ಯಶ್‌ 'ಟಾಕ್ಸಿಕ್' ಚಿತ್ರದ ಜೋಕರ್ ಆಗಿ ಆ ಮಲಯಾಳಂ ನಟ: ಇನ್‌ಸ್ಟಾ ಸ್ಟೋರಿಯಿಂದ ಸೀಕ್ರೆಟ್ ರಿವೀಲ್!

ಬರೀ ಟೈಟಲ್ ಅನೌನ್ಸ್‌ಮೆಂಟ್ ಟೀಸರ್‌ನಿಂದಲೇ ಯಶ್‌19 ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಾಕಿಂಗ್ ಸ್ಟಾರ್ ಮುಂದಿನ ಚಿತ್ರಕ್ಕೆ 'ಟಾಕ್ಸಿಕ್' ಎನ್ನುವ ಟೈಟಲ್ ಕನ್ಫರ್ಮ್ ಆಗಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಕೆವಿಎನ್ ಪ್ರೊಡಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗ್ತಿದೆ.

'ಟಾಕ್ಸಿಕ್' ಚಿತ್ರದಲ್ಲಿ ಯಶ್ ಪಾತ್ರ ಏನು? ಕಥೆ ಏನು? ಎನ್ನುವ ಚರ್ಚೆ ನಡೀಯಿದೆ. ಇದೆಲ್ಲರ ನಡುವೆ ಚಿತ್ರದಲ್ಲಿ ಬೇರೆ ಯಾರೆಲ್ಲಾ ನಟಿಸುತ್ತಾರೆ? ಎನ್ನುವ ಬಗ್ಗೆಯೂ ಅಂತೆ ಕಂತೆ ಸುದ್ದಿ ಹರಿದಾಡುತ್ತಿದೆ. ಸಾಯಿ ಪಲ್ಲವಿ, ಮೃಣಾಲ್ ಠಾಕೂರ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು. ಇನ್ನು ಚಿತ್ರದಲ್ಲಿ ಮೂವರು ನಟಿಯರು ಲೀಡ್ ರೋಲ್‌ಗಳಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ.

This Actor Is Playing A Key Role In Yash Starrer Toxic

ಇದೆಲ್ಲದರ ನಡುವೆ ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಕಳೆದೊಂದು ವಾರದಿಂದ ಇಂತಾದೊಂದು ಸುದ್ದಿ ಕೇಳಿಬರ್ತಿದೆ. ಇದೀಗ ಟೀಸರ್ ರಿಲೀಸ್ ಬೆನ್ನಲ್ಲೇ ಈ ಚರ್ಚೆ ಹೆಚ್ಚಾಗಿದೆ. ಕಾರಣ 'ಟಾಕ್ಸಿಕ್‌' ಚಿತ್ರದ ಟೀಸರ್‌ ತುಣುಕನ್ನು ನಟ ಟೊವಿನೋ ಥಾಮಸ್ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ವಾವ್ ಎಂದು ಬರೆದು ಟೀಸರ್‌ನ ಆರಂಭದ ಸಣ್ಣ ಝಲಕ್ ಪೋಸ್ಟ್ ಮಾಡಿದ್ದಾರೆ.

'ಟಾಕ್ಸಿಕ್' ಚಿತ್ರದ ಟೀಸರ್ ನೋಡಿದವರು ಈ ಜೋಕರ್ ಯಾರು? ಯಶ್ ಪಾತ್ರಕ್ಕೂ ಆ ಜೋಕರ್‌ಗೂ ಏನಾದರೂ ಲಿಂಕ್ ಇದ್ಯಾ? ಎಂದು ಚರ್ಚೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಬರೀ ಜೋಕರ್ ಝಲಕ್‌ನ ಮಾತ್ರ ಟೊವಿನೋ ಥಾಮಸ್ ಹಂಚಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಜೋಕರ್ ಆಗಿ ಟೊವಿನೋ ನಟಿಸುತ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ.

