ಹಿರಿಯ ನಟಿ ಕೆಪಿಎಸಿ ಲಲಿತಾ ನಿಧನ: ಸಿನಿ ಗಣ್ಯರ ಸಂತಾಪ

ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಕೆಪಿಎಸಿ ಲಲಿತಾ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಲಲಿತಾ ಅವರು ಕೊಚ್ಚಿಯ ತ್ರಿಪುನಿತುರದ್ಲಿ ತಮ್ಮ ಪುತ್ರ ಸಿದ್ಧಾರ್ಥ್ ಭರತನ ನಿವಾಸದಲ್ಲಿ ಹಲವು ವರ್ಷಗಳಿಂದ ವಾಸವಿದ್ದರು. ನಿನ್ನೆ ಅಲ್ಲಿಯೇ ತಮ್ಮ ಕೊನೆ ಉಸಿರೆಳೆದಿದ್ದಾರೆ. ಲಲಿತಾ ಸಾವಿಗೆ ಮಲಯಾಳಂನ ಪ್ರಮುಖ ನಟ, ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಟಿಯಾಗಿದ್ದ ಲಲಿತಾ ಅವರು ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಸಿನಿಮಾ ಕರ್ಮಿ ಭರತನ್ ಅವರನ್ನು ವಿವಾಹವಾಗಿದ್ದ ಲಲಿತಾಗೆ ಸಿದ್ಧಾರ್ಥ್ ಭರತನ್ ಹಾಗೂ ಶ್ರೀ ಕುಟ್ಟಿ ಹೆಸರಿನ ಇಬ್ಬರು ಮಕ್ಕಳು ಇದ್ದಾರೆ.

Veteran Malayalam Actor KPAC Lalitha Passes Away

1947 ರ ಫೆಬ್ರವರಿ 27ರಂದು ಜನಿಸಿದ್ದ ಲಲಿತಾರ ಮೂಲ ಹೆಸರು ಮಹೇಶ್ವರಿ ಅಮ್ಮ. ಎಳವೆಯಲ್ಲಿಯೇ ನೃತ್ಯ ಶಿಕ್ಷಣ ಪಡೆದ ಮಹೇಶ್ವರಿ, ಶಾಲೆಯಲ್ಲಿ ಕಲಿಯುವಾಗಲೇ ಕಲಾಮಂಡಲಮ್ ರಾಮಚಂದ್ರನ್ ಇಂಡಿಯನ್ ಡ್ಯಾನ್ಸ್ ಇನ್‌ಸ್ಟಿಟ್ಯೂಟ್ ಸೇರಲು ಶಾಲೆ ತೊರೆದರು. ಬಳಿಕ ಕೆಲವೇ ವರ್ಷಗಳಲ್ಲಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಮಹೇಶ್ವರಿ ಮೊದಲು ನಟಿಸಿದ ನಾಟಕ 'ಬಾಲಿ'.

ಬಳಿಕ ಪ್ರತಿಭಾ ಆರ್ಟ್ಸ್‌ ಕ್ಲಬ್ ಸೇರಿ ನಾಟಕ ಮಾಡುತ್ತಿದ್ದ ಮಹೇಶ್ವರಿ ಬಳಿಕ ಜನಪ್ರಿಯ ಕೆಪಿಎಸಿ ನಾಟಕ ಸಂಸ್ಥೆ ಸೇರಿಕೊಂಡರು. ಆ ನಂತರ ತಮ್ಮ ಹೆಸರನ್ನು ಮಹೇಶ್ವರಿ ಬದಲಿಗೆ ಲಲಿತಾ ಎಂದು ಒಟ್ಟುಕೊಂಡರು. ನಾಟ ಸಂಸ್ಥೆಯ ಹೆಸರು ಅವರ ಹೆಸರಿನೊಂದಿಗೆ ಸೇರಿಹೋಯಿತು.

1970 ರಲ್ಲಿ 'ಕೂಟುಕುಟುಂಬಂ' ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಲಲಿತಾ ಈ ಐದು ದಶಕಗಳಲ್ಲಿ ಸುಮಾರು ಐದುನೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಗೆ ಎರಡು ಬಾರಿ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. 1991ರಲ್ಲಿ 'ಅಮರನ್' ಸಿನಿಮಾಕ್ಕಾಗಿ ಹಾಗೂ 2000 ರಲ್ಲಿ 'ಶಂತಾನಮ್' ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ ಲಲಿತಾ.

ಕೇರಳ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಲಲಿತಾ, ಹಲವು ರಾಜ್ಯ ಪ್ರಶಸ್ತಿ ಹಾಗೂ ಫಿಲಂಫೇರ್‌ಗಳನ್ನು ಸಹ ಪಡೆದುಕೊಂಡಿದ್ದಾರೆ.

ಲಲಿತಾ ನಿಧನಕ್ಕೆ ಮಲಯಾಳಂ ಸ್ಟಾರ್ ನಟ ಮಮ್ಮುಟಿ, ಮೋಹನ್‌ಲಾಲ್, ಪೃಥ್ವಿರಾಜ್ ಸುಕುಮಾರನ್, ನಟಿ ಕೀರ್ತಿ ಸುರೇಶ್ ಸೇರಿದಂತೆ ಇನ್ನೂ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

More from Filmibeat

English summary
Veteran Malayalam actress KPAC Lalitha passed away of February 22. Mohanlal, Mammootty and many other celebrities express their condolence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X