ಬೆಂಗಳೂರಿನ ಬ್ಯಾಂಕ್‌ವೊಂದರಲ್ಲಿ 7 ವರ್ಷ ಕೆಲಸ ಮಾಡಿದ್ದ ಈ ಚೆಲುವೆ ಇಂದು ಸ್ಟಾರ್ ನಟಿ..!

ಚಿತ್ರರಂಗ ಬಹುತೇಕರ ಆಕರ್ಷಣೆಯ ಕ್ಷೇತ್ರ. ಇಲ್ಲಿ ಹಲವಾರು ಜನ ಬೇರೆ ಯಾವ್ಯಾವುದೋ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಬೇರೆ ಬೇರೆ ವಿಭಾಗಗಳಲ್ಲಿಇಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಕೇವಲ ಸಿನಿಮಾವನ್ನೇ ಧ್ಯಾನ ಮಾಡುತ್ತಾ ಅನೇಕರು ತಮ್ಮದಲ್ಲದ ಕೆಲಸಕ್ಕೆ ಗುಡ್ ಬೈ ಹೇಳಿ ಇಲ್ಲಿ ಬಂದು ಗೆದ್ದ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.

ಉದಾಹರಣೆಗೆ ಮಿನರಲ್ ವಾಟರ್ ಸಪ್ಲೈ ಕೆಲಸ ಮಾಡುತ್ತಿದ್ದ ರಿಷಬ್ ಶೆಟ್ಟಿ ಇಂದು ಕೇವಲ ಕನ್ನಡದ ಸ್ಟಾರ್ ಮಾತ್ರವಲ್ಲ ಬದಲಿಗೆ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಟಾಯ್ಲೆಟ್ ಸಾಮಗ್ರಿಗಳ ವ್ಯಾಪಾರ ಮಾಡ್ತಿದ್ದ ವಿಜಯ್ ಸೇತುಪತಿ ಇವತ್ತು ಭಾರತದ ಅತ್ಯುತ್ತಮ ಕಲಾವಿದ ಎಂದು ಅನ್ನಿಸಿಕೊಂಡಿದ್ದಾರೆ. ಛಲ, ಶ್ರದ್ದೆ ಮತ್ತು ನಿರಂತರ ಪರಿಶ್ರಮದಿಂದ ಲೈಟ್ ಬಾಯ್ ಆಗಿದ್ದ ದರ್ಶನ್ ಇವತ್ತು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದಾರೆ. ಇದಕ್ಕೆ ತನ್ವಿ ರಾಮ್ ಮತ್ತೊಂದು ಉದಾಹರಣೆ.

Tanvi Ram Worked as a Bank Employee in Bengaluru Before Rising to Fame in Malayalam Cinema

ಹೌದು, ತನ್ವಿ ರಾಮ್.. ಮೂಲ ಹೆಸರು ಶ್ರುತಿ ರಾಮ್. ಮಲಯಾಳಂನ ಚೆಲುವೆ. 2019ರಲ್ಲಿ ಮಲಯಾಳಂನ ಅಂಬಿಲಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ತನ್ವಿ ಆ ನಂತರ ಅಂತೆ ಸುಂದರಾನಿ ಚಿತ್ರದ ಮೂಲಕ ತೆಲುಗು ಚಿತ್ರರಂಗವನ್ನು ಕೂಡ ಪ್ರವೇಶಿಸಿದರು. ನ್ಯಾಚುರಲ್ ಸ್ಟಾರ್ ನಾನಿ ಜೊತೆ ತೆರೆ ಹಂಚಿಕೊಂಡರು.

ಆ ನಂತರ ಸ್ಟಾರ್ ನಟಿಯಾಗಿ ಕೂಡ ತನ್ವಿ ಹೊರ ಹೊಮ್ಮಿದರು. ಇದಕ್ಕೆ ಕೈಗನ್ನಡಿ ಎನ್ನುವಂತೆ 2022ರಲ್ಲಿ ಕೇವಲ ಒಂದೇ ವರ್ಷದಲ್ಲಿ ಇವರ ನಾಲ್ಕು ಮಲಯಾಳಂ ಚಿತ್ರಗಳು ಬಿಡುಗಡೆಯಾದವು. ಆ ಪೈಕಿ ಒಂದು ಚಿತ್ರಕ್ಕೆ ಮೋಹನ್ ಲಾಲ್ ನಾಯಕನಾದರೆ ಮತ್ತೊಂದು ಚಿತ್ರಕ್ಕೆ ಟೋವಿನೋ ಥಾಮಸ್ ನಾಯಕ.

