ಅಮೆರಿಕಾದಲ್ಲಿ ಅಪರಿಚಿತ ವ್ಯಕ್ತಿಯ ಜೊತೆ ಪಾರ್ವತಿ ಮೆನನ್ ಸಲ್ಲಾಪ ; ಆ 8 ಗಂಟೆಯ ರಹಸ್ಯ ಹೇಳಿದ ಮಿಲನಾ ನಟಿ
ಬದಲಾದ ಈ ಕಾಲದಲ್ಲಿ ಪ್ರೀತಿಯ ವ್ಯಾಖ್ಯಾನ ಕೂಡ ಬದಲಾಗಿದೆ. ಒಂದು ಕಾಲದಲ್ಲಿ ವಿಧಿಲಿಖಿತ ಎಂದು ಕರೆಯಲ್ಪಡುತ್ತಿದ್ದ ಈ ಪ್ರೀತಿ ಇಂದು ಮೊಬೈಲ್ ಮೂಲಕ ನಿರ್ಧಾರವಾಗುತ್ತಿದೆ. ತಂತ್ರಜ್ಞಾನ ಪ್ರೀತಿಯನ್ನು ಕೂಡ ಡಿಜಿಟಲೀಕರಣಗೊಳಿಸಿದೆ. ಮೊದಲಾದರೆ ನಮ್ಮದು ಲವ್ ಅಟ್ ಫಸ್ಟ್ ಸೈಟ್ ಎಂದು ಹೇಳುವವರು ಇದ್ದರು. ಆದರೆ ಈಗ ಪ್ರೀತಿ ಕಾಕತಾಳೀಯ ಅಲ್ಲ. ಯಾರು ಬೇಕು ಯಾರು ಬೇಡ ಎಂಬ ಆಯ್ಕೆಯನ್ನು ಮೊಬೈಲ್ ನೀಡಿದೆ.
ಅಣಬೆಯಂತೆ ಹುಟ್ಟಿಕೊಂಡಿರುವ ಡೇಟಿಂಗ್ ಆಪ್‌ಗಳು ಈಗ ಕೇವಲ ಒಂಟಿತನವನ್ನು ಹೊಗಲಾಡಿಸುವ ಸಾಧನಗಳಾಗಿ ಉಳಿದಿಲ್ಲ. ಬದಲಿಗೆ ಹಲವರ ಪಾಲಿಗೆ ದಾರಿ ದೀಪಗಳಾಗಿವೆ. ಹಣ-ಹೆಸರು-ಕೀರ್ತಿ ಹೊಂದಿರುವವರು ಕೂಡ ಈಗ ತಮ್ಮ ಸಂಗಾತಿಯನ್ನು ಈ ಡಿಜಿಟಲ್ ಲೋಕದಲ್ಲಿಯೇ ಹುಡುಕುತ್ತಿದ್ದಾರೆ. ಬಣ್ಣದ ಬದುಕು ಕೂಡ ಇದರಿಂದ ಹೊರತಾಗಿಲ್ಲ.

ಈ ಹಿಂದೆ ಎಲ್ಲ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಥವಾ ಮಬ್ಬುಗತ್ತಲಿನ ಪಾರ್ಟಿಗಳಲ್ಲಿ ಪ್ರೀತಿಯಲ್ಲಿ ಬೀಳುತ್ತಿದ್ದ ನಾಯಕ-ನಾಯಕಿಯರು ಕೂಡ ಈಗ ಡೇಟಿಂಗ್ ಆಪ್‌ನಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವಂತಹ ವ್ಯಕ್ತಿಗಳನ್ನು ಹುಡುಕುತ್ತಿದ್ದಾರೆ. ತಮ್ಮ ತಾರಾ ವರ್ಚಸ್ಸಿನ ಭಾರ ಇಳಿಸಿ ಅನಾಮಧೇಯ ವ್ಯಕ್ತಿಯನ್ನು ಭೇಟಿಯಾಗುತ್ತಿದ್ದಾರೆ. ಉದಾಹರಣೆಗೆ ಪಾರ್ವತಿ ಮೆನನ್.
ಹೌದು, ಪಾರ್ವತಿ ಮೆನನ್ ಅಲಿಯಾಸ್ ಪಾರ್ವತಿ ತಿರುವೋತ್ತು .. ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ಮಳೆ ಬರಲಿ ಮಂಜೂ ಇರಲಿ.. ಪೃಥ್ವಿ.. ಮತ್ತು ಅಂದರ್ ಬಾಹರ್ ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರ ಹೃದಯವನ್ನೂ ಗೆದ್ದರು.
