ಏಳು ವರ್ಷದ ಬಳಿಕ ಮತ್ತೆ ಮಲಯಾಳಂನತ್ತ ಹೊರಟ ಸೋನು ಗೌಡ
ಕನ್ನಡದ ನಟಿ ಸೋನು ಗೌಡ ಮತ್ತೆ ಮಲಯಾಳಂ ಚಿತ್ರರಂಗದ ಕಡೆಗೆ ಹೊರಟಿದ್ದಾರೆ. ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಸೋನು ಗೌಡ ನಾಲ್ಕನೇ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.
ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಜೊತೆಗೆ ಸೋನು ಗೌಡ ನಟಿಸಿದ್ದ 'ಒನ್ ಬೈ ಟು' ಸಿನಿಮಾ ಏಳು ವರ್ಷದ ಹಿಂದೆ ಬಿಡುಗಡೆ ಆಗಿತ್ತು. ಅದೇ ಅವರು ನಟಿಸಿದ್ದ ಕೊನೆಯ ಮಲಯಾಳಂ ಸಿನಿಮಾ.
ಇದೀಗ ಮತ್ತೆ ಹೊಸ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿರುವ ಸೋನು ಗೌಡರದ್ದು ಸಿನಿಮಾದಲ್ಲಿ ಗಾಯಕಿಯ ಪಾತ್ರ. ಗಾಯಕಿ ಹಾಗೂ ಆಕೆಯ ತಾಯಿಯ ಪಾತ್ರವನ್ನು ಕೇಂದ್ರವಾಗಿಸಿಕೊಂಡಿರುವ ಕತೆಯುಳ್ಳ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.

ಏಪ್ರಿಲ್ 9 ರಿಂದ ಸೋನು ಗೌಡ ಅವರು ಮಲಯಾಳಂ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಿನಿಮಾವನ್ನು ಸುನಿಲ್ ಸುಬ್ರಹ್ಮಣ್ಯ ಎಂಬುವರು ನಿರ್ದೇಶಿಸುತ್ತಿದ್ದಾರೆ. ಸುನಿಲ್‌ಗೆ ಇದು ನಿರ್ದೇಶಕನಾಗಿ ಮೊದಲ ಸಿನಿಮಾ.
'ಇಂತಿ ನಿನ್ನ ಪ್ರೀತಿಯ' ಸಿನಿಮಾ ಮೂಲಕ ನಟನೆ ಆರಂಭಿಸಿದ ಸೋನು ಗೌಡ ಅವರು ಮೊದಲ ಬಾರಿಗೆ 2010 ರಲ್ಲಿ 'ಬೆಸ್ಟ್ ಆಕ್ಟರ್' ಸಿನಿಮಾದ ಮೂಲಕ ಮಲಯಾಳಂ ಸಿನಿಮಾಕ್ಕೆ ಪ್ರವೇಶ ಮಾಡಿದರು. ಆ ಸಿನಿಮಾದಲ್ಲಿ ಸೋನು ಗೌಡ ಅವರು ಖ್ಯಾತ ನಟ ಮಮ್ಮುಟಿ ಜೊತೆಗೆ ತೆರೆ ಹಂಚಿಕೊಂಡಿದ್ದರು. ಮಲಯಾಳಂ ಸಿನಿಮಾ ರಂಗದಲ್ಲಿ ಸೋನು ಗೌಡ ಅವರನ್ನು ಶ್ರುತಿ ರಾಮಕೃಷ್ಣ ಎಂದು ಗುರುತಿಸಲಾಗುತ್ತದೆ.
Recommended Video
ಸೋನು ಗೌಡ ನಟಿಸಿರುವ ಕನ್ನಡ ಸಿನಿಮಾ 'ಯುವರತ್ನ' ಸಿನಿಮಾವು ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ. ಇದರ ಹೊರತಾಗಿ 'ಶಾಲಿನಿ ಐಪಿಎಸ್', 'ರೆಡ್' ಸಿನಿಮಾದಲ್ಲಿಯೂ ಸೋನು ಗೌಡ ನಟಿಸಿದ್ದಾರೆ. ಅವೂ ಸಹ ಬಿಡುಗಡೆ ಆಗಬೇಕಿವೆ.


Click it and Unblock the Notifications











