For Quick Alerts
  ALLOW NOTIFICATIONS  
  For Daily Alerts

  SIIMA Awards 2022: ಮಲಯಾಳಂನಲ್ಲಿ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

  |

  ಈ ಬಾರಿಯ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕಾರ್ಯಕ್ರಮ ಕಳೆದ ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ಜರುಗಿತು. ಮೊದಲ ದಿನ ಕನ್ನಡ ಮತ್ತು ತೆಲುಗು ಚಿತ್ರರಂಗದ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು ಹಾಗೂ ಭಾನುವಾರ ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಈ ಬಾರಿ ಮಲಯಾಳಂನಲ್ಲಿ ಟೊವಿನೊ ಥಾಮಸ್ ಅಭಿನಯದ ಮಿನ್ನಾಲ್ ಮುರಳಿ ಹತ್ತು ಕೆಟಗರಿಗಳಲ್ಲಿ ನಾಮಿನೇಟ್ ಆಗಿತ್ತು, ಕುರುಪ್ ಎಂಟು ಕೆಟಗರಿಗಳಲ್ಲಿ, ಫಾಹದ್ ಫಾಸಿಲ್ ಅಭಿನಯದ ಮಾಲಿಕ್ ಮತ್ತು ಫಾಹದ್ ಫಾಸಿಲ್ ಅಭಿನಯದ ಮತ್ತೊಂದು ಸಿನಿಮಾ ಜೋಜಿ ತಲಾ ಆರು ಕೆಟಗರಿಗಳಲ್ಲಿ ನಾಮಿನೇಟ್ ಅಗಿದ್ದವು. ಹೀಗೆ ಈ ನಾಲ್ಕು ಸಿನಿಮಾಗಳ ಪೈಕಿ ಯಾವ ಸಿನಿಮಾ ಎಷ್ಟು ಪ್ರಶಸ್ತಿಗಳನ್ನು ಗೆದ್ದವು ಹಾಗೂ ಯಾವ ಕಲಾವಿದರಿಗೆ ಯಾವೆಲ್ಲಾ ಪ್ರಶಸ್ತಿಗಳು ಲಭಿಸಿದವು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

  ಮಲಯಾಳಂನಲ್ಲಿ ಸೈಮಾ ಗೆದ್ದವರ ಸಂಪೂರ್ಣ ಪಟ್ಟಿ:

  ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ - ಟೊವಿನೋ ಥಾಮಸ್ ( ಮಿನ್ನಲ್ ಮುರಳಿ )

  ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ - ಐಶ್ವರ್ಯ ಲಕ್ಷ್ಮಿ

  ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ವಿಮರ್ಶಕರು) - ಬಿಜು ಮೆನನ್ (ಆರ್ಕ್ಕಾರಿಯಂ)

  ಅತ್ಯುತ್ತಮ ನಟಿ (ವಿಮರ್ಶಕರು) - ನಿಮಿಷಾ ಸಜಯನ್ (ದಿ ಗ್ರೇಟ್ ಇಂಡಿಯನ್ ಕಿಚನ್)

  ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ - ಬಾಬು ರಾಜ್ ( ಜೋಜಿ )

  ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಉನ್ನಿಮಯ ಪ್ರಸಾದ್ ( ಜೋಜಿ )

  ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ನಟ - ನಾಸ್ಲೆನ್ ಕೆ ಗಫೂರ್ ( ಹೋಮ್‌ )

  ಅತ್ಯುತ್ತಮ ಖಳ ನಟ - ಗುರು ಸೋಮಸುಂದರಂ ( ಮಿನ್ನಲ್ ಮುರಳಿ )

  ಅತ್ಯುತ್ತಮ ಉದಯೋನ್ಮಖ ನಟ - ಸನಲ್ ಅಮನ್ ( ಮಾಲಿಕ್ )

  ಅತ್ಯುತ್ತಮ ಉದಯೋನ್ಮಖ ನಟಿ - ಅನಘಾ ನಾರಾಯಣನ್ ( ತಿಂಕಲಚ್ಚ ನಿಶ್ಚಯಮ್)

  ಅತ್ಯುತ್ತಮ ಉದಯೋನ್ಮಖ ನಿರ್ದೇಶಕಿ - ಕಾವ್ಯ ಪ್ರಕಾಶ್ ( ವಾಂಕು )

  ಅತ್ಯುತ್ತಮ ನಿರ್ದೇಶಕ - ಮಹೇಶ್ ನಾರಾಯಣನ್ ( ಮಾಲಿಕ್ )

  ಅತ್ಯುತ್ತಮ ಛಾಯಾಗ್ರಾಹಕ - ನಿಮಿಷ್ ರವಿ ( ಕುರುಪ್ )

  ಅತ್ಯುತ್ತಮ ಸಂಗೀತ ನಿರ್ದೇಶಕ - ಬಿಜಿಬಾಲ್ ಮಣಿಯಿಲ್ ( ವೆಲ್ಲಾಮ್ )

  ಅತ್ಯುತ್ತಮ ಹಿನ್ನೆಲೆ ಗಾಯಕ - ಮಿಥುನ್ ಜಯರಾಜ್ 'ಉಯಿರೆ' ( ಮಿನ್ನಲ್ ಮುರಳಿ )

  ಅತ್ಯುತ್ತಮ ಹಿನ್ನೆಲೆ ಗಾಯಕಿ - ಸುಜಾತಾ ಮೋಹನ್ ದಿ ಪ್ರೈಸ್ಟ್ ಚಿತ್ರದ 'ನೀಲಾಂಬಳೆ' ಹಾಡಿಗಾಗಿ

  ಅತ್ಯುತ್ತಮ ಗೀತರಚನೆಕಾರ - ಮುಷಿನ್ ಪರರಿ - ಭೀಮಂತೆ ( ವಳಿ )

  English summary
  SIIMA Awards 2022: Complete list of winners from Malayalam. Take a look
  Tuesday, September 13, 2022, 9:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X