65 ವರ್ಷದ ಮುದುಕನನ್ನು ಮದುವೆಯಾದರಾ 40ರ ಹರೆಯದ ನಟಿ..?

ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್‌ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆಯಾಗಿ ಎಲ್ಲರನ್ನು ನಿಬ್ಬೇರಗಾಗಿಸುತ್ತಾರೆ. ಟ್ರೋಲಿಗರ ಬಾಯಿಗೆ ಆಹಾರವೂ ಆಗುತ್ತಾರೆ. ಇದಕ್ಕೆ ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ ಮತ್ತು ನಟಿ ದಿವ್ಯಾ ಶ್ರೀಧರ್ ಸದ್ಯದ ಉದಾಹರಣೆ.

ಹೌದು, ಮೊನ್ನೆ ಮೊನ್ನೆಯಷ್ಟೇ ಗುರುವಾಯೂರು ದೇವಸ್ಥಾನದಲ್ಲಿ ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಸಪ್ತಪದಿಯನ್ನು ತುಳಿದಿದ್ದಾರೆ. ಹೊಸ ಬದುಕನ್ನು ಆರಂಭ ಮಾಡಿದ್ದಾರೆ. ಆದರೆ ಇವರಿಬ್ಬರ ಮದುವೆಯ ಬಗ್ಗೆ ಅನೇಕರು ಈಗ ಅಪಸ್ವರ ಎತ್ತುತ್ತಿದ್ದಾರೆ. ಚಕಾರ ತೆಗೆಯುತ್ತಿದ್ದಾರೆ. ಇದಕ್ಕೆ ಇಬ್ಬರ ಮಧ್ಯೆ ಇರುವ ವಯಸ್ಸಿನ ಅಂತರ ಒಂದು ಕಾರಣವಾದರೆ ಹಣ, ಅಂತಸ್ತು ಮತ್ತು ದೈಹಿಕ ಸುಖ ಮತ್ತೊಂದು ಕಾರಣ.

Tired of cyber abuse Divya Sreedhar and Kris Venugopal share their true ages

ಹೌದು, ಅಸಲಿಗೆ ಮಲಯಾಳಂ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿ, ಖಳನಾಯಕಿಯ ಪಾತ್ರಕ್ಕೆ ಹೆಸರುವಾಸಿಯಾದ ದಿವ್ಯಾ ಶ್ರೀಧರ್ ಅವರಿಗೆ ಇದು ಎರಡನೇ ಮದುವೆ. ತಮ್ಮ ಮೊದಲ ಪತಿಯಿಂದ ದಿವ್ಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನೂ ಆಧ್ಯಾತ್ಮ ಗುರು ಮತ್ತು ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ ಗೆ ಕೂಡ ಇದು ಎರಡನೇ ಮದುವೆ. ಮೊದಲ ಪತ್ನಿಯಿಂದ ವಿಪರೀತ ಮಾನಸಿಕ ಕಿರುಕುಳ ಅನುಭವಿಸಿರುವುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿರುವ ಕ್ರಿಸ್ ವೇಣುಗೋಪಾಲ್ 2019ರಲ್ಲಿ ವಿಚ್ಛೇದನವನ್ನು ಪಡೆದಿದ್ದಾರೆ.

ಹೀಗೆ ಮೊದಲ ಪತಿಯಿಂದ ದೂರವಾದ ದಿವ್ಯಾ ಶ್ರೀಧರ್ ಮತ್ತು ಮೊದಲ ಪತ್ನಿಯಿಂದ ದೂರವಾದ ಕ್ರಿಸ್ ವೇಣುಗೋಪಾಲ್ ಪರಸ್ಪರ ಪ್ರೀತಿಸಿ ಮದುವೆಯಾದ ಬೆನ್ನಲ್ಲೇ ಅನೇಕರು ದಿವ್ಯಾ ಶ್ರೀಧರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಕೆಟ್ಟಾ ಕೊಳಕು ಪದಗಳಿಂದ ದಿವ್ಯಾ ಶ್ರೀಧರ್ ಅವರನ್ನು ನಿಂದಿಸುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ತಮ್ಮ ಲೈಂಗಿಕ ಆಸೆಯನ್ನು ಈಡೇರಿಸಿಕೊಳ್ಳಲು 65 ವರ್ಷದ ಮುದುಕನನ್ನು ದಿವ್ಯಾ ಶ್ರೀಧರ್ ಮದುವೆಯಾಗಿದ್ದಾರೆ ಎಂದೆಲ್ಲ ಮಾತನಾಡುತ್ತಿದ್ದಾರೆ. ಅವರ ಇನ್ಸ್ಟಾಗ್ರಾಮ್‌ ಅಕೌಂಟ್‌ಗೆ ಬಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

