ಶಕೀಲಾ ಸಂಪಾದನೆಯಲ್ಲಾ ಯಾರು ಲಪಟಾಯಿಸಿದರು?
ಬೆಡ್ ರೂಂ ಸನ್ನಿವೇಶಗಳಲ್ಲಿ ಅಭಿನಯಿಸುತ್ತಿರಬೇಕಾದರೆ- ಶೃಂಗಾರ ಭಾವನೆ ಮೂಡುತ್ತದೆಯೇ ಎಂದು ಬಹಳಷ್ಟು ಮಂದಿ ಕೇಳುತ್ತಾರೆ. ಶೂಟಿಂಗ್ ನಡೆಯಬೇಕಾದರೆ ಇಡೀ ಚಿತ್ರತಂಡ ಅಲ್ಲಿರುತ್ತದೆ. ಎಲ್ಲರೂ ನೋಡುತ್ತಿರಬೇಕಾದರೆ ಶೃಂಗಾರ ಭಾವನೆ ಹೇಗೆ ಮೂಡಲು ಸಾಧ್ಯ?
ಮಹಿಳೆಯರ ಮಟ್ಟಿಗೆ ಶೃಂಗಾರ ಎಂಬುದು ಶರೀರಕ್ಕೆ ಸಂಬಂಧಿಸಿದ್ದು ಮಾತ್ರವಷ್ಟೇ ಅಲ್ಲ. ಮಾನಸಿಕ ಸಾನಿಧ್ಯವಿಲ್ಲದಿದ್ದರೆ ಸೆಕ್ಸನ್ನು ಆನಂದಿಸಲಾರರು. ನಾನು ಚಿತ್ರಗಳಲ್ಲಿ ಮಾಡುವುದು ಕೇವಲ ಅಭಿನಯ. ನಟಿಸುತ್ತಿದ್ದಷ್ಟು ದಿನವೂ ನನಗೆ ಯಾವುದೇ ಲೈಂಗಿಕ ಬಯಕೆ ಆಗಲೇ ಇಲ್ಲ.
ನನ್ನ ದೊಡ್ಡಕ್ಕ ನೂರ್ಜಹಾನ್ ಹಾಗೂ ನಾನು ದಿವಾಳಿಯಾಗಲು ಕಾರಣ...ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಮಣಿ ನಾನು. ನನ್ನ ಸಂಪಾದನೆಯಲ್ಲವನ್ನೂ ನನ್ನಕ್ಕ ಲಪಟಾಯಿಸಿದಳು.

ನನ್ನಕ್ಕನೇ ನನ್ನ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ನಾನು ಆಕೆಯನ್ನು ಸಂಪೂರ್ಣವಾಗಿ ನಂಬಿದೆ. ಚಿಕ್ಕಂದಿನಿಂದಲೂ ಆಕೆ ನನ್ನ ಜೊತೆಗೇ ಇದ್ದರು. ಆದರೆ ಈ ರೀತಿ ಮಾಡುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಒಂದು ಹಂತದಲ್ಲಿ ಚಿತ್ರಗಳಿಂದ ಬೇಸತ್ತಿದ್ದೆ. ಒಂದು ಲೊಕೇಷನ್ ನಿಂದ ಇನ್ನೊಂದು ಕಡೆಗೆ ವಿಮಾನಗಳಲ್ಲಿ ಪ್ರಯಾಣಿಸುವುದು. ಕಣ್ತುಂಬ ನಿದ್ದೆ ಇಲ್ಲದೆ ಸಾಕಪ್ಪಾ ಸಾಕು ಅನ್ನಿಸುತ್ತಿತ್ತು.
ನಾನು ಒಂದು ಬ್ರೇಕ್ ತೆಗೆದುಕೊಳ್ಳಬೇಕೆಂದಿದ್ದೆ. ಮದುವೆಯಾಗಿ ಹಾಯಾಗಿ ಜೀವನ ಕಳೆಯಬೇಕು ಎಂದು ನಮ್ಮ ತಾಯಿ ಹಾಗೂ ನೂರ್ಜಹಾನ್ ಬಳಿ ಹೇಳಿದೆ. ಅವರಿಬ್ಬರೂ ಶಾಕ್ ಆದರು. ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದರೆ ನಾನೇನೋ ತಪ್ಪು ಮಾಡುತ್ತಿದ್ದೇನೆ ಎಂಬಂತೆ ನೋಡಿದರು. ಆ ರೀತಿಯ ದಡ್ಡತನದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡ ಎಂದು ಅಕ್ಕ ಬುದ್ಧಿವಾದ ಹೇಳಿದರು.
ಅವರು ಕೇವಲ ನನ್ನ ಹಣವನ್ನು ಮಾತ್ರ ಪ್ರೀತಿಸಿದರೆಂದು, ನನ್ನ ಭವಿಷ್ಯದ ಬಗ್ಗೆ ಅವರಿಗೆ ಯಾವುದೇ ಆಲೋಚನೆ ಇಲ್ಲ ಎಂದು ಗೊತ್ತಾಯಿತು. ನನಗೆ ಬಹಳ ಕೋಪ ಬಂತು. ನಾನು ಸಂಪಾದಿಸಿದ ಹಣವೆಲ್ಲಾ ವಾಪಸು ಕೊಡು ಎಂದೆ. ಹಣವೆಲ್ಲಾ ಮನೆಗೆ ಖರ್ಚಾಯಿತು ಎಂದು ಕೈ ಎತ್ತಿದರು ನೂರ್ಜಹಾನ್. ನನಗೆ ಕರೆಂಟ್ ಶಾಕ್ ಹೊಡೆದಷ್ಟೇ ಆಘಾತವಾಯಿತು.


Click it and Unblock the Notifications











