿಯಾದ ಮಂಜು ವಾರಿಯರ್ ಕೂಡ ಯಾರನ್ನೂ ನಿರಾಸೆ ಮಾಡದೇ ಎಲ್ಲರ ಜೊತೆ ಮಾತನಾಡಿದ್ದಾರೆ. ಸಾಧ್ಯವಾದಷ್ಟು ಅಭಿಮಾನಿಗಳ ಕೈ ಕುಲುಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಇದೇ ಸಮಯದಲ್ಲಿ ಅಭಿಮಾನದ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಸೊಂಟ ಮುಟ್ಟಿದ್ದಾನೆ. ಎಳೆದಾಡುವ ಪ್ರಯತ್ನ ಮಾಡಿದ್ದಾನೆ.
ಆದರೆ ಅಭಿಮಾನದ ಮಳೆಯಲ್ಲಿ ನೆನೆಯುತ್ತಿದ್ದ ಮಂಜು ವಾರಿಯರ್ ಅವರ ಗಮನಕ್ಕೆ ಈ ವಿಚಾರ ಬಂದಿಲ್ಲ. ಹೀಗಾಗಿಯೇ ತಲೆ ಕೆಡಿಸಿಕೊಳ್ಳದ ಮಂಜು ವಾರಿಯರ್ ಅಲ್ಲಿಂದ ಹೊರಟು ಹೋಗಿದ್ದಾರೆ.
ಆದರೆ ಅಭಿಮಾನಿಯ ಈ ಕುಕೃತ್ಯ ಯಾರದ್ದೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಹಜವಾಗಿ ಹಲವರ ಆಕ್ರೋಶಕ್ಕೆ ಕೂಡ ಆ ವ್ಯಕ್ತಿ ಗುರಿಯಾಗಿದ್ದಾನೆ. ಹಲವರು ಅಸಭ್ಯ ವರ್ತನೆ ತೋರಿದ ಆ ಅನಾಮಿಕ ವ್ಯಕ್ತಿಯ ವಿರುದ್ಧ ಕೆಂಡ ಕಾರುತ್ತಿದ್ದಾರೆ.
ಹಲವರು ಅಲ್ಲಿಯೇ ಮಂಜು ವಾರಿಯರ್ ಉತ್ತರ ಕೊಡಬೇಕಿತ್ತು ಎಂದರೆ, ಇನ್ನು ಕೆಲವರು ತಪ್ಪೆಲ್ಲಾ ಮಂಜು ವಾರಿಯರ್ ಅವರದ್ದೇ ಎನ್ನುತ್ತಿದ್ದಾರೆ. ಮತ್ತು ಕೆಲವರು ಅಷ್ಟು ಜನರ ಎದುರು ಇಂತಹ ನೀಚ ಕೆಲಸ ಮಾಡಿದವನನ್ನು ಸಾರ್ವಜನಿಕರೆಲ್ಲ ಸೇರಿ ಅಲ್ಲಿಯೇ ಪಾಠ ಕಲಿಸಬೇಕಿತ್ತು ಎಂದರೆ ಅಭಿಮಾನ ಹೃದಯದಲ್ಲಿ ಇರಬೇಕು ಅದನ್ನು ಬಿಟ್ಟು ಅಭಿಮಾನದ ವೇಷ ಹಾಕಿಕೊಂಡು ಈ ರೀತಿ ಮಾಡುವುದು ತಪ್ಪು ಎಂದಿದ್ದಾರೆ. ಸೆಲ್ಫಿ ನೆಪದಲ್ಲಿ ಖಾಸಗಿ ಭಾಗ ಮುಟ್ಟುವುದು ಎಂತಹ ಅಭಿಮಾನ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಕೂಡಲೇ ಪೊಲೀಸರು ಬಂಧಿಸಬೇಕೆಂದು ಕೂಡ ಹಲವರು ಆಗ್ರಹಿಸುತ್ತಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮಂಜು ವಾರಿಯರ್ ಈ ಕುರಿತು ಇನ್ನು ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿ ಅನೇಕರು ಮಂಜು ವಾರಿಯರ್ ಈ ವಿಚಾರದ ಕುರಿತು ಮಾತನಾಡಬೇಕು ಈ ರೀತಿಯ ಘಟನೆಯನ್ನು ಖಂಡಿಸಬೇಕೆಂದು ಕೂಡ ಹಲವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಮಂಜು ವಾರಿಯರ್ ಮಾತನಾಡುತ್ತಾರಾ ? ಕಾದು ನೋಡಬೇಕಿದೆ.


Click it and Unblock the Notifications











