For Quick Alerts
  ALLOW NOTIFICATIONS  
  For Daily Alerts

  ''ನಿತ್ಯಾ ಮೆನನ್ ಅನ್ನು ಮದುವೆಯಾಗುವುದಿಲ್ಲ, ನನ್ನನ್ನು ಕಳೆದುಕೊಂಡು ಪಶ್ಚಾತಾಪ ಪಡಲಿದ್ದಾಳೆ''

  |

  ಕನ್ನಡತಿ ನಟಿ ನಿತ್ಯಾ ಮೆನನ್ ನಟನೆ ಆರಂಭಿಸಿದ್ದು ಕನ್ನಡ ಸಿನಿಮಾದಲ್ಲಾದರೂ ಪ್ರಖ್ಯಾತಿ ಗಳಿಸಿದ್ದು ಪರಭಾಷೆ ಸಿನಿಮಾಗಳಲ್ಲಿಯೇ.

  ಕನ್ನಡತಿ ನಿತ್ಯಾ ಮೆನನ್ ಕನ್ನಡದ ಐದು ಸಿನಿಮಾಗಳಲ್ಲಿಯಷ್ಟೆ ಈ ವರೆಗೆ ನಟಿಸಿದ್ದಾರೆ. ಆದರೆ ಮಲಯಾಳಂ, ತೆಲುಗಿನಲ್ಲಿ ಬಹುಬೇಡಿಕೆಯ ನಟಿ. ತಮಿಳು, ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಿತ್ಯಾ.

  Anu Prabhakar: ನಟಿ ಅನು ಪ್ರಭಾಕರ್ ಈ ಹೊಸ ಅವತಾರ ನೋಡಿದ್ದೀರಾ?Anu Prabhakar: ನಟಿ ಅನು ಪ್ರಭಾಕರ್ ಈ ಹೊಸ ಅವತಾರ ನೋಡಿದ್ದೀರಾ?

  ದಕ್ಷಿಣ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಿತ್ಯಾ ಮೆನನ್‌ಗೆ ಮಲಯಾಳಂ ಚಿತ್ರರಂಗದಲ್ಲಿ ಮಾತ್ರ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ಸ್ಟಾರ್ ನಟ-ನಟಿಯರ ಪಾಲಿಗೆ ಜೀವದ್ರವ್ಯವಿದ್ದಂತೆ ಆದರೆ ಕೆಲವೊಮ್ಮೆ ಕಿರಿ-ಕಿರಿ ನೀಡುವುದೂ ಉಂಟು.

  ಕೇರಳದಲ್ಲಿ ನಿತ್ಯಾ ಮೆನನ್‌ಗೆ ಒಬ್ಬ ಹುಚ್ಚು ಅಭಿಮಾನಿಯಿದ್ದಾನೆ. ಮೂಲತಃ ಮೋಹನ್‌ಲಾಲ್ ಅಭಿಮಾನಿಯಾಗಿರುವ ಸಂತೋಶ್ ವರ್ಕಿ ತಮ್ಮ ಆವೇಷಭರಿತ ಸಿನಿಮಾ ವಿಮರ್ಶೆ, ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಂದ ಕೇರಳದಾದ್ಯಂತ ವೈರಲ್ ವ್ಯಕ್ತಿಯಾಗಿದ್ದಾನೆ.

