ಎಲ್ಲಾ ಇಂಡಸ್ಟ್ರಿಗಳು 1000 ಕೋಟಿ ಗಳಿಸುತ್ತಿದ್ರೆ ಈ ಚಿತ್ರರಂಗಕ್ಕೆ ಇನ್ನೂ 200 ಕೋಟಿ ಚಿತ್ರವನ್ನೂ ನೀಡಲಾಗಿಲ್ಲ!

ಈ ಹಿಂದೆ ಚಿತ್ರರಂಗಗಳ ಯಶಸ್ಸನ್ನು ಎಷ್ಟು ಚಿತ್ರಗಳು ಗೆದ್ದಿವೆ ಎಂಬುದರ ಮೇಲೆ ಅಳೆಯಲಾಗುತ್ತಿತ್ತು. ಯಾವ ಇಂಡಸ್ಟ್ರಿಯ ಚಿತ್ರಗಳು ಹೆಚ್ಚು ಶತದಿನೋತ್ಸವವನ್ನು ಆಚರಿಸಿವೆ ಎಂಬುದರ ಮೇಲೆ ಇದನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ, ಚಿತ್ರಗಳು ಎಷ್ಟು ಕೋಟಿ ಗಳಿಸಿದವು ಎಂಬುದಷ್ಟೇ ಲೆಕ್ಕ. ಅದರಲ್ಲೂ ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟಿಕೊಂಡ ಮೇಲಂತೂ ಕಲೆಕ್ಷನ್ ಮುಖ್ಯವಾಗಿಬಿಟ್ಟಿದೆ.

ವರ್ಷವೊಂದರಲ್ಲಿ ಬಿಡುಗಡೆಯಾದ ಯಾವ ಚಿತ್ರ ದೇಶದಲ್ಲಿ ಅತಿಹೆಚ್ಚು ಗಳಿಸಿ ವರ್ಷದ ಬಿಗ್ಗೆಸ್ಟ್ ಗ್ರಾಸರ್ ಎನಿಸಿಕೊಂಡಿತು ಎಂಬುದನ್ನು ನಿರ್ಧರಿಸಲಾಗುತ್ತಿದೆ. ಹೀಗೆ ಪ್ಯಾನ್ ಇಂಡಿಯಾ ಯುಗದಲ್ಲಿ ಒಂದು ಇಂಡಸ್ಟ್ರಿ ಒಳಗೆ ಇರುವು ಪೈಪೋಟಿಗಿಂತ ಬೇರೆ ಇಂಡಸ್ಟ್ರಿಗಳ ಜತೆ ಇರುವ ಪೈಪೋಟಿ ದೊಡ್ಡ ಮಟ್ಟದಲ್ಲಿದೆ. ಹೌದು, ಈಗ ಭಾಷೆಯನ್ನೂ ಮೀರಿ ಪೈಪೋಟಿ ಏರ್ಪಟ್ಟಿದೆ. ಈ ಹಿಂದೆ ಕನ್ನಡ ಚಿತ್ರಗಳು ಕನ್ನಡದ ಚಿತ್ರಗಳ ಜತೆ ಮಾತ್ರ ಪೈಪೋಟಿಗೆ ಇಳಿಯುತ್ತಿದ್ದವು. ಆದರೆ ಈಗ ಬೇರೆ ಭಾಷೆಯ ಚಿತ್ರಗಳ ಜತೆಗೂ ಸಹ ಪೈಪೋಟಿಗೆ ಇಳಿಯುತ್ತಿವೆ.