4 ವರ್ಷಗಳ ಹಿಂದೆ ಟೊವಿನೋ ಥಾಮಸ್ 'ಲುಕಾ' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಸಿನಿಮಾ ನೋಡಿ ಗೀತು ಮೋಹನ್ ದಾಸ್ ಮೆಚ್ಚಿಕೊಂಡಿದ್ದರು. ಮುಖ್ಯವಾಗಿ ಟೊವಿನೋ ಅಭಿನಯವನ್ನು ಹಾಡಿ ಕೊಂಡಾಡಿದ್ದರು. ಇತ್ತೀಚೆಗೆ ಇದ್ದಕ್ಕಿಂದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ದೇಶಕಿ ಆತನನ್ನು ಫಾಲೋ ಮಾಡಲು ಆರಂಭಿಸಿದ್ದರು. ಇದೆಲ್ಲವೂ ಯಶ್‌19 ಚಿತ್ರದಲ್ಲಿ ಟೊವಿನೋ ನಟಿಸೋ ಬಗ್ಗೆ ಸುಳಿವು ನೀಡಿತ್ತು.

ಇತ್ತೀಚೆಗೆ ಸೂಪರ್ ಹಿಟ್ ಸಿನಿಮಾಗಳಿಂದ ಟೊವಿನೋ ಥಾಮಸ್ ಮಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. 'ಮಿನ್ನಲ್ ಮುರಳಿ' ಸಿನಿಮಾ ದಾಖಲೆ ಬರೆದಿತ್ತು. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಓಟಿಟಿಗೆ ಬಂದಿತ್ತು. 'ಫೋರೆನ್ಸಿಕ್' ಸಿನಿಮಾ ಕೂಡ ಗೆದ್ದಿತ್ತು. ಇತ್ತೀಚೆಗೆ ಬಂದ '2018' ಸಿನಿಮಾ ಅಂತೂ ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ಬರೀತು.

ಸದ್ಯ ಟೊವಿನೋ ಥಾಮಸ್ ಇನ್‌ಸ್ಟಾ ಸ್ಟೋರಿ ಸಖತ್ ವೈರಲ್ ಆಗುತ್ತಿದೆ. ಯಶ್ ಅಭಿಮಾನಿಗಳು ಅದರ ಸ್ಕ್ರೀನ್‌ಶಾಟ್ ತೆಗೆದು ವೈರಲ್ ಮಾಡುತ್ತಿದ್ದಾರೆ. ಥಾಮಸ್, ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆಗಿನ ಒಡನಾಟದ ಕಾರಣಕ್ಕೆ ಶುಭ ಕೋರಿ 'ಟಾಕ್ಸಿಕ್' ಟೀಸರ್ ಹಂಚಿಕೊಂಡಿದ್ದಾರಾ? ಅಥವಾ ಚಿತ್ರದಲ್ಲಿ ನಿಜಕ್ಕೂ ನಟಿಸುತ್ತಿದ್ದಾರಾ? ಎನ್ನುವ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

This Actor Is Playing A Key Role In Yash Starrer Toxic

ಯಶ್- ಗೀತು ಜೋಡಿ ಕಥೆ, ಚಿತ್ರಕಥೆ, ಸ್ಟಾರ್‌ಕಾಸ್ಟ್, ಶೂಟಿಂಗ್ ಶೆಡ್ಯೂಲ್ ಎಲ್ಲಾ ಫೈನಲ್ ಮಾಡಿಕೊಂಡು 'ಟಾಕ್ಸಿಕ್' ಸಿನಿಮಾ ಘೋಷಣೆ ಮಾಡಿರುವಂತೆ ಕಾಣುತ್ತಿದೆ. ಹಾಗಾಗಿ ಚಿತ್ರದ ಬಗ್ಗೆ ಒಂದೊಂದೇ ಸುದ್ದಿ ಲೀಕ್ ಆಗುತ್ತಿದೆ. ಜನವರಿಯಿಂದಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು 2025ರ ಏಪ್ರಿಲ್ 10ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಯಶ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಚಿತ್ರಕ್ಕಾಗಿ ಕಾಯುವಂತಾಗಿದೆ.

More from Filmibeat

English summary
is this actor playing villain in Yash's Toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X