For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ಅಭಿಮಾನಿಗಳಿಗೆ ಸರ್ಪ್ರೈಸ್!

  |

  ತಮಿಳು ನಟ ವಿಜಯ್ ಸೇತುಪತಿ ಮಲಯಾಳಂನಲ್ಲಿ ತಮ್ಮ ಮುಂದಿನ ಸಿನಿಮಾ ಮಾಡುತ್ತಿದ್ದು, ಈ ಚಿತ್ರವನ್ನು ಇಂದು ವಿಎಸ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಪಿಂಕ್‌ವಿಲ್ಲಾ ವರದಿ ಮಾಡಿದೆ.

  ಒಂದು ವೇಳೆ ನಿಜವೇ ಆದರೆ ವಿಜಯ್ ಸೇತುಪತಿ ಅವರ ಎರಡನೇ ಮಲಯಾಳಂ ಸಿನಿಮಾ ಇದಾಗಲಿದೆ. ಸದ್ಯದ ಮಾಹಿತಿ ಪ್ರಕಾರ ವಿಜಯ್ ಸೇತುಪತಿ ಈ ಚಿತ್ರದಲ್ಲಿ ನಿತ್ಯಾ ಮೆನನ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

  ಅಭಿಮಾನಿಗಳ ಹುಬ್ಬೇರಿಸಿದ ನಟಿ ನಿತ್ಯಾ ಮೆನನ್ ಲಿಪ್ ಲಾಕ್ಅಭಿಮಾನಿಗಳ ಹುಬ್ಬೇರಿಸಿದ ನಟಿ ನಿತ್ಯಾ ಮೆನನ್ ಲಿಪ್ ಲಾಕ್

  ಈ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಸೇತುಪತಿ ಮತ್ತು ನಿತ್ಯಾ ಮೆನನ್ ಜೋಡಿಯನ್ನು ತೆರೆಮೇಲೆ ನೋಡಬೇಕೆಂದು ಬಹಳ ದಿನಗಳಿಂದ ಫ್ಯಾನ್ಸ್ ಕಾಯ್ತಿದ್ದಾರೆ. ಈ ಆಸೆ ಮಲಯಾಳಂನಲ್ಲಿ ಈಡೇರುವ ಸಾಧ್ಯತೆ ಇದೆ.

  ಇನ್ನುಳಿದಂತೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಸ್ತುತ ನಿತ್ಯಾ ಮೆನನ್ 'ಕೋಲಾಂಬಿ' ಮತ್ತು 'ಆರಾಮ್ ತಿರುಕಲ್ಪನ' ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಮತ್ತೊಂದೆಡೆ ವಿಜಯ್ ಸೇತುಪತಿ ತಮಿಳು, ವಿಜಯ್ ಜೊತೆ 'ಮಾಸ್ಟರ್', ಮುತ್ತಯ್ಯ ಮುರಳೀಧರನ್ (800) ಬಯೋಪಿಕ್ ಹಾಗೂ ಹಿಂದಿ ಸಿನಿಮಾವೊಂದು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  ನನ್ನ ಮನೆಯಲ್ಲಿ ಚಿರುಗೆ ಒಂದು ದೇಗುಲ ಮಾಡಿ ಅಲ್ಲಿ ಅವನ ಫೋಟೋ ಇಟ್ಟಿದೀನಿ | Pannaga Bharana | Chiranjeevi Sarja

  ಇನ್ನು ಮಲಯಾಳಂ ನಟ ಜಯರಾಂ ನಟಿಸಿದ್ದ 'ಮಾರ್ಕೋನಿ ಮಥಾಯ್' ಚಿತ್ರದಲ್ಲಿ ವಿಜಯ್ ಸೇತುಪತಿ ಮಾಲಿವುಡ್ ಪ್ರವೇಶಿಸಿದ್ದರು. ಈ ಸಿನಿಮಾ 2019ರಲ್ಲಿ ತೆರೆಕಂಡಿತ್ತು.

  English summary
  Tamil Actor Vijay sethupathi and actress nithya menon pairing up in Director Indu's Next project in malayalam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X