When all industries are giving 1000 crore films Mollywood failed to give 200 crore club movie

ಹೀಗೆ ಪೈಪೋಟಿ ಏರ್ಪಟ್ಟ ಬಳಿಕ ಹಲವು ಸ್ಟಾರ್‌ಗಳೂ ಸಹ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಹಳೆ ಶೈಲಿಯ ಸಾಮಾನ್ಯ ಕಮರ್ಷಿಯಲ್ ಸಿನಿಮಾಗಳನ್ನು ಮಾಡುವುದನ್ನು ಬಿಟ್ಟು ಹೊಸ ಹೊಸ ಪ್ರಯತ್ನಗಳಿಗೆ ಕೈಹಾಕುತ್ತಿದ್ದಾರೆ. ಭಿನ್ನ ವಿಭಿನ್ನ ಸಿನಿಮಾಗಳನ್ನು ನೀಡಿ ನಾವೂ ಸಹ ನೂರಾರು ಕೋಟಿ ಕಲೆಕ್ಷನ್ ಮಾಡಿ ಗೆಲ್ಲಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಹೀಗೆ ಪೈಪೋಟಿ ಹೆಚ್ಚಾದಂತೆ ಸಿನಿಮಾದ ಕಲೆಕ್ಷನ್ ಸಹ ಹೆಚ್ಚಾಗಿದೆ. ಇದಕ್ಕೆ ತಾಜಾ ಉದಾಹರಣೆ ಕಳೆದ ವರ್ಷ ಬಿಡುಗಡೆಗೊಂಡ ಸಿನಿಮಾಗಳು. ಈ ಹಿಂದೆ 300 ಕೋಟಿಯನ್ನೂ ಸಹ ದಾಟಲಾಗದೇ ಒದ್ದಾಡುತ್ತಿದ್ದ ಹಲವು ಇಂಡಸ್ಟ್ರಿಗಳು ಸರಾಗವಾಗಿ 500, 1000 ಕೋಟಿ ಕ್ಲಬ್ ಸಿನಿಮಾಗಳನ್ನು ನೀಡಿ ಅಬ್ಬರಿಸಿವೆ. ಇಪ್ಪತ್ತು ಕೋಟಿ, ಮೂವತ್ತು ಕೋಟಿ ಗಳಿಕೆ ಮಾಡುವಷ್ಟರಲ್ಲಿ ತಮ್ಮ ಓಟವನ್ನು ಮುಗಿಸುತ್ತಿದ್ದ ಸಾಧಾರಣ ನಟರ ಸಿನಿಮಾಗಳು ಸುಲಭವಾಗಿ ನೂರು ಕೋಟಿ ಕಲೆಕ್ಷನ್ ಮಾಡಿವೆ.

ಹೀಗೆ ಕಳೆದ ವರ್ಷ ವಿವಿಧ ಇಂಡಸ್ಟ್ರಿಗಳು ಅಬ್ಬರಿಸಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಅಬ್ಬರಿಸಿದ್ದರೆ, ದಕ್ಷಿಣ ಭಾರತದ ಆ ಒಂದು ಚಿತ್ರರಂಗ ಮಾತ್ರ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗುತ್ತಿಲ್ಲ. ಇತರೆ ಚಿತ್ರರಂಗಗಳ ಹಾಗೆ 500, 1000 ಕೋಟಿ ಗಳಿಕೆ ಮಾಡುವಂತಹ ಸಿನಿಮಾಗಳನ್ನು ನೀಡಲಾಗುತ್ತಿಲ್ಲ. ಹೌದು, ಆ ಚಿತ್ರರಂಗ ಬೇರೆ ಯಾವುದೂ ಅಲ್ಲ, ಕಂಟೆಂಟ್ ಇರುವ ಚಿತ್ರಗಳಿಗೆ ಹೆಸರು ವಾಸಿಯಾಗಿರುವ ಮಲಯಾಳಂ ಚಿತ್ರರಂಗ.

