ದಕ್ಷಿಣ ಚಿತ್ರರಂಗದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ ಭಾರಿ ಬೇಡಿಕೆ

ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ ಸೌತ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ನಟಿಸುತ್ತಿದ್ದಾರೆ. ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು.

ರಜನಿಕಾಂತ್ ನಟಿಸಿದ್ದ ದರ್ಬಾರ್ ಚಿತ್ರದಲ್ಲಿ ಸುನೀಲ್ ಶೆಟ್ಟಿ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದೀಗ, ಮಲಯಾಳಂ ಇಂಡಸ್ಟ್ರಿಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಶೆಟ್ರು ಮೋಹನ್ ಲಾಲ್ ಅವರ ಹೊಸ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹೌದು, ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿರುವ ಐತಿಹಾಸಿಕ 'ಮರಕ್ಕರ್ ಚಿತ್ರದಲ್ಲಿ ಸುನೀಲ್ ಶೆಟ್ಟಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಇದೀಗ, ಈ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Suniel Shetty Look Release From Marakkar Movie

ಚಂದ್ರೋತ್ ಪ್ಯಾನಿಕರ್ ಆಗಿ ಬಣ್ಣ ಹಚ್ಚಿರುವ ಸುನೀಲ್ ಶೆಟ್ಟಿ ಅವರು ವಾರಿಯರ್ ಲುಕ್ ಈಗ ಗಮನ ಸೆಳೆಯುತ್ತಿದೆ. ಇತ್ತೀಚಿಗಷ್ಟೆ ಕೀರ್ತಿ ಸುರೇಶ್ ಅವರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು.

ಇದು ಐತಿಹಾಸಿಕ ಕಥೆಯಾಧರಿತ ಚಿತ್ರವಾಗಿದ್ದು, ಕುಂಜಲಿ ಮರಕ್ಕರ್-IV ಜೀವನದ ಸುತ್ತ ಸಿನಿಮಾ ಮಾಡಲಾಗಿದೆಯಂತೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಮರಕ್ಕರ್ ಚಿತ್ರ ಅಂತಿಮ ಹಂತದಲ್ಲಿದೆ. ಪ್ರಿಯಾದರ್ಶನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಅರ್ಜುನ್ ಸರ್ಜಾ, ಪ್ರಭು, ಮಂಜು ವಾರಿಯರ್, ಸುಹಾಸಿನಿ, ಪ್ರಣಾವ್ ಮೋಹನ್ ಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಆಶೀರ್ವಾದ ಸಿನಿಮಾಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕಿದೆ. ಎಲ್ಲ ಅಂದುಕೊಂಡಂತೆ ಆದರೆ ಈ ಹಿಂದೆಯೇ ಘೋಷಿಸಿರುವಂತೆ ಮಾರ್ಚ್ 26 ರಂದು ಮರಕ್ಕರ್ ಸಿನಿಮಾ ವರ್ಲ್ಡ್ ವೈಡ್ ತೆರೆಕಾಣಲಿದೆ.

More from Filmibeat

English summary
Bollywood actor Suniel Shetty first look release from Marakkar Movie. the film starring Malayalam superstar mohanlal in lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X