For Quick Alerts
  ALLOW NOTIFICATIONS  
  For Daily Alerts

  ತೆಲುಗು ನಿರ್ದೇಶಕ ನಂದ್ಯಾಲ ರವಿ, ಮಲಯಾಳಂ ನಟ ಪಿಸಿ ಚಾರ್ಜ್ ನಿಧನ

  |

  'ಲಕ್ಷ್ಮಿ ರಾವೇ ಮಾ ಇಂಟಿಕಿ' ಚಿತ್ರದ ನಿರ್ದೇಶಕ ನಂದ್ಯಾಲ ರವಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ನಂದ್ಯಾಲ ರವಿ ಕೊನೆಯುಸಿಳೆದರು ಎಂದು ವರದಿಯಾಗಿದೆ.

  ಅನಾರೋಗ್ಯ ಕಾರಣದಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಂದ್ಯಾಲ ರವಿ ಕುಟುಂಬ ಆರ್ಥಿಕವಾಗಿ ಸಹಾಯಕ್ಕೆ ಕೇಳಿತ್ತು. ನಟ ಸಪ್ತಗಿರಿ ಅವರು ಒಂದು ಲಕ್ಷ ರೂಪಾಯಿ ನೆರವು ನೀಡಿದ್ದರು. ಆದ್ರೆ, ಚಿಕಿತ್ಸೆಗೆ ಸ್ಪಂದಿಸದೆ ರವಿ ಮೃತಪಟ್ಟಿದ್ದಾರೆ.

  2014ರಲ್ಲಿ ನಾಗಶೌರ್ಯ ನಟಿಸಿದ್ದ 'ಲಕ್ಷ್ಮಿ ರಾವೇ ಮಾ ಇಂಟಿಕಿ' ಚಿತ್ರವನ್ನು ನಂದ್ಯಾಲ ರವಿ ನಿರ್ದೇಶಿಸಿದ್ದರು. ನಿರ್ದೇಶಕರ ಸಾವಿಗೆ ನಟ ನಾಗಶೌರ್ಯ ಸಂತಾಪ ಸೂಚಿಸಿದ್ದಾರೆ. ಬಹಳ ವರ್ಷದ ನಂತರ 2020ರಲ್ಲಿ 'ವರೇ ಬುಜ್ಜಿಗಾ' ಚಿತ್ರಕ್ಕೆ ಬರಹಗಾರರಾಗಿ ಕೆಲಸ ಮಾಡಿದ್ದರು. ರಾಜ್ ತರಣ್ ನಟನೆಯ 'ಪವರ್ ಪ್ಲೇ' ಚಿತ್ರದಲ್ಲೂ ನಂದ್ಯಾಲ ರವಿ ಬರಹಗಾರನಾಗಿದ್ದರು.

  ಮಲಯಾಳಂ ನಟ ಪಿಸಿ ಜಾರ್ಜ್ ನಿಧನ

  ಮಾಲಿವುಡ್ ಇಂಡಸ್ಟ್ರಿಯ ಖ್ಯಾತ ಪೋಷಕ ಕಲಾವಿದ ಪಿಸಿ ಜಾರ್ಜ್ ಅವರು ಸಹ ಸಾವನ್ನಪ್ಪಿದ್ದಾರೆ. ವಿಲನ್ ಪಾತ್ರಗಳಿಂದಲೇ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದ ಜಾರ್ಜ್ ಶುಕ್ರವಾರ ಕೊಚ್ಚಿನ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ವರದಿಯಾಗಿದೆ.

  74 ವರ್ಷದ ಜಾರ್ಜ್ ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮುಂಚೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದರು. 1976ರಲ್ಲಿ 'ಅಂಬಾ ಅಂಬಿಕಾ ಅಂಬಾಲಿಕ' ಚಿತ್ರದ ಮೂಲಕ ಪಿಸಿ ಜಾರ್ಜ್ ನಟನೆ ಆರಂಭಿಸಿದರು. ಸುಮಾರು 75ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

  ಪ್ರಪಂಚದ ಶ್ರೀಮಂತ ಮಹಿಳೆಯನ್ನು ಪರಿಚಯಿಸಿದ ಸೋನು ಸೂದ್ | Filmibeat Kannada

  ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಪಿಸಿ ಜಾರ್ಜ್ ಕೊಚ್ಚಿನ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸದ್ಯದ ಮಾಹಿತಿ ಪ್ರಕಾರ ಶನಿವಾರ ಜಾರ್ಜ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

  English summary
  Telugu film Writer and Director Nandyala Ravi dies of Covid19. and popular Malayalam actor PCGeorge passed away today in Thrissur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X