For Quick Alerts
  ALLOW NOTIFICATIONS  
  For Daily Alerts

  ಮೋಹನ್ ಲಾಲ್ ಚಿತ್ರದಲ್ಲಿ ಬಹುಭಾಷೆ ತಾರೆ ತ್ರಿಷಾ ನಾಯಕಿ!

  |

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸುತ್ತಿರುವ 'ರಾಮ್' ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿತ್ತು. ಇದೀಗ, ಈ ಚಿತ್ರಕ್ಕೆ ನಾಯಕಿಯಾಗಿ ಬಹುಭಾಷೆ ನಟಿ ತ್ರಿಷಾ ಕಾಣಿಸಿಕೊಳ್ಳುತ್ತಿದ್ದಾರೆ.

  ಇತ್ತೀಚಿಗಷ್ಟೆ ರಾಮ್ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಪೂಜೆ ಕಾರ್ಯಕ್ರಮದಲ್ಲಿ ತ್ರಿಷಾ ಭಾಗಿಯಾಗಿದ್ದರು. ಇದಕ್ಕೂ ಮುಂಚೆ 'ಹೇ ಜುಡೆ' ಎಂಬ ಮಲಯಾಳಂ ಚಿತ್ರದಲ್ಲಿ ತ್ರಿಷಾ ನಟಿಸಿದ್ದರು. ಅದಾದ ಬಳಿಕ ಈಗ ಎರಡನೇ ಸಿನಿಮಾ ಮಾಡುತ್ತಿದ್ದಾರೆ.

  ಅಂದ್ಹಾಗೆ, ಜೀತು ಜೊಸೇಫ್ ನಿರ್ದೇಶನದ 'ರಾಮ್' ಚಿತ್ರಕ್ಕೆ ರಮೇಶ್ ಪಿಳೈ ಮತ್ತು ಸುಧನ್ ಎಸ್ ಪಿಳೈ ನಿರ್ಮಿಸುತ್ತಿದ್ದಾರೆ. 2020ರ ಓನಮ್ ಪ್ರಯುಕ್ತ ಈ ಸಿನಿಮಾವನ್ನ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಮೋಹನ್ ಲಾಲ್ ಹೊಸ ಸಿನಿಮಾ 'ರಾಮ್'ಮೋಹನ್ ಲಾಲ್ ಹೊಸ ಸಿನಿಮಾ 'ರಾಮ್'

  ಮೋಹನ್ ಲಾಲ್ ಅವರ ''ಬಿಗ್ ಬ್ರದರ್'' ಸಿನಿಮಾ ಕ್ರಿಸ್ ಮಸ್ ಪ್ರಯುಕ್ತ ತೆರೆಗೆ ಬರಲು ಸಜ್ಜಾಗಿದೆ. ಕಳೆದ ವರ್ಷ ತೆರೆಕಂಡಿದ್ದ ಲೂಸಿಫರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಸಿತ್ತು. ಮಲಯಾಳಂ ಇಂಡಸ್ಟ್ರಿಯಲ್ಲಿ 200 ಕೋಟಿ ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  ಜೀತು ಜೊಸೇಫ್ ಮತ್ತು ಮೋಹನ್ ಲಾಲ್ ಈ ಹಿಂದೆ ದೃಶ್ಯಂ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ರಾಮ್ ಸಿನಿಮಾ ಬಿಟ್ಟು ಮರಕ್ಕರ್, ಹಾಗೂ ಲೂಸಿಫರ್ 2 ಚಿತ್ರಗಳು ಕೂಡ ಮೋಹನ್ ಲಾಲ್ ಕೈಯಲ್ಲಿದೆ.

  English summary
  Malayalam Superstar Mohanlal and jeethu joseph new movie title poster released. might be trisha krishnan will playing female lead role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X