ಇನ್ನು. ಮಾಲಿವುಡ್‌ನ ಈ ಬಟ್ಟಲುಗಣ್ಣಿನ ಚೆಲುವೆ ಕೇವಲ ತಮ್ಮ ಅಭಿನಯದಿಂದ ಮಾತ್ರ ಹೆಸರು ಸಂಪಾದಿಸಲಿಲ್ಲ. ಬದಲಿಗೆ ತಮ್ಮ ನೇರ ಹಾಗೂ ದಿಟ್ಟ ನುಡಿಗಳಿಂದ ಕೂಡ ಹೆಸರುವಾಸಿಯಾದವರು. ಇಂಥಾ ಪಾರ್ವತಿ ಮೆನನ್ ತಮ್ಮ ಡೇಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಅಮೆರಿಕಾದಲ್ಲಿ ಗುರುತು ಪರಿಚಯ ಇರದ ವ್ಯಕ್ತಿ ಜೊತೆ 8 ಗಂಟೆ ಕಾಲ ಕಳೆದಿದ್ದೆ ಎಂದಿದ್ದಾರೆ.
''ಹೌಟರ್‌ಫ್ಲೈ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪಾರ್ವತಿ ಮೆನನ್ 2021ರಲ್ಲಿ ಬ್ರೇಕಪ್ ಆದ ನಂತರ ನಾನು ಸುಮಾರು ವರ್ಷ ಸಿಂಗಲ್ ಆಗಿದ್ದೇ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ನನ್ನ ಗೆಳತಿಯ ನನ್ನನ್ನೂ ಈ ಡೇಟಿಂಗ್ ಆಪ್‌ಗಳ ಪ್ರಪಂಚಕ್ಕೆ ನೂಕಿದಳು ಎಂದು ಹೇಳಿರುವ ಪಾರ್ವತಿ, ಆ ನನ್ನ ಸ್ನೇಹಿತೆಯೇ ನನಗೆ ''ಟಿಂಡರ್''.. ''ಬಂಬಲ್'' ಮತ್ತು ''ರಾಯಾ'' ಅಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಕೊಟ್ಟಳು ಎಂದು ಹೇಳಿದ್ದಾರೆ. ಆದರೆ, ನನಗೆ ಎಲ್ಲದಕ್ಕಿಂತ ''ಫೀಲ್ಡ್'' ಆ್ಯಪ್ ತುಂಬಾ ಇಷ್ಟವಾಯ್ತು ಎಂದು ಹೇಳಿದ್ದಾರೆ.

ಮುಂದುವರೆದು ನಾನು ಆಗ ಕೆಲಸದ ಪ್ರಯುಕ್ತ ಲಾಸ್ ಏಂಜಲೀಸ್‌ನಲ್ಲಿದ್ದೆ, ಆ ಸಮಯದಲ್ಲಿ ಬಾಕಿ ಉಳಿದ ಮೂರು ದಿನದಲ್ಲಿ "ಫೀಲ್ಡ್'' ಆಪ್‌ನಲ್ಲಿ ಪ್ರಯತ್ನ ಮಾಡೋಣ ಎಂಬ ಭಾವನೆ ಬಂತು ಎಂದು ಹೇಳಿರುವ ಪಾರ್ವತಿ ವ್ಯಕ್ತಿಯೊಬ್ಬನನ್ನು ಹುಡುಕಿ ಹಾಯ್ ಎಂದು ಮೆಸೇಜ್ ಮಾಡಿದೆ, ನನಗೆ ಇದೆಲ್ಲ ಅಭ್ಯಾಸ ಇಲ್ಲವಾದ್ದರಿಂದ ಆ ನಂತರ ನೇರವಾಗಿ ನಾವು ಕಾಫಿ ಕುಡಿಯೋಣವೇ..? ಎಂದು ಕೇಳಿದೆ ಎಂದು ಹೇಳಿದ್ದಾರೆ.
ನನ್ನ ಈ ಮೆಸೇಜ್‌ಗೆ ಆ ವ್ಯಕ್ತಿ ಕೂಡ ಅಚ್ಚರಿಗೊಂಡಿದ್ದ, ಸಾಮಾನ್ಯವಾಗಿ ವಾರಾನುವಾರ ಮೆಸೇಜ್ ಮಾಡ್ತಾರೆ ಆ ನಂತರ ಸಿಕ್ತಾರೆ ಎಂದು ನನಗೆ ಮೆಸೇಜ್ ಮಾಡಿದ್ದ ಎಂದು ಹೇಳಿರುವ ಪಾರ್ವತಿ ನನ್ನ ಹತ್ತಿರ ಅಷ್ಟೆಲ್ಲ ಸಮಯ ಇಲ್ಲ, ನಾನು ಮೂರು ದಿನದಲ್ಲಿ ಮರಳಿ ಹೋಗುತ್ತೇನೆ ಎಂದು ಅವನಿಗೆ ಹೇಳಿದ್ದೆ, ಕೊನೆಗೆ ನಿಮ್ಮ ಫೋಟೊ ಕೂಡ ಇಲ್ಲ ಅದನ್ನಾದರೂ ಕಳುಹಿಸಿ ಎಂದು ಹೇಳಿದ ಆಗ ನಾನು ನನ್ನ ಫೋಟೊ ಕಳುಹಿಸಿದೆ, ಆ ನಂತರ ಅವನನ್ನು ಭೇಟಿಯಾದೆ ಎಂದು ನೆನಪು ಮಾಡಿಕೊಂಡಿದ್ದಾರೆ.
