32ನೇ ವರ್ಷದಲ್ಲಿ ಸದ್ದಿಲ್ಲದೇ ಸರಳವಾಗಿ ಮದುವೆಯಾದ ಖ್ಯಾತ ಗಾಯಕಿ

''ಮದುವೆ'' ಎಂಬ ಮೂರಕ್ಷರದ ನಂಟಿನ ಜತೆ ಎರಡು ಜೀವ ಬೆಸೆದುಕೊಳ್ಳಲು ಅಲ್ಲಲ್ಲಿ ಕೆಲವರು ಸರಳ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ದೇಗುಲದಲ್ಲಿ ನಡೆಯುವ ಸರಳ ವಿವಾಹ, ರಿಜಿಸ್ಟರ್ಡ್‌ ಮದುವೆ, ಸಾಮೂಹಿಕ ವಿವಾಹ, ಗೋ ಗ್ರೀನ್‌ ಜಾಗೃತಿಯ ಪರಿಸರ ಮದುವೆಗಳು, ಹಳ್ಳಿಗಳಲ್ಲಿ ನಡೆಯುವ ಸರಳ ರೈತ ಮದುವೆಗಳು...

ಹೀಗೆ ಹಲವು ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರ ಅಲ್ಲ. ಈ ಸಾಲಿನಲ್ಲಿ ಸೆಲೆಬ್ರೆಟಿಗಳು ಕೂಡ ಇದ್ದಾರೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಸರಳವಾಗಿ ವೈವಾಹಿಕ ಬದುಕಿಗೆ ಮುನ್ನುಡಿ ಬರೆಯುತ್ತಾರೆ. ಉದಾಹರಣೆಗೆ ಗೌರಿ ಲಕ್ಷ್ಮಿ. ಹೌದು, ಗೌರಿ ಲಕ್ಷ್ಮಿ.. ಮಲಯಾಳಂನ ಖ್ಯಾತ ಗಾಯಕಿ. ಸಂಗೀತ ನಿರ್ದೇಶಕಿ. ಇಷ್ಟೇ ಅಲ್ಲ ಸಾಹಿತಿ ಕೂಡ ಹೌದು.

Singer Gowry Lekshmi Is Married Shares Stunning First Wedding Photos With Kalesh Govindan

ಕೇವಲ 13ರ ಪ್ರಾಯದಲ್ಲೇ ಮೋಹನ್ ಲಾಲ್ ಅಭಿನಯದ ''ಕಾಸನೋವಾ'' ಚಿತ್ರದಲ್ಲಿನ ''ಸಖಿಯೇ'' ಎಂಬ ಹಾಡನ್ನು ಬರೆಯುವುದಲ್ಲದೇ ಅದಕ್ಕೆ ಸಂಗೀತ ನಿರ್ದೇಶನವನ್ನು ಕೂಡ ಇವರು ಮಾಡಿದ್ದರು. ಈ ಮೂಲಕ 13ನೇ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶ ಮಾಡಿದರು.

ಆ ನಂತರ ''ವಂದೇ ಮಾತರಂ''.. ''ಇತು ಜೀವಿತಂ''.. ''ಆಯಿರಂ ಕಾಲಮೈ''.. ''ಸೊಲ್ಲವಾ''.. ''ಆರೋ ನೆಂಜಿಲ್''.. ''ಪಟ್ಟಂ ಪೋಲೆ''.. ಹೀಗೆ ಹಲವಾರು ಮಲಯಾಳಂ ಹಾಡುಗಳಿಗೆ ತಮ್ಮ ಕಂಠ ಕುಣಿಸಿದ ಗೌರಿ ಲಕ್ಷ್ಮಿ ''ಅಜಿತ ಹರೇ ಜಯ''.. ''ಎಂತೆ ಪೇರು ಪೆಣ್ಣು'' ಸೇರಿ ಕೆಲ ಆಲ್ಬಂ ಹಾಡುಗಳಿಗೆ ಕೂಡ ಧ್ವನಿಯಾದರು. ಅಯ್ಯಪ್ಪ ಸ್ವಾಮಿಯ ''ಹರಿವರಾಸನಂ'' ಇವರ ಇತ್ತೀಚಿನ ಜನಪ್ರಿಯ ಹಾಡು. ಅದ್ಭುತವಾಗಿ ಈ ಹಾಡನ್ನು ಇವರು ಮರುಸೃಷ್ಟಿಸಿದ್ದಾರೆ.

