ಬಾಲನಟಿಯಾಗಿ ನಟಿಸಿದ್ದ ಚಿತ್ರದ ದೃಶ್ಯ ಅಶ್ಲೀಲ ವೆಬ್ ಸೈಟ್ ನಲ್ಲಿ ಲೀಕ್: ನಟಿ ಆತ್ಮಹತ್ಯೆಗೆ ಯತ್ನ
ಬಾಲನಟಿಯಾಗಿ ನಟಿಸಿದ್ದ ಸಿನಿಮಾದ ದೃಶ್ಯವೊಂದು ಪೋರ್ನ್ ವೆಬ್ ಸೈಟ್ ಮತ್ತು ಕೆಲವು ಯೂಟ್ಯೂಬ್ ಚಾನಲ್ ಗಳಲ್ಲಿ ಹರಿದಾಡುತ್ತಿರುವುದನ್ನು ನೋಡಿ ನಟಿ ಸೋನಾ ಎಂ ಅಬ್ರಹಾಂ ಬೇಸರ ವ್ಯಕ್ತಪಡಿಸಿದ್ದಾರೆ.
ಸೋನಾ ಎಂ ಅಬ್ರಹಾಂ 'ಫಾರ್ ಸೇಲ್' ಎನ್ನುವ ಮಲಯಾಳಂ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರಂತೆ. ಆಗ ಆಕೆಗೆ 14 ವರ್ಷ ವಯಸ್ಸಾಗಿತ್ತು. ಈ ಸಿನಿಮಾದಲ್ಲಿ ಕಾದಲ್ ಸಂಧ್ಯಾ ಮತ್ತು ಐಶ್ವರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸೋನಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
'ಫಾರ್ ಸೇಲ್' ಸಿನಿಮಾದಲ್ಲಿ 14 ವರ್ಷದ ಸೋನಾ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಇದನ್ನು ನೋಡಿ ಸಹೋದರಿ ಕಾದಲ್ ಸಂಧ್ಯಾ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವಿದೆ. ಈ ದೃಶ್ಯ ಪೋರ್ನ್ ವೆಬ್ ಸೈಟ್ ನಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ನಾನು ಆತ್ಮಹತ್ಯೆಗೂ ಪ್ರಯತ್ನಿಸಿದ್ದೆ. ಈ ವಿಡಿಯೋವನ್ನು ತೆಗೆಯುವಂತೆ ಆಕೆ ಮತ್ತು ಕುಟುಂಬದವರು ಪದೇ ಪದೇ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಆ ಸಣ್ಣ ವಯಸ್ಸಿನಲ್ಲಿ ಫಾರ್ ಸೇಲ್ ನಿರ್ದೇಶಕರು ಈ ದೃಶ್ಯವನ್ನು ಮಾಡಲು ಕೇಳಿಕೊಂಡರು. ಮತ್ತು 150ಕ್ಕೂ ಹೆಚ್ಚು ಸದಸ್ಯರಿರುವ ಸಿನಿಮಾ ಸೆಟ್ ನಲ್ಲಿ ಎಲ್ಲರ ಮುಂದೆ ಈ ದೃಶ್ಯ ಮಾಡಲು ನಿರಾಕರಿಸಿದೆ ಎಂದು ಸೋನಾ ಚಿತ್ರೀಕರಣದ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಬಳಿಕ ಈ ದೃಶ್ಯವನ್ನು ನಿರ್ದೇಶಕರು ತಮ್ಮ ಕಚೇರಿಯಲ್ಲಿ ಖಾಸಗಿಯಾಗಿ ಮಾಡಲು ಮನವರಿಕೆ ಮಾಡಿಕೊಂಡರು, ಬಳಿಕ ಒಪ್ಪಿಕೊಂಡೆ ಆದರೆ ಈ ದೃಶ್ಯದ ಬಗ್ಗೆ ಮಹತ್ವ ಮತ್ತು ಚಲನಚಿತ್ರವು ಸಮಾಜಕ್ಕೆ ನೀಡುತ್ತಿರುವ ಸಂದೇಶದ ಬಗ್ಗೆ ಅಂದು ಸರಿಯಾಗಿ ತಿಳಿಸಿರಲಿಲ್ಲ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.
ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ನಾನು ಎಸ್ ಎಸ್ ಎಲ್ ಸಿ ಮುಗಿಸಿ 11ನೇ ತರಗತಿಯ ಆರಂಭದ ದಿನಗಳ ಲ್ಲಿ ಈ ದೃಶ್ಯಗಳು ಯೂಟ್ಯೂಬ್ ಮತ್ತು ಪೋರ್ನ್ ವೆಬ್ ಸೈಟ್ ಗಳಲ್ಲಿ ಲೀಕ್ ಆಯಿತು. ಇದರಿಂದ ತುಂಬಾ ಒತ್ತಡಕ್ಕೆ ಸಿಲುಕಿದೆ. ತುಂಬಾ ಸಮಸ್ಯೆ ಎದುರಾಯಿತು.
ಶಿಕ್ಷಕರು, ಸ್ನೇಹಿತರು, ಸಂಬಧಿಸಕರು ನನ್ನನ್ನು ಅನುಮಾನದಿಂದ ನೋಡಲು ಶುರು ಮಾಡಿದರು. ಆದರೆ ಕುಟುಂಬದವರು ಸಿನಿಮಾ ಎಂದರೆ ಹೆದರುತ್ತಾರೆ. ಸಮಾಜ, ಶೀಕ್ಷಕರು ಒಂದು ರೀತಿ ನೋಡಿದ್ದು ತುಂಬಾ ನೋವಾಯಿತು ಎಂದು ಹೇಳಿದ್ದಾರೆ.


Click it and Unblock the Notifications











