For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಸಿನಿಮಾದ ಚಿತ್ರೀಕರಣ ಆರಂಭಿಸಿದ ಶ್ರದ್ಧಾ ಶ್ರೀನಾಥ್

  |

  ಶ್ರದ್ಧಾ ಶ್ರೀನಾಥ್ ನಟಿಸುತ್ತಿರುವ ಮಲಯಾಳಂ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಸೂಪರ್ ಸ್ಟಾರ್ ಮೋಹನ್ ಲಾಲ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಶ್ರದ್ಧಾ ನಾಯಕಿಯಾಗಿದ್ದಾರೆ. ನಿನ್ನೆ ಅಧಿಕೃತವಾಗಿ ಚಿತ್ರದ ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ.

  ಮೊದಲ ದಿನದ ಶೂಟಿಂಗ್‌ನಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಮತ್ತು ಮೋಹನ್ ಲಾಲ್ ಇಬ್ಬರು ಪಾಲ್ಗೊಂಡಿದ್ದರು. ಈ ಕುರಿತು ಇಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಸಂತಸ ಹಂಚಿಕೊಂಡಿದ್ದಾರೆ.

  ಉನ್ನಿಕೃಷ್ಣನ್-ಮೋಹನ್ ಲಾಲ್ ಮುಂದಿನ ಚಿತ್ರದ ಬಜೆಟ್ ಎಷ್ಟು?ಉನ್ನಿಕೃಷ್ಣನ್-ಮೋಹನ್ ಲಾಲ್ ಮುಂದಿನ ಚಿತ್ರದ ಬಜೆಟ್ ಎಷ್ಟು?

  ಶ್ರದ್ಧಾ ಮತ್ತು ಮೋಹನ್ ಲಾಲ್ ನಟಿಸುತ್ತಿರುವ ಚಿತ್ರಕ್ಕೆ ಆರಾಟ್ಟು ಎಂದು ಹೆಸರಿಟ್ಟಿದ್ದು, ಉನ್ನಿಕೃಷ್ಣನ್ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ದಿನ ಶೂಟಿಂಗ್ ಮಾಡಿದ ಫೋಟೋಗಳನ್ನು ಮೋಹನ್ ಲಾಲ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  ಆ ಕಡೆ ಶ್ರದ್ಧಾ ಶ್ರೀನಾಥ್ ಸಹ ಆರಾಟ್ಟು ಚಿತ್ರೀಕರಣದ ಬಗ್ಗೆ ಖುಷಿಯಾಗಿದ್ದು, ''ಮೊದಲ ದಿನವೇ ಮೋಹನ್ ಲಾಲ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ತು. ನನ್ನನ್ನು ಸ್ವಾಗತಿಸಿದ ಅವರು ''ಕುಟುಂಬಕ್ಕೆ ಸ್ವಾಗತ'' ಎಂದು ಬರಮಾಡಿಕೊಂಡರು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  IAS ಅಧಿಕಾರಿಯಾದ 'ಯು ಟರ್ನ್' ಸುಂದರಿ ಶ್ರದ್ಧಾ ಶ್ರೀನಾಥ್IAS ಅಧಿಕಾರಿಯಾದ 'ಯು ಟರ್ನ್' ಸುಂದರಿ ಶ್ರದ್ಧಾ ಶ್ರೀನಾಥ್

  ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಐಎಎಸ್ ಅಧಿಕಾರಿ ಮಾತ್ರ ಮಾಡುತ್ತಿದ್ದಾರೆ. ಅಂದ್ಹಾಗೆ, ಶ್ರದ್ಧಾ ಈಗಾಗಲೇ ಮಲಯಾಳಂ ಸಿನಿಮಾದಲ್ಲಿ ಮಿಂಚಿದ್ದಾರೆ. ಶ್ರದ್ಧಾ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ್ದೇ ಮಲಯಾಳಂ ಸಿನಿಮಾರಂಗದಿಂದ. 2015ರಲ್ಲಿ ಕೋಹಿನೂರ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು.

  ಮಹಾನ್ ನಾಯಕ ಮೋದಿ ಪಾರ್ಟಿಯಲ್ಲಿ ನಾನು ಇರೋದೇ ಒಂದು ದೊಡ್ಡ ಹೆಮ್ಮೆ

  ಇನ್ನು ಉನ್ನಿಕೃಷ್ಣನ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್‌ನಲ್ಲಿ ಮಡಂಬಿ, ಗ್ರ್ಯಾಂಡ್ ಮಾಸ್ಟರ್, ಮಿಸ್ಟರ್ ಫ್ರಾಡ್, ಹಾಗೂ ವಿಲನ್ ಅಂತಹ ಚಿತ್ರಗಳು ಮೂಡಿ ಬಂದಿದೆ. ಈ ಚಿತ್ರಗಳ ಪೈಕಿ ಮಡಂಬಿ, ಗ್ರ್ಯಾಂಡ್ ಮಾಸ್ಟರ್ ಚಿತ್ರಗಳು ಕಮರ್ಷಿಯಲ್ ಆಗಿ ದೊಡ್ಡ ಸಕ್ಸಸ್ ಕಂಡಿದೆ. ಮಿಸ್ಟರ್ ಫ್ರಾಡ್ ಸಿನಿಮಾಗೆ ಭಾರಿ ಹಿನ್ನಡೆ ಆಗಿತ್ತು. ವಿಲನ್ ಚಿತ್ರ ಸಾಧಾರಣ ಮಟ್ಟದಲ್ಲಿ ಯಶಸ್ಸು ಕಂಡಿತ್ತು.

  English summary
  Kannada actress Shraddha srinath joined set of Aaraattu, starrer Superstar Malayalam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X