  Neethu Shetty : ದಪ್ಪಗಿರುವವರಿಗೆ 'ಸೂ*' ಸರ್ಟಿಫಿಕೇಟ್ ಕೊಡಲಾಗ್ತಿದೆ: ನಟಿ ನೀತು ಶೆಟ್ಟಿ ಆಕ್ರೋಶNeethu Shetty : ದಪ್ಪಗಿರುವವರಿಗೆ 'ಸೂ*' ಸರ್ಟಿಫಿಕೇಟ್ ಕೊಡಲಾಗ್ತಿದೆ: ನಟಿ ನೀತು ಶೆಟ್ಟಿ ಆಕ್ರೋಶ

  ಸಂತೋಶ್ ವರ್ಕಿ, ನಿತ್ಯ ಮೆನನ್‌ರ ಹುಚ್ಚು ಅಭಿಮಾನಿಯಾಗಿದ್ದು ಹಿಂದೊಮ್ಮೆ ತಾನು ನಿತ್ಯಾ ಮೆನನ್ ಅನ್ನು ಮದುವೆಯಾಗುವುದಾಗಿ ಹೇಳಿದ್ದ. ನಿತ್ಯಾ ಮೆನನ್‌ಗೆ ಪ್ರೊಪೋಸ್ ಮಾಡಲೆಂದು ಆಕೆಯ ನಿವಾಸಕ್ಕೆ ಸಹ ಹೋಗಿದ್ದ. ತಾನು ನಿತ್ಯಾ ಮೆನನ್ ಅನ್ನು ಮದುವೆಯಾಗಿಯೇ ತೀರುವುದಾಗಿ ಹೇಳಿದ್ದ.

  ಆದರೆ ಈಗ ವರಸೆ ಬದಲಿಸಿರುವ ಸಂತೋಶ್, ತಾನು ನಿತ್ಯ ಮೆನನ್ ಅನ್ನು ವಿವಾಹವಾಗುವುದಿಲ್ಲ ಎಂದಿದ್ದಾನೆ. ನನಗೆ ನಿತ್ಯಾ ಮೆನನ್ ಅನ್ನು ಮದುವೆಯಾಗಲು ಈಗ ಆಸಕ್ತಿ ಇಲ್ಲ. ಆಕೆ ನನಗೆ ತಕ್ಕುದಾವಳಲ್ಲ. ಆಕೆ ನಿಜವಾಗಿಯೂ ಒಳ್ಳೆಯ ವ್ಯಕ್ತಿ ಆಗಿದ್ದಿದ್ದರೆ ಕನಿಷ್ಟ ಪಕ್ಷ ತಮ್ಮ ಮೊಬೈಲ್ ನಂಬರ್ ಅನ್ನಾದರೂ ನನಗೆ ನೀಡುತ್ತಿದ್ದಳು. ಆಕೆ ಅದನ್ನೂ ಮಾಡಿಲ್ಲ'' ಎಂದು ದೂರಿದ್ದಾನೆ.

  'ನಾನು ನಿತ್ಯಾ ಮೆನನ್ ಮೇಲಿನ ಪ್ರೀತಿಯನ್ನು ಕಳೆದುಕೊಂಡಿದ್ದೇನೆ. ಆಕೆಗಾಗಿ ಅಲೆದು ಅಲೆದು ನಾನು ನನ್ನ ಸಮಯ-ಶಕ್ತಿ ವ್ಯರ್ಥ ಮಾಡಿಕೊಂಡಿದ್ದೇನೆ. ಈಗ ಆಕೆಯೇ ಬಂದು ನನ್ನ ಎದುರು ನಿಂತು ನನ್ನನ್ನು ಮದುವೆಯಾಗು ಎಂದು ಕೇಳಿ ಕೊಂಡರೂ ನಾನು ಆಕೆಯನ್ನು ಮದುವೆಯಾಗುವುದಿಲ್ಲ. ನನ್ನನ್ನು ಕಳೆದುಕೊಂಡು ಆಕೆ ಜೀವನದಲ್ಲಿ ಪಶ್ಚಾತ್ತಾಪ ಪಡಲಿದ್ದಾಳೆ'' ಎಂದು ಸಂತೋಶ್ ಹೇಳಿದ್ದಾರೆ.

  English summary
  Social media viral figure Santhosh Varki said he wont marry actress Nithya Menon. He once visited Nithya Menon's house to propose her.
  Friday, March 25, 2022, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X