ಅಮೆರಿಕಾದ ನಿಕರಾಗುವಾದಲ್ಲಿ ಆತ ಎಂಜಿನಿಯರ್ ಆಗಿದ್ದ ಇಷ್ಟೇ ಅಲ್ಲ ಆತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕೂಡ ಹೌದು ಎಂದು ಹೇಳಿರುವ ಪಾರ್ವತಿ ಭೇಟಿಯಾಗೋಣ ಎಂದು ನಾನೇನೋ ಹೇಳಿದೆ ಆದರೆ ಆ ನಂತರ ನನಗೆ ಭಯ ಶುರುವಾಯ್ತು. ಖಾಸಗಿ ಸ್ಥಳದಲ್ಲಿ ಸಿಗುವುದು ಬೇಡ ಎಂದು ಎನಿಸಿತ್ತು ಹೀಗಾಗಿ ನಾನು ಮಾಲ್‌ನಲ್ಲಿ ಸಿನಿಮಾ ನೋಡೋಣ ಎಂದು ಅವನನ್ನು ಮಾಲ್‌ಗೆ ಕರೆದಿದ್ದೆ ಎಂದಿದ್ದಾರೆ.
ನೋಡಲು ಫ್ರೆಂಡ್ಸ್ ಸೀರಿಸ್‌ನ ರಿಚರ್ಡ್‌ನಂತೆ ಆ ವ್ಯಕ್ತಿ ಇದ್ದ ಎಂದು ವರ್ಣನೆ ಮಾಡಿರುವ ಪಾರ್ವತಿ ಆ ದಿನ ನನಗೆ ಪಿರಿಯಡ್ಸ್ ಆಗಿತ್ತು. ತುಂಬಾ ಸುಸ್ತಾಗಿತ್ತು. ಮಾಲ್‌ನಲ್ಲಿ ಅವನಿಗಾಗಿ ಕಾಯುತ್ತಿರುವಾಗ ನಾನೊಂದು ಹಾಟ್ ಚಾಕೊಲೇಟ್ ಆರ್ಡರ್ ಮಾಡಿದೆ ಎಂದು ಹೇಳಿದ್ದಾರೆ. ಅವನು ನಡೆದುಕೊಂಡು ಬರುವಾಗ ನಾನು ಕಣ್ಣಿನಿಂದ ಲೆನ್ಸ್ ತೆಗೆದು ಕನ್ನಡಕ ಹಾಕಿಕೊಳ್ಳುತ್ತಿದ್ದೆ ಅದನ್ನು ಅವನು ನೋಡಿದ ಎಂದು ಹೇಳಿದ್ದಾರೆ. ನನ್ನಂತೆ ಅವನು ಕೂಡ ಕನ್ನಡಕ ಧರಿಸಿದ್ದ ಎಂದಿದ್ದಾರೆ.
ಆ ನಂತರ ನಾವು ''ಕೈಂಡ್ಸ್ ಆಫ್ ಕೈಂಡ್‌ನೆಸ್'' ಸಿನಿಮಾ ನೋಡಿದೆವು, ಮೊದಲ ಭೇಟಿಯಲ್ಲಿ ಇದ್ದಕ್ಕಿಂತ ವಿಚಿತ್ರವಾದ ಸಿನಿಮಾ ಮತ್ತೊಂದಿಲ್ಲ ಎಂದು ಹೇಳಿರುವ ಪಾರ್ವತಿ ಆ ದಿನ 8 ಗಂಟೆ ನಾನು ಅವನ ಜೊತೆ ಇದ್ದೆ ಎಂದು ಹೇಳಿದ ಪಾರ್ವತಿ ಆ ವ್ಯಕ್ತಿ ತುಂಬಾನೇ ಸೌಜನ್ಯದಿಂದ ನಡೆದುಕೊಂಡಿದ್ದ ಕೊನೆಯಲ್ಲಿ ನನ್ನನ್ನು ಹೋಟೆಲ್‌ಗೆ ಕೂಡ ಡ್ರಾಪ್ ಮಾಡಿದ ಎಂದು ಹೇಳಿದ್ದಾರೆ. ನನ್ನನ್ನೂ ಡೇಟ್‌ಗೆ ಕರೆದೊಯ್ದ ಮತ್ತು ಡ್ರಾಪ್ ಮಾಡಿದ ಮೊದಲ ವ್ಯಕ್ತಿ ಆತನೇ ಎಂದು ಕೂಡ ಪಾರ್ವತಿ ಹೇಳಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ.


Click it and Unblock the Notifications