ಇನ್ನು ತನ್ವಿ ರಾಮ್ ಅಭಿನಯದ ಚಿತ್ರಗಳು ಸಲೀಸಾಗಿ 100 ಕೋಟಿಯನ್ನು ಗಳಿಸುತ್ತವೆ ಎನ್ನುವ ನಂಬಿಕೆ ಮಲಯಾಳಂ ಚಿತ್ರರಂಗದ್ದು. ಹೀಗಾಗಿಯೇ ಇವರನ್ನು ಲಕ್ಕಿ ನಾಯಕಿ ಎಂದೇ ಅನೇಕರು ಅಂದುಕೊಂಡಿದ್ದಾರೆ. ಕರೆಯುತ್ತಾರೆ.

ಇಂಥಾ ತನ್ವಿ ರಾಮ್ ಚಿತ್ರರಂಗಕ್ಕೆ ಬರುವ ಮುನ್ನ ಬೆಂಗಳೂರಿನಲ್ಲಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.

ಹೌದು, ಸುಮಾರು 7 ವರ್ಷಗಳ ಕಾಲ ತನ್ವಿ ರಾಮ್ ಬೆಂಗಳೂರಿನ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ತನ್ವಿ ರಾಮ್‌ಗೆ ಮೊದಲಿಂದ ಚಿತ್ರರಂಗದತ್ತ ಸೆಳೆತ ಇತ್ತು. ನಾಯಕಿಯಾಗಬೇಕೆಂಬ ಹಂಬಲ ಇತ್ತು.

ಇನ್ನು ತನ್ವಿ ರಾಮ್ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಮುನ್ನ 2012 ರ ಮಿಸ್ ಕೇರಳ ಫೈನಲಿಸ್ಟ್ ಆಗಿದ್ದರು. ಹೀಗಾಗಿ ಬಣ್ಣದ ಮೇಲಿನ ವ್ಯಾಮೋಹದಿಂದ ಕೆಲಸಕ್ಕೆ ಗುಡ್ ಬೈ ಹೇಳಿದ ತನ್ವಿ ರಾಮ್ ಆ ನಂತರ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು.

ಸದ್ಯ ತನ್ವಿ ರಾಮ್ ಅವರಿಗೆ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ತೆಲುಗಿನಲ್ಲಿಯೂ ಕಳೆದ ವರ್ಷ ಕಿರಣ್ ಅಬ್ಬಾವರಾಮ್ ಜೊತೆ ಕೆಎ ಎಂಬ ಚಿತ್ರವನ್ನು ಕೂಡ ತನ್ವಿ ಮಾಡಿದ್ದಾರೆ. ತನ್ವಿ ಅಭಿನಯದ ಮಲಯಾಳಂ ಚಿತ್ರ ಅಭಿಲಾಶಮ್ ಇತ್ತೀಚೆಗಷ್ಟೇ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಟ್ರೆಂಡಿಂಗ್‌ನಲ್ಲಿ ಕೂಡ ಇದೆ.

ಹೀಗೆ ಒಂದು ಕಾಲದಲ್ಲಿ ಬೆಂಗಳೂರಿನ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡಿದ್ದ ತನ್ವಿ ರಾಮ್, ಕಳೆದ ಆರು ವರ್ಷಗಳಲ್ಲಿ ಒಂದು ಡಜನ್‌ಗೂ ಅಧಿಕ ಚಿತ್ರಗಳನ್ನು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ತನ್ವಿ ರಾಮ್ ಅವರನ್ನು 490,121 ಜನ ಫಾಲೋ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ತನ್ವಿ ಬಾಲಿವುಡ್‌ನತ್ತ ಮುಖ ಮಾಡಿದರು ಕೂಡ ಅಚ್ಚರಿ ಇಲ್ಲ.

More from Filmibeat

English summary
Tanvi Ram, now a well-known actress in Malayalam cinema, began her career far from the spotlight—working as a bank employee in Bengaluru. Her journey from the corporate sector to the film industry is both surprising and inspiring.
Read more about: actress mollywood life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X