47 ವರ್ಷ ವಯಸ್ಸಾದರೂ ಮದುವೆಯಾಗಿಲ್ಲ ಏಕೆ? ಇದು ಶಕೀಲಾ ಪ್ರೇಮಕತೆ

By ಫಿಲ್ಮೀಬೀಟ್ ಡೆಸ್ಕ್

ಬಿ ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿಯ ಶಿಖರಕ್ಕೇರಿದ ನಟಿ ಶಕೀಲಾ. ಈ ನಟಿಯ ಸಿನಿಮಾಗಳು ಬರುತ್ತಿದ್ದಾವೆಂದರೆ ಮೋಹನ್‌ಲಾಲ್, ಮುಮ್ಮಟಿಯಂಥಹಾ ಸೂಪರ್ ಸ್ಟಾರ್‌ ಸಿನಿಮಾಗಳೇ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಳ್ಳುತ್ತಿದ್ದ ದಿನಗಳಿದ್ದವು.

Recommended Video

ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ... | Filmibeat Kannada

90-2000 ದಶಕದಲ್ಲಿ ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಶಕೀಲಾ ಅವರಷ್ಟು ಹಣ ಮತ್ತು ಖ್ಯಾತಿಗಳಿಸಿದ ಮತ್ತೊಬ್ಬ ನಟಿ ಭಾರತದಲ್ಲಿ ಇರಲಿಲ್ಲ. ಆದರೆ ಹಣ-ಖ್ಯಾತಿಯ ಜೊತೆಗೆ ಸಾಕಷ್ಟು ಮೂದಲಿಕೆಗಳಿಗೆ, ಕುಟುಂಬದಿಂದ ಬಹಿಷ್ಕಾರಕ್ಕೂ ಗುರಿಯಾಗಿದ್ದಾರೆ ಶಕೀಲಾ.

ಸಾಕಷ್ಟು ಹಣ, ಆಸ್ತಿ ಸಂಪಾದಿಸಿದ ಬಳಿಕ ಈಗ ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸುವುದು ಬಿಟ್ಟು ಸಿನಿಮಾ ನಿರ್ಮಾಣ, ಪೋಷಕ ಪಾತ್ರಗಳಲ್ಲಿ ನಟನೆಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿರುವ ಶಕೀಲಾಗೆ ಈಗ 47 ವರ್ಷ ವಯಸ್ಸು. ಆದರೆ ಈವರೆಗೆ ಮದುವೆ ಆಗಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಿದಾಗ ತಮ್ಮ ಭಗ್ನ ಪ್ರೇಮಕತೆ ಬಗ್ಗೆ ಹೇಳಿದ್ದಾರೆ.

ನನಗೆ ಪ್ರೀತಿಯ ಬಗ್ಗೆ ಅಪಾರ ಗೌರವ: ಶಕೀಲಾ

ನನಗೆ ಪ್ರೀತಿಯ ಬಗ್ಗೆ ಅಪಾರ ಗೌರವ: ಶಕೀಲಾ

ತಮ್ಮ ಪ್ರೇಮಕತೆಯ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಶಕೀಲಾ, 'ನನಗೆ ಪ್ರೀತಿಯ ಬಗ್ಗೆ ಅಪಾರ ಗೌರವ. ನನಗೆ ಪ್ರೀತಿಯ ಅವಶ್ಯಕತೆ ಮುಂಚಿನಿಂದಲೂ ಕಾಡಿತ್ತು. ಪ್ರೀತಿಗೆ ಬಹಳ ಪ್ರಾಮುಖ್ಯತೆಯನ್ನು ನಾನು ನೀಡುತ್ತಿದ್ದೆ. ನಾನು ಹದಿಹರೆಯದಲ್ಲಿದ್ದಾಗಿನಿಂದಲೂ ಪ್ರೀತಿಸುತ್ತಲೇ ಇದ್ದೀನಿ' ಎಂದಿದ್ದಾರೆ.