ಇಂಥಾ ಗೌರಿ ಲಕ್ಷ್ಮಿ ಸದ್ಯ ಕಾಲೇಶ್ ಗೋವಿಂದನ್ ಅವರ ಜೊತೆ ಸದ್ದಿಲ್ಲದೇ ಮದುವೆಯಾಗಿದ್ದಾರೆ. ವಿಶೇಷ ಅಂದರೆ ಕಾಲೇಶ್ ಕೂಡ ಚಿತ್ರರಂಗದ ಹಿನ್ನೆಲೆಯವರೇ. ಮಲಯಾಳಂನಲ್ಲಿ ಕಾನ್ಸೆಪ್ಟ್ ಡೈರೆಕ್ಟರ್ ಮತ್ತು ವಿಡಿಯೋ ಡೈರೆಕ್ಟರ್ ಆಗಿ ಕಾಲೇಶ್ ಗುರುತಿಸಿಕೊಂಡಿದ್ಧಾರೆ.

ಇಬ್ಬರ ಲವ್ ಸ್ಟೋರಿ

ಗೌರಿ ಲಕ್ಷ್ಮಿ ಮತ್ತು ಕಾಲೇಶ್ ಇಬ್ಬರು ಚಿತ್ರರಂಗದಲ್ಲಿರುವ ಹಿನ್ನೆಲೆ ವೃತ್ತಿಪರ ಕೆಲಸಕ್ಕೆ ಇಬ್ಬರು ಭೇಟಿಯಾಗಿದ್ದರು. ಗೌರಿ ಲಕ್ಷ್ಮಿ ಸಾಹಿತ್ಯ ಬರೆದು ಹಾಡಿರುವ ಆಲ್ಬಂ ಹಾಡುಗಳ ಹಿಂದೆ ಇದ್ದಿದ್ದು ಇದೇ ಕಾಲೇಶ್ ಗೋವಿಂದನ್. ಉದಾಹರಣೆಗೆ ಗೌರಿ ಅವರ ಖ್ಯಾತಿಯನ್ನು ಹೆಚ್ಚಿಸಿದ ''ಚಂಗಿಲೆ ತುಡಿಪ್ಪು ಪೊಲೆ'' ಹಾಡನ್ನು ಕಾಲೇಶ್ ನಿರ್ದೇಶಿಸಿದ್ದರು.

Singer Gowry Lekshmi Is Married Shares Stunning First Wedding Photos With Kalesh Govindan

ಹೀಗೆ ಪರಿಚಯವಾದ ಇಬ್ಬರು ಕೆಲಸ ಮಾಡುತ್ತಾ ಮಾಡುತ್ತಾ ಪ್ರೇಮದ ಬಲೆಯಲ್ಲಿ ಸಿಲುಕಿದ್ದರು. ಆದರೆ ತಮ್ಮ ಪ್ರೇಮಕಥೆ ಎಲ್ಲಿಯೂ ಬಹಿರಂಗವಾಗದಂತೆ ನೋಡಿಕೊಂಡ ಇಬ್ಬರು ಸದ್ಯ ಸದ್ದು ಗದ್ದಲ ಇಲ್ಲದೇ ಮದುವೆಯ ಬಂಧನಕ್ಕೊಳಗಾಗಿದ್ದಾರೆ.

ಅತ್ಯಂತ ಸರಳವಾಗಿ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಗೌರಿ ಮತ್ತು ಕಾಲೇಶ್ ಈ ಶುಭ ಸಮಾಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ನವ ಜೋಡಿಗೆ ಇವರ ಅಭಿಮಾನಿಗಳು ಶುಭ ಕೋರುತ್ತಿದ್ಧಾರೆ. ಮಲಯಾಳಂ ಚಿತ್ರರಂಗದ ಹಲವು ಸ್ಟಾರ್ ಗಳು ಗೌರಿ ಮತ್ತು ಕಾಲೇಶ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನುಳಿದಂತೆ ಇವರಿಬ್ಬರ ಮದುವೆಯ ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ. ಅಂದ್ಹಾಗೇ ಗೌರಿ ಅವರಿಗೆ ಈಗ 32ರ ಹರೆಯ. ಗೂಗಲ್‌ನಲ್ಲಿ ಲಭ್ಯ ಇರುವ ಮಾಹಿತಿಯ ಪ್ರಕಾರ ಕಾಲೇಶ್ ಅವರಿಗೆ 30 ರಿಂದ 35 ವರ್ಷ ಇರಬಹುದು.

English summary
Singer Gowry Lekshmi ties the knot with Kalesh Govindan! Check out the stunning first wedding photos shared by the 'Godha' singer on social media.
Read more about: marriage mollywood singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X