For Quick Alerts
  ALLOW NOTIFICATIONS  
  For Daily Alerts

  ಜೂ ಎನ್‌ಟಿಆರ್ 30ನೇ ಚಿತ್ರ: ಯಂಗ್ ಟೈಗರ್ ಜೊತೆ ಸೂಪರ್ ಸ್ಟಾರ್?

  |

  ರಾಜಮೌಳಿ ನಿರ್ದೇಶನದ ಆರ್‌ ಆರ್‌ ಆರ್ ಚಿತ್ರಕ್ಕಾಗಿ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಕಾಯ್ತಿದ್ದಾರೆ. ಮೆಗಾ ಸಿನಿಮಾದಲ್ಲಿ ಸ್ವಾತಂತ್ರ್ಯ ವೀರನ ಪಾತ್ರದಲ್ಲಿ ಯಂಗ್ ಟೈಗರ್ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಆರ್‌ಆರ್‌ಆರ್ ಅಕ್ಟೋಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

  ಈ ನಡುವೆ ಎನ್‌ಟಿಆರ್ ಎರಡು ಹೊಸ ಪ್ರಾಜೆಕ್ಟ್‌ ಆರಂಭಿಸಿದ್ದಾರೆ. ತನ್ನ ನೆಚ್ಚಿನ ನಿರ್ದೇಶಕ ಕೊರಟಲಾ ಶಿವ ಜೊತೆ 30ನೇ ಚಿತ್ರ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ 31ನೇ ಚಿತ್ರಕ್ಕೆ ಓಕೆ ಎಂದಿದ್ದಾರೆ. ಕೊರಟಲಾ ಶಿವ ಜೊತೆಗಿನ ಸಿನಿಮಾ ಸದ್ಯದಲ್ಲೇ ಚಿತ್ರೀಕರಣ ಸಹ ಆರಂಭಿಸಲಿದೆ. ಇದೀಗ, ಈ ಪ್ರಾಜೆಕ್ಟ್ ಕುರಿತು ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಇದು ನಿಜವೇ ಆದರೆ ಟಾಲಿವುಡ್ ಬಾಕ್ಸ್ ಆಫೀಸ್‌ ಚಿಂದಿ ಎನ್ನಲಾಗುತ್ತಿದೆ. ಮುಂದೆ ಓದಿ....

  ಎನ್‌ಟಿಆರ್ ಮುಂದಿನ ಸಿನಿಮಾದಲ್ಲಿ ಬಾಲಿವುಡ್ ನಟಿ ನಾಯಕಿ?ಎನ್‌ಟಿಆರ್ ಮುಂದಿನ ಸಿನಿಮಾದಲ್ಲಿ ಬಾಲಿವುಡ್ ನಟಿ ನಾಯಕಿ?

  ಎನ್‌ಟಿಆರ್ ಜೊತೆ ಸೂಪರ್ ಸ್ಟಾರ್?

  ಎನ್‌ಟಿಆರ್ ಜೊತೆ ಸೂಪರ್ ಸ್ಟಾರ್?

  ಎನ್‌ಟಿಆರ್ ಮತ್ತು ಕೊರಟಲಾ ಶಿವ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಈಗಾಗಲೇ ಮುಮ್ಮುಟ್ಟಿ ಅವರನ್ನು ಈ ಕುರಿತು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.

  ವಿಲನ್ ಪಾತ್ರಕ್ಕೆ ಮಮ್ಮುಟ್ಟಿ?

  ವಿಲನ್ ಪಾತ್ರಕ್ಕೆ ಮಮ್ಮುಟ್ಟಿ?

  ಯಂಗ್ ಟೈಗರ್ ಎದುರು ಖಳನಾಯಕನ ಪಾತ್ರಕ್ಕೆ ಮಮ್ಮುಟ್ಟಿ ಸೂಕ್ತ ಎಂದು ಚಿತ್ರತಂಡ ಈ ತೀರ್ಮಾನಕ್ಕೆ ಬಂದಿದೆ. ಈ ಯೋಜನೆ ವರ್ಕೌಟ್ ಆಗುತ್ತಾ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಏಕಂದ್ರೆ, ಮಮ್ಮುಟ್ಟಿ ಕಡೆಯಿಂದ ಇದುವರೆಗೂ ಒಪ್ಪಿಗೆ ಸಿಕ್ಕಿಲ್ಲ.

  'ಜನತಾ ಗ್ಯಾರೇಜ್'‌ನಲ್ಲಿ ಮೋಹನ್ ಲಾಲ್

  'ಜನತಾ ಗ್ಯಾರೇಜ್'‌ನಲ್ಲಿ ಮೋಹನ್ ಲಾಲ್

  ಈ ಹಿಂದೆ ಜೂನಿಯರ್ ಎನ್‌ಟಿಆರ್ ಮತ್ತು ಕೊರಟಾಲ ಶಿವ ಜೋಡಿಯಲ್ಲಿ ಬಂದಿದ್ದ 'ಜನತಾ ಗ್ಯಾರೇಜ್' ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದರು. ಕೊರಟಲಾ ಶಿವ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿ ಚಿತ್ರದಲ್ಲೂ ತೆಲುಗು ಇಂಡಸ್ಟ್ರಿ ಬಿಟ್ಟು ಬೇರೆ ಇಂಡಸ್ಟ್ರಿಯಿಂದ ಓರ್ವ ಖ್ಯಾತ ನಟನನ್ನು ಕರೆಂದಿದ್ದಾರೆ. ಪ್ರಭಾಸ್ ನಟನೆಯ 'ಮಿರ್ಚಿ' ಚಿತ್ರದಲ್ಲಿ ಸತ್ಯರಾಜ್, ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು' ಚಿತ್ರದಲ್ಲಿ ಶರತ್ ಕುಮಾರ್ ನಟಿಸಿದ್ದರು.

  ಕಿರಣ್ ರಾಜ್ ಮನವಿಯನ್ನು ಸ್ವೀಕರಿಸುತ್ತಾರಾ ಸಿಎಂ ಯಡಿಯೂರಪ್ಪ ?? | Filmibeat Kannada
  ಕಿಯಾರಾ ಅಡ್ವಾಣಿ ನಾಯಕಿ?

  ಕಿಯಾರಾ ಅಡ್ವಾಣಿ ನಾಯಕಿ?

  ಎನ್‌ಟಿಆರ್‌ಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಚಾಲ್ತಿಯಲ್ಲಿದೆ. ಸದ್ಯಕ್ಕೆ ಇದು ಅಧಿಕೃತವಾಗಿಲ್ಲ. ಇನ್ನುಳಿದಂತೆ ನಂದಮೂರಿ ಕಲ್ಯಾಣ್ ರಾಮ್ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಸುಧಾಕಕರ್ ಮಿಕ್ಕಿಲಿನೇನಿ ನಿರ್ಮಾಣ ಮಾಡುತ್ತಿದ್ದಾರೆ. ಆ ಕಡೆ ಚಿರಂಜೀವಿ ಜೊತೆ 'ಆಚಾರ್ಯ' ಸಿನಿಮಾ ಮಾಡುತ್ತಿರುವ ಕೊರಟಲಾ ಶಿವ ಅದನ್ನು ಮುಗಿಸಿ ಈ ಪ್ರಾಜೆಕ್ಟ್ ಟೇಕ್ ಆನ್ ಮಾಡಬೇಕಿದೆ.

  English summary
  Latest buzz in hollywood, malayalam superstar mammootty will act with Jr Ntr in 30th movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X