ಮತ್ತೊಬ್ಬ ನಟನನ್ನು ಹೊಗಳಿದ್ದಕ್ಕೆ ತನ್ನದೇ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿದ ಮಾರ್ಕೋ ಸ್ಟಾರ್ ಉನ್ನಿ ಮುಕುಂದನ್..!

ಚಿತ್ರರಂಗದಲ್ಲಿ ಕೆಲವರಲ್ಲಿ ನಾನು ಎಂಬ ಅಹಂಕಾರ ಇರುತ್ತೆ. ಎಲ್ಲವೂ ನನ್ನಿಂದ ಎನ್ನುವ ಭ್ರಮೆಯಲ್ಲಿರುವ ಇರುವ ಇವರನ್ನು ಯಾವಾಗಲೂ ಹೊಗಳುತ್ತಲೇ ಇರಬೇಕು. ಇಲ್ಲವಾದಲ್ಲಿ ಇವರ ಕೋಪ ನೆತ್ತಿಗೇರುತ್ತೆ. ಇವರೆದುರು ಬೇರೆಯವರ ಕುರಿತು ಒಳ್ಳೆಯ ಮಾತು ಮಾತನಾಡುವಂತೆ ಇಲ್ಲ. ಬೇರೆ ಕಲಾವಿದರ ಕೆಲಸವನ್ನು ಮೆಚ್ಚಿಕೊಳ್ಳುವಂತೆ ಇಲ್ಲ. ಹಾಗೇನಾದರೂ ಮಾಡಿದರೆ ಇವರ ಅಹಂಗೆ ಪೆಟ್ಟು ಬೀಳುತ್ತೆ. ನಡೆಯಬಾರದ ಅನಾಹುತ ನಡೆದು ಹೋಗುತ್ತೆ.

ಇದಕ್ಕೆ ಉನ್ನಿ ಮುಕುಂದನ್ ಪ್ರಕರಣ ಸದ್ಯದ ತಾಜಾ ಉದಾಹರಣೆ. ಹೌದು, ಉನ್ನಿ ಮುಕುಂದನ್.. ಮಲಯಾಳಂನ ಸ್ಟಾರ್. 2024ರವರೆಗೆ ನೆಲದ ಮೇಲೆಯೇ ನಡೆಯುತ್ತಿದ್ದ ಉನ್ನಿ ಮುಕುಂದನ್ 'ಮಾರ್ಕೋ' ಚಿತ್ರದ ಯಶಸ್ಸಿನಿಂದ ಭ್ರಮಾ ಲೋಕದಲ್ಲಿ ತೇಲುತ್ತಿದ್ದಾರೆ.

Unni Mukundan Assaults Manager Over Praise for Tovino Thomas Narivetta Police Complaint Filed

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಹಿಂಸಾತ್ಮಕ ಚಿತ್ರ ಎಂಬ ಕುಖ್ಯಾತಿಗೆ ಪಾತ್ರವಾದ ಈ ಚಿತ್ರ ಗೆದ್ದಿದ್ದೇ ಗೆದ್ದಿದ್ದು ಉನ್ನಿ ಮುಕುಂದನ್ ಕುತ್ತಿಗೆಯ ಮೇಲೆ ತಲೆಯೇ ನಿಲ್ಲುತ್ತಿಲ್ಲ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ತೀರಾ ಇತ್ತೀಚೆಗಷ್ಟೇ ಮಾಲ್‌ನಲ್ಲಿ ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್ ಕಿತ್ತುಕೊಂಡಿದ್ದ ಉನ್ನಿ ಮುಕುಂದನ್ ಇದೀಗ ತನ್ನದೇ ಮ್ಯಾನೇಜರ್‌ನ ಸಾಯುವಂತೆ ಹೊಡೆದಿದ್ದಾರೆ.

ಮಾತೃಭೂಮಿ ವರದಿ ಪ್ರಕಾರ ತಮ್ಮ ಮಾಜಿ ಮ್ಯಾನೇಜರ್ ವಿಪಿನ್ ಕುಮಾರ್ ಅವರ ಮೇಲೆ ಉನ್ನಿ ಮುಕುಂದನ್ ಹಲ್ಲೆಯನ್ನು ಮಾಡಿದ್ದಾರೆ. ವಿಪಿನ್ ಕುಮಾರ್ ಅವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಕೊಚ್ಚಿಯ ಇನ್ಫೋ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಉನ್ನಿ ಮುಕುಂದನ್ ವಿರುದ್ದ ದೂರನ್ನು ಕೂಡ ಸಲ್ಲಿಸಿದ್ದಾರೆ. ಉನ್ನಿ ಮುಕುಂದನ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿಪಿನ್ ಕುಮಾರ್ ಉಲ್ಲೇಖಿಸಿದ್ದಾರೆ.

ಇನ್ನು ಉನ್ನಿ ಮುಕುಂದನ್ ಮತ್ತು ವಿಪಿನ್ ಕುಮಾರ್ ಸಂಬಂಧ ಕಳೆದ ಕೆಲ ದಿನಗಳಿಂದ ಹಳಸಿತ್ತು. ಹೀಗಾಗಿ ತಮ್ಮ ಪಾಡಿಗೆ ತಾವು ಇದ್ದ ವಿಪಿನ್ ಕುಮಾರ್ ಮೊನ್ನೆ ಬಿಡುಗಡೆಯಾದ ಮಲಯಾಳಂನ ಮತ್ತೊಬ್ಬ ಸ್ಟಾರ್ ಟೊವಿನೋ ಥಾಮಸ್ ಅಭಿನಯದ ನರಿವೆಟ್ಟಾ ಚಿತ್ರದ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಟೊವಿನೋ ಥಾಮಸ್ ಅವರನ್ನು ಹೊಗಳಿದ್ದರು.

