ಒಂದಲ್ಲ..ಎರಡಲ್ಲ.. ನಾಲ್ಕು ಬಾರಿ ಗರ್ಭಪಾತವಾಗಿತ್ತು ಎಂದ ಜಾಕಿ ಭಾವನಾ..!

ಬಣ್ಣದ ಲೋಕ ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟುಕೊಳ್ತಾವೆ. ಹೀಗೆ ಹುಟ್ಟುಕೊಳ್ಳುವ ಸುದ್ದಿಯ ಸತ್ಯಾಸತ್ಯತೆ ತಿಳಿದುಕೊಳ್ಳುವಷ್ಟರಲ್ಲಿ ಆ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ತಲುಪಿರುತ್ತೆ. ವೈರಲ್ ಆಗಿರುತ್ತೆ. ಇದ್ರಿಂದ ಆ ಸುದ್ದಿಯ ಕೇಂದ್ರಬಿಂದುವಾದ ವ್ಯಕ್ತಿಗೆ ಆಘಾತವಾಗುತ್ತೆ. ಕೆಲವೊಮ್ಮೆ ಆತ್ಮಸ್ಥೈರ್ಯ ಕೂಡ ಕುಗ್ಗಿ ಹೋಗಿ ಬಿಡುತ್ತೆ. ಆರೇಳು ವರ್ಷದ ಹಿಂದೆ ಭಾವನಾಗೆ ಇದೇ ಅನುಭವ ಆಗಿತ್ತು.

ಹೌದು.. ಭಾವನಾ ಮೆನನ್. ಮಲಯಾಳಂ ನ ಮನಮೋಹಕ ಬೆಡಗಿ. ಕನ್ನಡದ ನಿರ್ಮಾಪಕ ನವೀನ್ ಅವರ ಜೊತೆ ಆರು ವರ್ಷದ ಹಿಂದೆ ಸಪ್ತ ಪದಿ ತುಳಿಯುವ ಮೂಲಕ ಕರ್ನಾಟಕದ ಸೊಸೆಯಾದ ಭಾವನಾ ತಮ್ಮ ಬಗ್ಗೆ ಹಬ್ಬಿಸಲಾದ ಸುಳ್ಳು ಸುದ್ದಿಯೊಂದರ ಬಗ್ಗೆ ಮಾತನಾಡಿದ್ದಾರೆ. ಆ ಸುದ್ದಿಯಿಂದ ಆ ಪರಿಣಾಮದ ಬಗ್ಗೆಯೂ ಮಾತನಾಡಿದ್ದಾರೆ

South Indian Actress Bhavana Menon Responds to False Abortion Rumours

ಹೌದು, ಅಸಲಿಗೆ ಭಾವನಾ ಅಭಿನಯದ ಮಲಯಾಳಂ ಸಿನಿಮಾ ನಡಿಕರ್‌ ಈ ಶುಕ್ರವಾರ ತೆರೆಗೆ ಬರಲಿದೆ. ಹೀಗಾಗಿಯೇ ಚಿತ್ರದ ಪ್ರಚಾರಾರ್ಥ ಅನೇಕ ಸಂದರ್ಶನಗಳನ್ನ ನೀಡ್ತಿರುವ ಭಾವನಾ, ಸಂದರ್ಶನವೊಂದರಲ್ಲಿ ಗರ್ಭಪಾತದ ಬಗ್ಗೆ ಮಾತನಾಡಿದ್ದಾರೆ. ಮಲಯಾಳಂನ ಹೀರೋ ಅನೂಪ್ ಮೆನನ್ ಜೊತೆ ತನ್ನ ಹೆಸರನ್ನ ಥಳುಕು ಹಾಕಿ ಹೇಗೆಲ್ಲ ಮಜಾ ತಗೆದುಕೊಂಡರು ಎಂದು ಹೇಳಿದ್ದಾರೆ ಭಾವನಾ

ಸಂದರ್ಶನದಲ್ಲಿ ಮಾತನಾಡಿರುವ ಭಾವನಾ, ಮೊದಲಿಗೆ ನನ್ನ ಮತ್ತು ಅನೂಪ್‌ ಮೆನನ್‌ ಮದುವೆ ಆಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದರು. ಆ ನಂತರ ನನಗೆ ಗರ್ಭಪಾತವಾಯಿತು ಅಂದರು. ಅಮೆರಿಕಾದಲ್ಲಿ ಒಮ್ಮೆ..ಕೊಚ್ಚಿಯಲ್ಲಿ ಒಮ್ಮೆ.. ಚೆನ್ನೈ ನಲ್ಲಿ ಒಮ್ಮೆ.. ಹೀಗೆ ನಾಲ್ಕೈದು ಸಲ ನನಗೆ ಅಬಾರ್ಷನ್‌ ಆಗಿದೆ ಎಂದು ಪುಕಾರು ಹಬ್ಬಿಸಿದರು. ಕೊನೆ ಕೊನೆಗೆ ನನ್ನ ಸಾಯಿಸಿಯೇ ಬಿಟ್ಟರು ಎಂದಿದ್ದಾರೆ ಭಾವನಾ.