'ಸುಮಾರು ಹದಿನೈದು ಜನ ನನ್ನ ಜೀವನದಲ್ಲಿ ಬಂದು ಹೋಗಿದ್ದಾರೆ'

'ಸುಮಾರು ಹದಿನೈದು ಜನ ನನ್ನ ಜೀವನದಲ್ಲಿ ಬಂದು ಹೋಗಿದ್ದಾರೆ'

'ನನ್ನ ಜೀವನದ ಒಂದೊಂದು ಕಾಲಘಟ್ಟದಲ್ಲಿ ಒಬ್ಬೊಬ್ಬರು ಪ್ರೇಮಿಗಳು ನನ್ನ ಜೀವನದಲ್ಲಿ ಬಂದಿದ್ದಾರೆ. ನಾನು ಹದಿಮೂರು ವರ್ಷದವಳಾಗಿದ್ದಾಗಲೇ ಒಬ್ಬನನ್ನು ಪ್ರೀತಿಸಿದ್ದೆ. ನಟಿಯಾದ ಮೇಲೂ ಪ್ರೀತಿಸಿದ್ದೆ. ಸುಮಾರು ಹದಿನೈದು ಮಂದಿ ಪುರುಷರು ಈವರೆಗೆ ನನ್ನ ಬಾಳಲ್ಲಿ ಬಂದು ಹೋಗಿದ್ದಾರೆ' ಎಂದಿದ್ದಾರೆ ಶಕೀಲಾ.

ಒಬ್ಬೊಬ್ಬರಿಗೆ ಒಂದೊಂದು ಉದ್ದೇಶವಿತ್ತು: ಶಕೀಲಾ

ಒಬ್ಬೊಬ್ಬರಿಗೆ ಒಂದೊಂದು ಉದ್ದೇಶವಿತ್ತು: ಶಕೀಲಾ

'ನಾನು ನಟಿಯಾದ ಮೇಲೆ ನನ್ನ ಜೀವನಕ್ಕೆ ಬಂದ ಹಲವರು ಬೇರೆ ಬೇರೆ ಉದ್ದೇಶಗಳನ್ನು ಇಟ್ಟುಕೊಂಡು ಬಂದಿದ್ದರು. ಕೆಲವರಿಗೆ ನನ್ನ ಆಸ್ತಿಯ ಮೇಲೆ ಕಣ್ಣಿತ್ತು. ಕೆಲವರಿಗೆ 'ಬೇರೆ ಏನೋ' ಬೇಕಿತ್ತು. ಹೀಗೆ ಅವರ ಉದ್ದೇಶಗಳು ಅರ್ಥವಾದ ಮೇಲೆ ಅಥವಾ ಅವರ ಉದ್ದೇಶಕ್ಕೆ ತಕ್ಕಂತೆ ನಾನು ಸ್ಪಂದಿಸದೇ ಇದ್ದಾಗ ಬಿಟ್ಟು ಹೋಗಿಬಿಟ್ಟರು' ಎಂದಿದ್ದಾರೆ ಶಕೀಲಾ.

ಒಟ್ಟಿನಲ್ಲಿ ಮದುವೆ ಆಗಲೇ ಇಲ್ಲ: ಶಕೀಲಾ

ಒಟ್ಟಿನಲ್ಲಿ ಮದುವೆ ಆಗಲೇ ಇಲ್ಲ: ಶಕೀಲಾ

'ಕೆಲವು ಸಂಬಂಧಗಳು ಮದುವೆಯವರೆಗೂ ಬಂದವು. ಆದರೆ ನನ್ನ ವೃದ್ಧ ಅಮ್ಮನ ಬಗ್ಗೆ ತಕರಾರು ತೆಗೆದರು. ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಹೇಳಿದರು. ಇನ್ನು ಕೆಲವರ ಮನೆಯಲ್ಲಿ ನನ್ನನ್ನು ಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಒಟ್ಟಿನಲ್ಲಿ ಹೀಗೆಯೇ ಸಾಗಿ ನನಗೆ ಮದುವೆ ಆಗಲೇ ಇಲ್ಲ' ಎಂದು ನಗುತ್ತಲೇ ಹೇಳಿದ್ದಾರೆ ಶಕೀಲಾ.

More from Filmibeat

English summary
Why 47 Year old Actress Shakeela did not get married? Here is her love story. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X