'ಉಸ್ತಾದ್ ಹೋಟೆಲ್' ಸಿನಿಮಾ ಖ್ಯಾತಿಯ ಹಿರಿಯ ನಟ ಮಮುಕ್ಕೊಯಾ ಇನ್ನಿಲ್ಲ

ಚಿತ್ರರಂಗದಲ್ಲಿ ಮತ್ತೊಂದು ವಿಷಾದ. ಮಲಯಾಳಂ ಚಿತ್ರರಂಗದ ಪ್ರಮುಖ ನಟ ಮಮುಕ್ಕೊಯಾ ಕೆಲವೇ ನಿಮಿಷಗಳ ಹಿಂದೆ ಕೊನೆಯುಸಿರೆಳೆದಿದ್ದಾರೆ. ಕೋಳಿಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಲೇ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೆದುಳು ರಕ್ತಸ್ರಾವ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಮಮುಕೊಯಾ ಅಗಲಿಕೆಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಏಪ್ರಿಲ್ 24 ರಂದು ಕೇರಳದ ಫುಟ್ಬಾಲ್ ಮೈದಾನದಲ್ಲಿ ಕುಸಿದುಬಿದ್ದ ಮಲಯಾಳಂನ ಹಿರಿಯ ನಟ ಮಮುಕ್ಕೊಯಾ ಬುಧವಾರ ನಿಧನರಾದರು. ಅವರಿಗೆ ಹೃದಯಾಘಾತವಾಗಿತ್ತು. ಜೊತೆಗೆ ಮೆದುಳು ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಸೋಮವಾರ ಪೂಂಗೋಡ್ ಜಾನಕೀಯ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳು ಅವರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಪರಿಣಾಮ ಹೃದಯಾಘಾತದಿಂದ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಅಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಳಿಕ್ಕೋಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Veteran Malayalam actor Mamukkoya Dies After Suffering From Brain Hemorrhage

ರಂಗಭೂಮಿಯಿಂದ ಮಮುಕ್ಕೊಯಾ ತಮ್ಮ ನಟನಾ ಜೀವನ ಆರಂಭಿಸಿದ್ದರು. ನಂತರ ನಿಧಾನವಾಗಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಲು ಮುಂದಾದರು. 1979 ರಲ್ಲಿ 'ಅನ್ಯಾರುಡೆ ಭೂಮಿ' ಚಿತ್ರದ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ಪಟ್ಟಣಪ್ರವೇಶಂ', 'ನಾಡೋಡಿಕ್ಕಟ್ಟು', 'ಶ್ರೀಧರಂತೆ ಒಂದಂ ತಿರುಮುರಿವು', 'ಸಂದೇಶಂ', 'ಮೇಘಂ', 'ನಾಡೋಡಿಕಾಟ್ಟು' ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಮುಕ್ಕೊಯಾ ನಟಿಸಿದ್ದಾರೆ. ಅವರು ಫ್ರೆಂಚ್ ಸಿನಿಮಾ 'ಫ್ಲಾಮೆನ್ಸ್ ಆಫ್ ಪ್ಯಾರಡೈಸ್'ನಲ್ಲೂ ಕಾಣಿಸಿಕೊಂಡರು.

ಕೊನೆಯದಾಗಿ 2022ರಲ್ಲಿ ಬಿಡುಗಡೆಯಾದ 'ಪೀಸ್' ಎನ್ನುವ ಕಾಮಿಡಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. 'ಫೂಟೇಜ್', 'ಬಿ ನೀಲವರಯುಮ್ ಶಾರ್ಜಾ ಪಲ್ಲಿಯುಮ್', 'ಕನ್ನಡ ಟಾಕೀಸ್' ಮತ್ತು 'ನ್ಯಾನ್ಸಿ ರಾಣಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಮುಕ್ಕೊಯಾ ನಟಿಸಬೇಕಿತ್ತು. ಆದರೆ ಅಷ್ಟರಲ್ಲೇ ಕಾಲನ ಕರೆಗೆ ಓಗೊಟ್ಟು ಹೊರಟುಬಿಟ್ಟಿದ್ದಾರೆ. 450ಕ್ಕೂ ಅಧಿಕ ಸಿನಿಮಾಗಳಲ್ಲಿ ಮಮುಕ್ಕೊಯಾ ನಟಿಸಿದ್ದರು.

More from Filmibeat

English summary
Veteran Malayalam actor Mamukkoya Dies After Suffering From Brain Hemorrhage. actor appeared in more than 450 Malayalam films. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X