ನೀವು ಮಲಯಾಳಂ ಚಿತ್ರ ಪ್ರೇಮಿಗಳಾ?: ಹಾಗಿದ್ದರೇ ಮನೆಯಲ್ಲೇ ಕುಳಿತು ವೀಕೆಂಡ್‌ನಲ್ಲಿ ಈ ಸಿನಿಮಾಗಳನ್ನು ನೋಡಿ
ಕೆಲವರಿಗೆ ವೀಕೆಂಡ್ ಬಂದರೆ ಸಾಕು ಊರು ಸುತ್ತಲೂ ಹೋಗುವ ಆಸೆ, ಮತ್ತೆ ಕೆಲವರಿಗೆ ಫ್ಯಾಮಿಲಿ ಜೊತೆಗೆ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನು ಆನಂದಿಸಲು ಸಮಯ ಮೀಸಲಿಡುತ್ತಾರೆ. ಇನ್ನು ಸಿನಿಮಾ ಪ್ರೇಮಿಗಳು ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಲು ಇಡೀ ದಿನವನ್ನೇ ಮಿಸಲಿಡುತ್ತಾರೆ. ಒಟಿಟಿಗಳಿಂದಾಗಿ ಈಗ ಥೀಯೇಟರ್ ಎನ್ನುವುದು ಮನೆಯಲ್ಲೇ ಇದ್ದು ಇಷ್ಟಪಟ್ಟ ಸಿನಿಮಾ ನೋಡಬಹುದು.
ಮಲಯಾಳಂ ಚಿತ್ರರಂಗದಲ್ಲಿ ವಿಭಿನ್ನ ಕಥೆ ಮತ್ತು ಸತ್ಯ ಘಟನೆಗಳ ಸುತ್ತ ಹಲವು ಸಿನಿಮಾಗಳು ಬಂದಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳು ಲಭ್ಯವಿದೆ. ಆಸಕ್ತಿ ಮತ್ತು ಸತ್ಯ ಘಟನೆಗಳ ಮೇಲೆ ಬೆಳಕು ಚೆಲ್ಲುವ ಕೆಲ ಸಿನಿಮಾಗಳ ಪಟ್ಟಿ ಇಲ್ಲಿವೆ. ಈ ವೀಕೆಂಡ್‌ನಲ್ಲಿ ಮನೆಯಲ್ಲಿ ಕುಳಿತು ಫ್ಯಾಮಿಲಿ ಜೊತೆಗೆ ಆನಂದಿಸಿ.

ಜನ ಗಣ ಮನ (2022)
ಹಲವು ಘಟನೆಗಳು, ಕ್ಷಣ ಕ್ಷಣಕ್ಕು ಬದಲಾಗುವ ಪಾತ್ರಗಳು, ಹಲವು ತಿರುವುಗಳ ಮೂಲಕ ನಿರೂಪಣೆ ಮಾಡಿರುವ ಜನ ಗಣ ಮನ ಒಂದು ಉತ್ತಮ ಕೋರ್ಟ್ ರೂಂ ಡ್ರಾಮಾ. ಮನರಂಜನೆ ಮತ್ತು ಘಟನೆಯನ್ನು ನೋಡುವ ದೃಷ್ಠಿಕೋನದ ಮೇಲೆ ಪರಿಣಾಮ ಬೀರುವ ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಮಮತಾ ಮೋಹನ್‌ದಾಸ್ ನಟನೆ ನೆನಪಿನಲ್ಲಿ ಉಳಿಯುತ್ತದೆ. ಡಿಜೊ ಜೋಸ್ ಆಂಥೋನಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಮಿನ್ನಲ್ ಮುರಳಿ (2022)
ಸೂಪರ್‌ಹೀರೋ ಕಥೆಗಳು ಮಕ್ಕಳ ಜೊತೆಗೆ ದೊಡ್ಡವರಿಗೂ ಇಷ್ವಾಗುತ್ತವೆ. ಇದರ ಜೊತೆಗೆ ಕಾಮಿಡಿ ಕೂಡ ಇದ್ದರೇ ಸಿನಿಮಾ ಸೂಪರ್ ಹಿಟ್. ಇಂತಹದ್ದೇ ಸಾಲಿನಲ್ಲಿ ಬರುವ ಸಿನಿಮಾ ಮಿನ್ನಲ್ ಮುರಳಿ. ಬೇಸಿಲ್ ಜೋಸೆಫ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಟೊವಿನೋ ಥಾಮಸ್ ಮತ್ತು ಗುರು ಸೋಮಸುಂದರಂ ಸಿನಿಮಾದ ಶಕ್ತಿಯಾಗಿದ್ದಾರೆ.

