ವಿಚ್ಚೇದನ,ಖಿನ್ನತೆ?ಕಾಸರಗೋಡಿನ ಇನ್‌ಫ್ಲುಯೆನ್ಸರ್ ಚಿನ್ನು ಪಾಪು ಸಾವಿನ ಬೆನ್ನಲ್ಲೇ ಆ*ತ್ಮಹತ್ಯೆಗೆ ಶರಣಾದ ಆಪ್ತ ಸ್ನೇಹಿತ
ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ.
ಇದೆಲ್ಲದರ ಪರಿಣಾಮ ಎಂಬಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ''ಮಾನಸಿಕ ಖಿನ್ನತೆ''ಗೆ ಮೊದಲ ಸ್ಥಾನ ಇದೆ. ಇನ್ನು ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ. ಹೀಗೆ ಖಿನ್ನತೆಗೊಳಗಾದವರು ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ.

ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ಕೊನೆಗೆ ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಚಿನ್ನು ಪಾಪು.
ಹೌದು, ಚಿನ್ನು ಪಾಪು.. 24 ವರ್ಷದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್. ಇವರ ನಿಜವಾದ ಹೆಸರು ಕೆ. ರೇಷ್ಮಾ. ಇನ್‌ಸ್ಟಾಗ್ರಾಂನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ರೇಷ್ಮಾ ಕಾಸರಗೋಡಿನಲ್ಲಿ ಚಿನ್ನು ಪಾಪು ಎಂದೇ ಮನೆ ಮಾತಾಗಿದ್ದರು. ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ವಿಡಿಯೋಗಳನ್ನು ಮಾಡಿ ಜನ ಮನ ಗೆದ್ದಿದ್ದರು.
ಇಂಥಾ ಚಿನ್ನು ಪಾಪು ಕಳೆದ ವಾರ ತಮ್ಮ ಉಳಿಯತ್ತಡ್ಕದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಈ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿತ್ತು.
ಯಾಕೆಂದರೆ ಗಂಗಾಧರನ್ ಮತ್ತು ಶೈಲಜಾ ಅವರ ಪುತ್ರಿಯಾದ 24 ವರ್ಷದ ರೇಶ್ಮಾ ಅಲಿಯಾಸ್ ಚಿನ್ನು ಪಾಪು ಅವರಿಗೆ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಲಾಗಿತ್ತು. ಮದುವೆಯ ನಂತರ ದಾಂಪತ್ಯದಲ್ಲಿ ಬಿರುಕು ಕೂಡ ಮೂಡಿತ್ತು.

ಇನ್ನೂ ಸಾಯುವ ಒಂದು ತಿಂಗಳ ಮುನ್ನವಷ್ಟೇ ಚಿನ್ನು ಪಾಪು ತಮ್ಮ ಪತಿಯಿಂದ ದೂರವಾಗಿದ್ದರು. ವಿಚ್ಚೇದನ ಪಡೆದಿದ್ದರು. ತಮ್ಮ 4 ವರ್ಷದ ಮಗನ ಜೊತೆ ವಾಸ ಮಾಡುತ್ತಿದ್ದರು. ಆ*ತ್ಮಹತ್ಯೆಗೆ ಶರಣಾಗುವ ದಿನ ತಮ್ಮ ಮಗನನ್ನು ತಮ್ಮ ಪೋಷಕರಿಗೆ ಒಪ್ಪಿಸಿ ಲಾಲನೆ ಪಾಲನೆಯ ಜವಾಬ್ಧಾರಿ ವಹಿಸಿದ್ದರು.
ಚಿನ್ನು ಪಾಪು ಅವರ ಈ ಸಾವಿನ ರಹಸ್ಯ ಇನ್ನೂ ಬಗೆಹರಿದಿಲ್ಲ. ಅಷ್ಟರಲ್ಲೇ ಇದೀಗ ಚಿನ್ನು ಪಾಪು ಅವರ ಆಪ್ತ ಸ್ನೇಹಿತನಾಗಿದ್ದ ಸಂದೇಶ್ ಕೆ. ಕೂಡ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಸರಗೋಡಿನ ಮನ್ನಿಪಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಂದೇಶ್ ಪತ್ತೆಯಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟರಲ್ಲಿ ಸಂದೇಶ್ ಕೊನೆಯುಸಿರೆಳೆದಿದ್ದರು ಎಂದು ಮಾಧ್ಯಮಗಳಲ್ಲಿ ಸದ್ಯ ವರದಿಯಾಗಿದೆ.
ಇನ್ನು ಚಿನ್ನು ಪಾಪು ಎಂದೇ ಖ್ಯಾತರಾಗಿದ್ದ ರೇಷ್ಮಾ ಕೆ ಅವರ ನಿಧನದ ನಂತರ ಪೊಲೀಸರು ತನಿಖೆಯ ಭಾಗವಾಗಿ ಸಂದೇಶ್ ಅವರ ವಿಚಾರಣೆಯನ್ನು ಮಾಡಿದ್ದರು, ಆ ನಂತರ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು ಎಂದು ಕೂಡ ಮಾಧ್ಯಮಗಳಲ್ಲಿ ವರದಿಯಾಗಿದ್ದು ಇದೆಲ್ಲದರಿಂದ ಸಂದೇಶ್ ಮಾನಸಿಕವಾಗಿ ತೀವೃವಾಗಿ ನೊಂದುಕೊಂಡಿದ್ದರು ಎಂದು ಕೂಡ ಹೇಳಲಾಗುತ್ತಿದೆ. ರವಿವಾರ (ಫೆಬ್ರವರಿ 15 ) ಮಧ್ಯಾಹ್ನ ಈ ಘಟನೆ ನಡೆದಿದ್ದು ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ. ಚಿನ್ನು ಪಾಪು ಮತ್ತು ಸಂದೇಶ್ ನಡುವೆ ಏನಾದರೂ ಸಂಬಂಧ ಇತ್ತಾ ಎಂದು ಕೂಡ ಪೊಲೀಸರು ತನಿಖೆಯನ್ನು ಮಾಡುತ್ತಿದ್ದಾರೆ.


Click it and Unblock the Notifications











