ಕಣ್ಸನ್ನೆ ಐಡಿಯಾ ನನ್ನದು ಎಂದ ಪ್ರಿಯಾ: ಹುಚ್ಚು ಹುಡ್ಗಿಗೆ ಈ ತೈಲ ಕೊಡ್ರಪ್ಪ ಎಂದು ನಿರ್ದೇಶಕ ಟಾಂಗ್

5 ವರ್ಷಗಳ ಹಿಂದೆ ಮಾಲಿವುಡ್ ನಟಿ ಪ್ರಿಯಾ ವಾರಿಯರ್ ಸಣ್ಣ ವಿಡಿಯೋ ಝಲಕ್‌ನಿಂದ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಆ ಸಿನಿಮಾ ಸೋತ್ರು ಇಂದಿಗೂ ಆಕೆಯ ಕ್ರೇಜ್ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಜನ ಇನ್ನು ಈ ಕೇರಳ ಕುಟ್ಟಿಯನ್ನು ಮರೆತ್ತಿಲ್ಲ. ಆ ನಂತರ ಹಲವು ಸಿನಿಮಾಗಳಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದರೂ ಪ್ರಯೋಜನವಾಗಲಿಲ್ಲ.

ಒಮರ್ ಲುಲು ನಿರ್ದೇಶದ ಟೀನೇಜ್ ಲವ್‌ಸ್ಟೋರಿ ಸಿನಿಮಾ 'ಒರು ಆಡಾರ್ ಲವ್'. ಈ ಸಿನಿಮಾ ತೆಲುಗು ಹಾಗೂ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. 'ಮಾಣಿಕ್ಯ ಮಲರಾಯ ಪೂವಿ' ಸಾಂಗ್ ಸಿನಿಮಾ ರಿಲೀಸ್‌ಗೂ ಮೊದ್ಲೆ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅದಕ್ಕೆ ಕಾರಣ ನಟಿ ಪ್ರಿಯಾ ಪ್ರಕಾಶ್ ಕಣ್ಸನ್ನೆ. ಚಿತ್ರದಲ್ಲಿ ಹೈಯರ್ ಸೆಕೆಂಡರಿ ಸ್ಕೂಲ್ ಮಕ್ಕಳ ಸ್ನೇಹ, ಪ್ರೀತಿ, ಪ್ರಣಯದ ಕಥೆಯನ್ನು ಹೇಳಲಾಗಿತ್ತು. ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲಿಲ್ಲ.

That viral wink was my idea, says Priya Prakash Varrier: Director Omar Lulu hits back

ರೋಷನ್ ಹಾಗೂ ಪ್ರಿಯಾ ನಡುವಿನ ಸನ್ನಿವೇಶಗಳನ್ನು ಸೇರಿಸಿ 'ಮಾಣಿಕ್ಯ ಮಲರಾಯ ಪೂವಿ' ಮಾಂಟೇಜ್ ಸಾಂಗ್ ಕಟ್ಟಿಕೊಡಲಾಗಿತ್ತು. ಹಾಡಿನಲ್ಲಿ ಇಬ್ಬರು ಕಣ್ಣಲ್ಲೇ ಪ್ರೇಮಗೀತೆ ಹಾಡುವುದನ್ನು ತೋರಿಸಲಾಗಿತ್ತು. ಅದರ ಭಾಗವಾಗಿ ರೋಷನ್ ಕಡೆ ತಿರುಇ ಪ್ರಿಯಾ ವಾರ ನೋಟ ಬೀರಿ ಕಣ್ಣು ಮಿಟುಕಿಸುವ ಪರಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ನೋಡ ನೋಡುತ್ತಲೇ ಸಣ್ಣ ವಿಡಿಯೋ ವೈರಲ್ ಆಗಿತ್ತು. ಸಾಕಷ್ಟು ಮೀಮ್ಸ್ ಕ್ರಿಯೇಟ್ ಆಗಿ ಪ್ರಿಯಾ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟರು.

ಆ ಐಡಿಯಾ ನಂದು ಎಂದ ಪ್ರಿಯಾ

2019ರಲ್ಲಿ ಬಿಡುಗಡೆಯಾಗಿದ್ದ 'ಒರು ಆಡಾರ್ ಲವ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೂ ಕೂಡ ಪ್ರಿಯಾಗೆ ಸಾಕಷ್ಟಿ ಅವಕಾಶಗಳು ಅರಸಿ ಬಂತು. ಆದರೂ ಯಾವ ಸಿನಿಮಾ ಕೂಡ ಗೆಲ್ಲಲಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವು ಚೆಲುವೆ ಹಾಟ್ ಹಾಟ್ ಫೋಟೊ, ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾ, 'ಒರು ಆಡಾರ್ ಲವ್' ಚಿತ್ರದಲ್ಲಿ ಕಣ್ಸನ್ನೆ ಮಾಡುವ ದೃಶ್ಯದ ಐಡಿಯಾ ಕೊಟ್ಟಿದ್ದು ನಾನೇ ಎಂದು ಹೇಳಿದ್ದಾರೆ.