ಇದರಿಂದ ಕೆರಳಿದ ಉನ್ನಿ ಮುಕುಂದನ್ ನೇರವಾಗಿ ತಮ್ಮ ಮಾಜಿ ಮ್ಯಾನೇಜರ್ ವಿಪಿನ್ ಕುಮಾರ್ ವಾಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ. ಕಾರು ಪಾರ್ಕಿಂಗ್‌ಗೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ.

ಇನ್ನು ಈ ಕುರಿತು ಮಾಧ್ಯಮದವರಿಗೆ ವಿಪಿನ್ ಕುಮಾರ್ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದು ಕಳೆದ ಆರು ವರ್ಷಗಳಿಂದ ನಾನು ಉನ್ನಿ ಮುಕುಂದನ್ ಜೊತೆ ಕೆಲಸ ಮಾಡುತ್ತಿದ್ದೆ, ನನ್ನನ್ನೂ ಈ ಹಿಂದೆ ಹಲವು ಬಾರಿ ಅವಮಾನ ಮಾಡಿದರೂ, ನಿಂದಿಸಿದರೂ ಕೂಡ ನಾನು ಕೆಲಸದಲ್ಲಿ ಮುಂದುವರೆದೆ ಎಂದು ಹೇಳಿದ್ದಾರೆ.

ಆದರೆ ಮಾರ್ಕೋ ಚಿತ್ರದ ನಂತರ ಆ ವ್ಯಕ್ತಿಯ ವರ್ತನೆಯಲ್ಲಿ ಭಾರೀ ಬದಲಾವಣೆಗಳಾಗಿವೆ, ಅದಕ್ಕೆ ನಾನಾ ಕಾರಣಗಳಿವೆ, ಮಾರ್ಕೋ ಚಿತ್ರದ ಬಹುದೊಡ್ಡ ಗೆಲುವಿನ ನಂತರ ಕೂಡ ಅವರಿಗೆ ಒಳ್ಳೆಯ ಚಿತ್ರಗಳು ಅವಕಾಶಗಳು ಸಿಗುತ್ತಿಲ್ಲ ಎಂದಿರುವ ಮ್ಯಾನೇಜರ್ ವಿಪಿನ್ ಕುಮಾರ್, ಮಾರ್ಕೋ ನಂತರ ಬಂದ ಗೆಟ್ ಸೆಟ್ ಬೇಬಿ ಚಿತ್ರ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತು, ಅವರ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಹಣ ಹೂಡಬೇಕಿದ್ದ ಗೋಕುಲಂ ಫಿಲ್ಸ್ಸ್‌ ಸಂಸ್ಥೆ ಕೂಡ ಕೊನೆ ಕ್ಷಣದಲ್ಲಿ ಹಿಂದೇಟು ಹಾಕಿತು, ಇದೆಲ್ಲದರಿಂದ ಬೇಸತ್ತು ಉನ್ನಿ ಮುಕುಂದನ್ ಹತಾಶರಾಗಿದ್ದಾರೆ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ತನ್ನಲ್ಲಿನ ಹತಾಶೆ ಮತ್ತು ಕೋಪವನ್ನು ಮೊದಲಿಂದ ತನ್ನ ಅಕ್ಕ-ಪಕ್ಕ ಇದ್ದವರ ಮೇಲೆ ಉನ್ನಿ ಮುಕುಂದನ್ ಹೊರ ಹಾಕುತ್ತಾರೆ, ಈ ಕಾರಣಕ್ಕೆ ಅವರ ಬಳಿ ಯಾರು ಹೆಚ್ಚು ದಿನ ಉಳಿಯಲಿಲ್ಲ ಕೆಲಸ ಮಾಡಿಲ್ಲ ಎಂದು ಹೇಳಿರುವ ವಿಪಿನ್ ಕುಮಾರ್ ಅವರ ಬಳಿ ನಾನೇ ಹೆಚ್ಚು ದಿನ ಕೆಲಸ ಮಾಡಿದ್ದು ನಾನಾದರೂ ಎಷ್ಟು ಅಂತ ಸಹಿಸಿಕೊಳ್ಳಲಿ ಎಂದು ಪ್ರಶ್ನೆ ಕೇಳಿದ್ದಾರೆ.

ಸದ್ಯ ಉನ್ನಿ ಮುಕುಂದನ್ ವಿರುದ್ದ ಪ್ರಕರಣ ದಾಖಲಾಗಿದ್ದು ಉನ್ನಿ ಮುಕುಂದನ್ ಅವರ ಹೇಳಿಕೆಯನ್ನು ಪೊಲೀಸರು ಪಡೆಯಲಿದ್ದಾರೆ. ಈ ವಿಚಾರದ ಕುರಿತು ಉನ್ನಿ ಮುಕುಂದನ್ ಯಾವುದೇ ಪ್ರತಿಕ್ರಿಯೆಯನ್ನು ಮಾಧ್ಯಮದವರಿಗೆ ನೀಡಿಲ್ಲ

More from Filmibeat

English summary
Actor Unni Mukundan has landed in controversy after allegedly assaulting his manager for praising fellow actor Tovino Thomas’ film Narivetta. According to reports, the altercation escalated quickly, prompting the manager to file a police complaint.
Read more about: assault mollywood attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X