For Quick Alerts
  ALLOW NOTIFICATIONS  
  For Daily Alerts

  ಸಿಲ್ಕ್ ಸ್ಮಿತಾ ಅನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ನಿರ್ದೇಶಕ ಸಾವು

  |

  ಸಿಲ್ಕ್ ಸ್ಮಿತಾ, ಭಾರತೀಯ ಚಿತ್ರರಂಗ ಮರೆಯಲಾಗದ ಹೆಸರು. ಈಗಲೂ ಅವರ ಜೀವನ ಕುರಿತು ಸಿನಿಮಾಗಳು ತೆರೆಗೆ ಬರುತ್ತಲೇ ಇವೆ ಎಂದರೆ ಸಿಲ್ಕ್ ಸ್ಮಿತಾರ ಜೀವನ, ವ್ಯಕ್ತಿತ್ವ ಎಷ್ಟು ವರ್ಣರಂಜಿತವಾಗಿತ್ತು ಎಂಬುದನ್ನು ಊಹಿಸಬಹುದು. ಇಂಥ ಸಿಲ್ಕ್ ಸ್ಮಿತಾ ಅನ್ನು ಸಿನಿಮಾಗಳಿಗೆ ಪರಿಚಯಿಸಿದ್ದ ನಿರ್ದೇಶಕ ಇಂದು ನಿಧನ ಹೊಂದಿದ್ದಾರೆ.

  ಸಿಲ್ಕ್ ಸ್ಮಿತಾಗೆ ಮೊದಲ ಬಾರಿಗೆ ಸಿನಿಮಾದಲ್ಲಿ ಅವಕಾಶ ನೀಡಿದ ಮಲಯಾಳಂ ನಿರ್ದೇಶಕ, ನಿರ್ಮಾಪಕ ಆಂಟೋನಿ ಈಸ್ಟ್‌ಮನ್ ತಮ್ಮ 77 ನೇ ವಯಸ್ಸಿನಲ್ಲಿ ಕೇರಳದ ತ್ರಿಶೂರ್‌ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

  ಈಸ್ಟ್‌ಮನ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದ ಆಂಟೋನಿ ನಿರ್ದೇಶನ ಮಾಡಿದ್ದು ಆರು ಸಿನಿಮಾಗಳನ್ನು ಮಾತ್ರ. ಆರರಲ್ಲಿ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ನಿರ್ದೇಶನದ ಜೊತೆಗೆ ಸ್ಟಿಲ್ ಫೊಟೊಗ್ರಾಫರ್‌, ಕತೆ, ಚಿತ್ರಕತೆ ರಚನೆಗಾರ ಹಾಗೂ ನಟನಾಗಿಯೂ ಕೆಲವು ಸಿನಿಮಾಗಳಲ್ಲಿ ಆಂಟೋನಿ ನಟಿಸಿದ್ದಾರೆ.

  ಆಂಟೊನಿ ಮೊದಲು ನಿರ್ದೇಶಿಸಿದ್ದು 'ಇನಾಯೆ ಥೇಡಿ' ಸಿನಿಮಾದಲ್ಲಿ ಇದೇ. ಈ ಸಿನಿಮಾ 1979 ರಲ್ಲಿ ಬಿಡಗುಡೆ ಆಗಿತ್ತು. ಇದೇ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಮೊದಲ ಬಾರಿಗೆ ನಟನೆ ಮಾಡಿದ್ದರು. ಅಷ್ಟೇ ಅಲ್ಲದೆ ಮಲಯಾಳಂನಲ್ಲಿ ಹಲವು ವರ್ಷಗಳ ಕಾಲ ನಾಯಕ, ಪೋಷಕ ಪಾತ್ರಗಳಲ್ಲಿ ಮಿಂಚಿದ ಕಲಾಶಾಲ ಬಾಬುಗೆ ಸಹ ಇದೇ ಮೊದಲ ಸಿನಿಮಾ.

  'ಇನಾಯೆ ಥೇಡಿ' ಸಿನಿಮಾದಲ್ಲಿ ನಟಿ ಶೋಭಾ ಅನ್ನು ನಾಯಕಿಯನ್ನಾಗಿ ಮಾಡಲು ಆಂಟೊನಿ ಉದ್ದೇಶಿಸಿದ್ದರು. ಆದರೆ ಆಕೆಯ ಹಠಾತ್ ಸಾವಿನಾಂದಿಗೆ ಹೊಸ ನಾಯಕಿಯನ್ನು ಹುಡುಕುವಾಗ ಆಡಿಶನ್ ಒಂದರಲ್ಲಿ ಸಿಲ್ಕ್ ಸ್ಮಿತಾ ಆಂಟೊನಿ ಕಣ್ಣಿಗೆ ಬಿದ್ದು ಅವರನ್ನೇ ನಾಯಕಿಯನ್ನಾಗಿ ಮಾಡಿಕೊಂಡರು.

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat

  ವಿಜಯಲಕ್ಷ್ಮಿ ಆಗಿದ್ದ ಹೆಸರನ್ನು ಸ್ಮಿತಾ ಎಂದು ಬದಲಿಸದ್ದು ಸಹ ಇದೇ ಆಂಟೊನಿ. ಒಂದು ಸಂದರ್ಶನದಲ್ಲಿ ಆಂಟೊನಿ ಹೇಳಿರುವಂತೆ, ''ಆಗ ಸ್ಮಿತಾ ಪಾಟಿಲ್ ಹೆಸರು ಜೋರಾಗಿ ಕೇಳಿಬರುತ್ತಿತ್ತು. ಸ್ಮಿತಾ ಪಾಟೀಲ್ ಸಹ ಹೆಚ್ಚು ಬೆಳ್ಳಗಿದ್ದವರಲ್ಲ. ಹಾಗಾಗಿ ನಾನೇ ವಿಜಯಲಕ್ಷ್ಮಿ ಹೆಸರು ಬದಲಿಸಿ ಸ್ಮಿತಾ ಎಂದು ನಾಮಕರಣ ಮಾಡಿದೆ. ನಮ್ಮ ಸಿನಿಮಾ ಬಿಡುಗಡೆ ಆದ ಬಳಿಕ ತಮಿಳಿನ ಒಂದು ಸಿನಿಮಾದಲ್ಲಿ ಸ್ಮಿತಾ ನಟಿಸಿದರು ಅದರಲ್ಲಿ ಆಕೆಯ ಪಾತ್ರದ ಹೆಸರು ಸಿಲ್ಕ್ ಹಾಗಾಗಿ ಅವರು ಮುಂದೆ ಸಿಲ್ಕ್ ಸ್ಮಿತಾ ಎಂದೇ ಖ್ಯಾತರಾದರು'' ಎಂದಿದ್ದರು.

  English summary
  Actress Silk Smitha's debut film director Anthony Eastman died in Kerala. He was the director who introduced Silk Smitha to movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X