ಒಮರ್ ಲುಲು ತಿರುಗೇಟು

ಪ್ರಿಯಾ ಪ್ರಕಾಶ್ ವಾರಿಯರ್ ಕಾಮೆಂಟ್ ಬಗ್ಗೆ ಚಿತ್ರದ ನಿರ್ದೇಶಕ ಒಮರ್ ಲುಲು ಬೇಸರಗೊಂಡಿದ್ದಾರೆ. ಆಕೆ ಹೇಳುತ್ತಿರುವುದು ಸುಳ್ಳು ಎಂದು ಪರೋಕ್ಷವಾಗಿ ಟಾಂಗ ಕೊಟ್ಟಿದ್ದಾರೆ. ಆ ಐಡಿಯಾ ಆಕೆಯದ್ದಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಸಿನಿಮಾ ಪ್ರಮೋಷನ್ ವೇಳೆ ಸ್ವತಃ ಆಕೆಯೇ ಕೊಟ್ಟಿರುವ ಮತ್ತೊಂದು ಹೇಳಿಕೆಯ ವಿಡಿಯೀ ತುಣಕು ಕಟ್ ಮಾಡಿ ಸೇರಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆದರೆ ಈ ಹಿಂದಿನ ಸಂದರ್ಶನದಲ್ಲಿ ಆಕೆ ಈ ಐಡಿಯಾ ನಟ ರೋಷನ್‌ದ್ದು, ನಂತರ ಎಲ್ಲಾ ಹೇಳಿದ ಮೇಲೆ ಮಾಡಿದ್ದು ಎನ್ನುವಂತೆ ಮಾತನಾಡಿದ್ದಾರೆ.

That viral wink was my idea, says Priya Prakash Varrier: Director Omar Lulu hits back

ಹುಡ್ಗಿಗೆ ಈ ತೈಲ ಕೊಡ್ರಪ್ಪ

ಪ್ರಿಯಾ ಈಗ ಮಾತನಾಡಿರುವುದು ಮತ್ತು ಈ ಹಿಂದೆ ಮಾತನಾಡಿರುವ ಎರಡು ವಿಡಿಯೋಗಳನ್ನು ಕೊಲಾಜ್ ಮಾಡಿ ಪೋಸ್ಟ್ ಮಾಡಿರುವ ನಿರ್ದೇಶಕರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. "ಹುಚ್ಚು ಹುಡುಗಿಗೆ 5 ವರ್ಷದ ಹಿಂದೆ ಏನಾಗಿತ್ತು ಎಂದು ಮರೆತು ಹೋದಂತಿದೆ, ಈ ತೈಲ ಕೊಟ್ಟರೆ ನೆನಪಿನ ಶಕ್ತಿ ವೃದ್ಧಿಸುತ್ತದೆ" ಎಂದು ಪರೋಕ್ಷವಾಗಿ ಅಸಮಾಧಾವ ವ್ಯಕ್ತಪಡಿಸಿದ್ದಾರೆ. ಸದ್ಯ ಒಮರ್ ಲುಲು ಇನ್‌ಸ್ಟಾ ಪೋಸ್ಟ್ ಈಗ ಸಖತ್ ವೈರಲ್ ಆಗ್ತಿದೆ.

'ವಿಷ್ಣುಪ್ರಿಯ' ಚಿತ್ರದಲ್ಲಿ ನಟನೆ

ಪ್ರಿಯಾ ನಟಿಸಿದ ಯಾವುದೇ ಸಿನಿಮಾ ಹಿಟ್ ಆಗದಿದ್ದರೂ ಸಾಲು ಸಾಲು ಅವಕಾಶಗಳು ಸಿಗುತ್ತಿವೆ. ಈಗಾಗಲೇ ಬಾಲಿವುಡ್ ಅಂಗಳಕ್ಕೂ ಚೆಲುವೆ ಎಂಟ್ರಿ ಕೊಟ್ಟಾಗಿದೆ. 'ತ್ರೀ ಮಂಕೀಸ್', 'ಯಾರಿಯಾನ್- 2', 'ಲವ್ ಹ್ಯಾಕರ್ಸ್', 'ಶ್ರೀದೇವಿ ಬಂಗ್ಲೋ' ಹಿಂದಿ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಕನ್ನಡದಲ್ಲಿ ಕಣ್ಸನ್ನೆ ಹುಡುಗಿಯ 'ವಿಷ್ಣುಪ್ರಿಯ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೆ. ಮಂಜು ಪುತ್ರ ಶ್ರೇಯಸ್ ಜೋಡಿಯಾಗಿ ಈ ಚಿತ್ರದಲ್ಲಿ ಪ್ರಿಯಾ ಮಿಂಚಿದ್ದಾರೆ.

More from Filmibeat

English summary
That viral wink was my idea, says Priya Prakash Varrier: Director Omar Lulu hits back. she became an overnight sensation in 2019 after her wink in the 'Oru Aadar Love' film song. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X