When all industries are giving 1000 crore films Mollywood failed to give 200 crore club movie

ಹೌದು, ಮಲಯಾಳಂ ಚಿತ್ರರಂಗ ಸಾಲು ಸಾಲು ಹಿಟ್ ಚಿತ್ರಗಳನ್ನು, ಬೇರೆ ಭಾಷೆಯವರು ರಿಮೇಕ್ ರೈಟ್ಸ್ ಖರೀದಿಸಲು ಮುಗಿ ಬೀಳುವಂತಹ ಚಿತ್ರಗಳನ್ನು ತಯಾರಿಸುತ್ತಲೇ ಬರುತ್ತಿದೆ. ಆದರೂ ಸಹ ಗಳಿಕೆಯಲ್ಲಿ ಮಾತ್ರ ದೊಡ್ಡ ಮಟ್ಟದ ಅಭಿವೃದ್ಧಿಯನ್ನು ಮಲಯಾಳಂ ಚಿತ್ರರಂಗ ಕಾಣುತ್ತಿಲ್ಲ. ಕಳೆದ ವರ್ಷ ಜಯ ಜಯ ಜಯ ಜಯ ಹೇ, ಭೀಷ್ಮಂ ಪರ್ವಂ, ಹೃದಯಂ, ಜನ ಗಣ ಮನ ರೀತಿಯ ಸೂಪರ್ ಬ್ಲಾಕ್‌ಬಸ್ಟರ್ ಚಿತ್ರಗಳು ಬೇರೆ ಭಾಷೆಯ ಸಿನಿ ರಸಿಕರ ಗಮನವನ್ನು ತನ್ನತ್ತ ಸೆಳೆದರೂ ಸಹ ಯಾವ ಚಿತ್ರಗಳೂ ನೂರು ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಲೇ ಇಲ್ಲ.

ಹೀಗೆ ಕಳೆದ ವರ್ಷ ಉಳಿದ ಚಿತ್ರರಂಗಗಳು ನೂರು ಕೋಟಿ, ಸಾವಿರ ಕೋಟಿ ಎಂದು ಗಳಿಕೆ ಮಾಡಿದ್ದರೆ, ಮಲಯಾಳಂ ಚಿತ್ರರಂಗ ಮಾತ್ರ ಗಳಿಕೆಯಲ್ಲಿ ಹಿಂದುಳಿದಿದೆ. 2016ರಲ್ಲಿಯೇ ಮೋಹನ್‌ಲಾಲ್ ನಟನೆಯ 'ಪುಲಿ ಮುರುಗನ್' ಮೂಲಕ ನೂರು ಕೋಟಿ ಚಿತ್ರವನ್ನು ನೀಡಿದ್ದ ಮಲಯಾಳಂ ಚಿತ್ರರಂಗ ಆ ಚಿತ್ರದ ದಾಖಲೆಯನ್ನು ಇನ್ನೂ ಸಹ ಮುರಿಯಲಾಗದೇ ಒದ್ದಾಡುತ್ತಿದೆ.

ಮಲಯಾಳಂ ಚಿತ್ರರಂಗದ ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 5 ಚಿತ್ರಗಳು ಈ ಕೆಳಕಂಡಂತಿವೆ.

1. ಪುಲಿ ಮುರುಗನ್ ( 2016 ) - 152 ಕೋಟಿ ಗ್ರಾಸ್ ಕಲೆಕ್ಷನ್

2. ಲೂಸಿಫರ್ ( 2019 ) - 127 ಕೋಟಿ ಗ್ರಾಸ್ ಕಲೆಕ್ಷನ್

3. ಭೀಷ್ಮ ಪರ್ವಂ ( 2022 ) - 87 ಕೋಟಿ ಗ್ರಾಸ್ ಕಲೆಕ್ಷನ್

4. ಕುರುಪ್ ( 2021 ) - 81 ಕೋಟಿ ಗ್ರಾಸ್ ಕಲೆಕ್ಷನ್

5. ದೃಶ್ಯಂ ( 2013 ) - 75 ಕೋಟಿ ಗ್ರಾಸ್ ಕಲೆಕ್ಷನ್

More from Filmibeat

English summary
When all industries are giving 1000 crore films Mollywood is struggling to give 200 crore club movie. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X