ತಳ್ಳುಮಾಲಾ (2022)
ಟೊವಿನೋ ಥಾಮಸ್ ಮತ್ತು ಕಲ್ಯಾಣಿ ಪ್ರಿಯದರ್ಶಿನಿ ಅಭಿನಯದ ಸಿನಿಮಾ ಹಲವು ವಿಚಾರಗಳಲ್ಲಿ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಕಾಲ್ಪನಿಕ ಕೃತಿಗಳಿಗೆ ಸಂಬಂಧಿಸಿದ ವಿಷಯದ ಸುತ್ತ, ಸಂಘರ್ಷದ ಅಹಂಕಾರಗಳನ್ನು ಒಡೆಯುವುದು, ಪ್ರಾಣಿ ಪ್ರವೃತ್ತಿಗಳು ಸೇರಿ ಅನೇಕ ವಿಧಗಳಲ್ಲಿ ಮನಸ್ಸಿನಲ್ಲಿ ನಿಲ್ಲುವಂತಹದ್ದು. ಖಾಲಿದ್ ರೆಹಮಾನ್ ನಿರ್ದೇಶಿಸಿದ್ದಾರೆ.
ನಾಯಟ್ಟು (2022)
ನಮ್ಮ ದೇಶದ ಸಿನಿಮಾರಂಗದಲ್ಲಿ ಪೊಲೀಸರನ್ನು ವೈಭವಿಕರಿಸಿರುವುದೇ ಹೆಚ್ಚು. ನಿರ್ದೇಶಕ ಮರ್ಟಿನ್ ಪ್ರಕಟ್ 'ನಾಯಟ್ಟು' ಮೂಲಕ ತಮ್ಮ ವೈವಿಧ್ಯಮಯ ಪ್ರತಿಭೆಯನ್ನು ಅನಾವರಣ ಮಾಡಿದರು. 'ನಾಯಟ್ಟು' ದಲಿತ ರಾಜಕಾರಣದ ಸುತ್ತ ನಡೆಯುವ ಈ ಸಿನಿಮಾ ಕಥೆಯು ರಾಜಕಾರಣ ಮತ್ತು ಪೊಲೀಸ್ ವ್ಯವಸ್ಥೆಯ ನಡುವಿನ ತಿಕ್ಕಾಟವನ್ನು ಬಿಚ್ಚಿಡುತ್ತದೆ.
RDX (2023)
ಈ ದಿನಗಳಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಆಕ್ಷನ್ ಚಲನಚಿತ್ರಗಳು ಅಪರೂಪವಾಗಿವೆ. ಅದರಲ್ಲೂ ವಿಶೇಷವಾಗಿ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದ ಸಿನಿಮಾಗಳ ನಡುವೆ ಮಲಯಾಳಂ ಆಕ್ಷನ್ ಸಿನಿಮಾಗಳು ಇಲ್ಲದಂತಾಗಿವೆ. ಈ ಹೆಸರನ್ನು ತೆಗೆದು ಹಾಕಲು ಈ ವರ್ಷ ಬಿಡುಗಡೆಯಾಗಿದ್ದು RDX. ಶೇನ್ ನಿಗಮ್, ಆಂಥೋನಿ ವರ್ಗೀಸ್ ಪೆಪೆ ಮತ್ತು ನೀರಜ್ ಮಾಧವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಮೂವರು ಯುವಕರ ಪ್ರೇಮ, ಸ್ನೇಹ, ಹೊಡೆದಾಟ ಮತ್ತು ಕುಟುಂಬದ ರಕ್ಷಣೆ ಹಿಂದೆ ಸುತ್ತುತ್ತದೆ.
ಇರಟ್ಟಾ (2023)
ಇಬ್ಬರು ಸಹೋದರರು. ಎರಡು ವ್ಯಕ್ತಿತ್ವಗಳು. ಒಂದು ರಹಸ್ಯ. ಜೋಜು ಜಾರ್ಜ್ ಒಂದು ರೀತಿಯ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಪೋಲೀಸ್ ಕಾರ್ಯವಿಧಾನ ಮತ್ತು ಅವಳಿಗಳ ನಡುವಿನ ಸಂಬಂಧದ ಬಗ್ಗೆ ಇದೆ. . ಮಾರಲ್ ಪೊಲೀಸಿಂಗ್ ಮತ್ತು ಅದು ತನ್ನ ಕುಟುಂಬದ ಮೇಲೆ ಬೀರುವ ಪರಿಣಾಮಗಳನ್ನು ಚೆನ್ನಾಗಿ ತೋರಿಸಲಾಗಿದೆ. ಒಂದು ಕೊಲೆ, ಸಂಬಂಧ, ಪೊಲೀಸರ ವೈಯಕ್ತಿಕ ಜೀವನದ ಸುತ್ತ ಸಿನಿಮಾ ಸುತ್ತುತ್ತದೆ.


Click it and Unblock the Notifications