South Indian Actress Bhavana Menon Responds to False Abortion Rumours

ಆ ಕ್ಷಣಕ್ಕೆ ಈ ಸುದ್ದಿಯನ್ನೆಲ್ಲ ಕೇಳಿ..ಓದಿ..ನೋಡಿ.. ನಾನು ಮಾನಸಿಕ ಆಘಾತಕ್ಕೊಳಗಾಗಿದ್ದೆ ಎಂದಿರುವ ಭಾವನಾ, ಮುಖ ಎತ್ತಿಕೊಂಡು ಹೊರಗಡೆ ಹೋಗದಂತಹ ಸ್ಥಿತಿಯನ್ನ ಕೆಲವರು ಸೇರಿ ನಿರ್ಮಾಣ ಮಾಡಿ ಬಿಟ್ಟಿದ್ದರು ಎಂದಿದ್ದಾರೆ. ಆದರೆ ಈಗ ಆ ಸುದ್ದಿಗಳ ಬಗ್ಗೆ ಮಾತನಾಡಲು ನನ್ನಿಂದ ಆಗಲ್ಲ, ಆ ತರಹದ ಮಾತು ಕೇಳಿಸಿಕೊಳ್ಳಲು ಕೂಡ ಸಾಧ್ಯ ಇಲ್ಲ ಎಂದು ನಸು ನಕ್ಕಿದ್ದಾರೆ ಭಾವನಾ

ಅಂದ್ಹಾಗೇ 2002ರಿಂದ ಚಿತ್ರರಂಗದಲ್ಲಿರುವ ಭಾವನಾ, ಕನ್ನಡ ಚಿತ್ರರಂಗಕ್ಕೆ ಜಾಕಿ ಚಿತ್ರದ ಮೂಲಕ ಬಂದರು. ಇವತ್ತು ಕೂಡ ಕರುನಾಡಲ್ಲಿ ಇವರು ಜಾಕಿ ಭಾವನಾ ಎಂದೇ ಚಿರಪರಿಚಿತ. ಆ ನಂತರ ವಿಷ್ಣುವರ್ಧನ, ಟೋಪಿವಾಲಾ, ಬಚ್ಚನ್, ಯಾರೇ ಕೂಗಾಡಲಿ..ರೋಮಿಯೋ.. 99 ಚಿತ್ರದಲ್ಲಿ ನಟಿಸಿದ ಭಾವನಾ, ಗೋವಿಂದ ಗೋವಿಂದ.. ಇನ್ಸ್ ಫೆಕ್ಟರ್ ವಿಕ್ರಮ್ ಮತ್ತು ಭಜರಂಗಿ 02 ಚಿತ್ರದಲ್ಲಿಯೂ ಕಾಣಿಸಿಕೊಂಡರು. ಸದ್ಯಕ್ಕೆ ಉತ್ತರಕಾಂಡ ಚಿತ್ರಕ್ಕೂ ಭಾವನಾ ನಾಯಕಿಯಾಗಿದ್ದಾರೆ. ಈ ಮೂಲಕ ಶಿವಣ್ಣ ಜೊತೆ ಮತ್ತೊಮ್ಮೆ ತೆರೆಯನ್ನ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.

South Indian Actress Bhavana Menon Responds to False Abortion Rumours

ಒಟ್ನಲ್ಲಿ ಸಿನಿಮಾ ರಂಗದಲ್ಲಿ ಸತ್ಯಕ್ಕಿಂತ ಸುಳ್ಳಿಗೆ ಹೆಚ್ಚು ಬೆಲೆ ಇದೆ. ಹೀಗಾಗಿಯೇ ಸುಖಾ ಸುಮ್ಮನೆ ಹರಿಬಿಡಲಾಗುವ ಸುಳ್ಳು ಸುದ್ದಿಗಳನ್ನ ಅನೇಕರು ನಂಬ್ತಾರೆ. ಅನುಮಾನದ ದೃಷ್ಟಿಯಿಂದ ನೋಡ್ತಾರೆ ಅನ್ನುವುದಕ್ಕೆ ಭಾವನಾ ಅವರಿಗೆ ಆದ ಈ ಅನುಭವವೇ ಸಾಕ್ಷಿ

More from Filmibeat

English summary
During an Interview, Bhavana Menon, Popularly Known as Jackie Bhavana, Addresses False Abortion Rumors and Speculations About Her Death"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X