ಸಹಜವಾಗಿ ವ್ಯಕ್ತವಾದ ಈ ಟೀಕೆ ಟಿಪ್ಪಣಿ ಮತ್ತು ಟ್ರೋಲ್‌ಗಳಿಂದ ನೊಂದು ಬೆಂದಿರುವ ದಿವ್ಯಾ ಶ್ರೀಧರ್ ತಮ್ಮ ಮೇಲೆ ನಡೆಯುತ್ತಿರುವ ಈ ಸೈಬರ್ ಅಟ್ಯಾಕ್ ಕುರಿತು ಬೇಸರ ಹೊರ ಹಾಕಿದ್ದಾರೆ. ಮದುವೆ ಕೇವಲ ಸೆ*ಗೋಸ್ಕರ ಯಾರು ಮಾಡಿಕೊಳ್ಳುವುದಿಲ್ಲ ಮದುವೆ ಅಂದರೆ ಎರಡು ದೇಹಗಳಷ್ಟೇ ಅಲ್ಲ ಎರಡು ಆತ್ಮಗಳ ಮಿಲನ ಎಂದಿದ್ದಾರೆ. ನಾನು ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನನ್ನ ಏಕಾಂಗಿತನವನ್ನು ದೂರ ಮಾಡಲು ಮದುವೆಯಾಗಿರುವುದಾಗಿ ಹೇಳಿದ್ದಾರೆ.

ಇನ್ನೂ ದಾಂಪತ್ಯದಲ್ಲಿ ಹೆಣ್ಣಿನ ಮನಸ್ಸು ಸೆಕ್ಯೂರಿಟಿ ಬಯಸುತ್ತದೆ, ಗಂಡ ತನಗೆ ಆಸರೆಯಾಗಿರಬೇಕು ಎಂದು ಕಾತರಿಸುತ್ತೆ. ಸಮಸ್ಯೆ ಬಂದಾಗಲೆಲ್ಲ ಆಕೆಯ ಮನಸು ಅನಾಮತ್ತಾಗಿ ಗಂಡನತ್ತ ಹೊರಳುತ್ತದೆ ಎಂದು ಹೇಳಿರುವ ದಿವ್ಯಾ ಶ್ರೀಧರ್ ಜನ ಟ್ರೋಲ್ ಮಾಡುತ್ತಾರೆ ಎಂದು ನಾನು ನಿರೀಕ್ಷೆ ಮಾಡಿದ್ದೆ, ಆದರೆ ಇಷ್ಟೊಂದು ಕೀಳಾಗಿ ನಮ್ಮನ್ನು ನೋಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ವಯಸ್ಸಾದ ನಂತರ ಮದುವೆಯಾಗುವುದು ತಪ್ಪಾ ಎಂದು ಪ್ರಶ್ನೆ ಕೇಳಿದ್ದಾರೆ. ಮುಂದುವರೆದು ಕ್ರಿಸ್ ಅವರ ವಯಸ್ಸು 67 ಅಲ್ಲ ಬದಲಿಗೆ 49 ಎಂದು ಸ್ಪಷ್ಟೀಕರಣವನ್ನು ನೀಡಿ ನನಗೆ ಈಗ 40ರ ಪ್ರಾಯ ಎಂದು ಕೂಡ ಹೇಳಿದ್ದಾರೆ ದಿವ್ಯಾ ಶ್ರೀಧರ್.


ಸದ್ಯಕ್ಕೆ ದಿವ್ಯಾ ಶ್ರೀಧರ್ ಅವರ ಈ ಖಂಡ ತುಂಡ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ದಿವ್ಯಾ ಶ್ರೀಧರ್ ಅವರ ಈ ನೇರ ಉತ್ತರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.ಟ್ರೋಲ್‌ಗಳಿಗೆಲ್ಲ ಬೆದರದೇ ನೆಮ್ಮದಿಯಾಗಿ ಸಾಂಸಾರಿಕ ಜೀವನದ ಕಡೆ ಗಮನ ಕೊಡಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಕಾಲೆಳೆಯುವ ಕೆಲಸವನ್ನು ಮುಂದುವರೆಸಿದ್ದಾರೆ.

More from Filmibeat

Read more about: marriage malayalam troll
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X